ಮೈಸೂರು

ಕಿಲ್ಲಿಂಗ್‌ ಡಾಕ್ಟರ್‌ ವಿನಯ್‌ ಅಸಲಿ ಬಣ್ಣ ಬಯಲು ; ವೈದ್ಯನ ಬಲೆಗೆ ಸಿಲುಕಿ ನಲುಗಿದ ಮೂವರು ಸುಂದರಿಯರು!

ಮೈಸೂರು : ಪ್ರೀತಿ-ಪ್ರೇಮದ ಗುಂಗಲ್ಲಿ ಜೀವ ಕಳೆದುಕೊಂಡ ಜೀವಗಳು ಅದೆಷ್ಟೋ, ಜೀವನದಲ್ಲಿ ತೆಗೆದುಕೊಳ್ಳೋ ಒಂದೇ ಒಂದು ನಿರ್ಧಾರ ಬದುಕಿನ ಆಟವನ್ನೇ ಬದಲಿಸಿ ಬಿಡುತ್ತೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿಯಂತಿದೆ. ‌

ಎಂಬಿಬಿಎಸ್ ಓದಿ ವೈದ್ಯೆಯಾಗಿದ್ದ ಡಾ. ನಾಗಶ್ರೀ ಸಾವಿರಾರು ಜನರ ಕಷ್ಟಕ್ಕೆ ಸ್ಪಂದಿಸುವ ಕನಸು ಕಂಡಿದ್ದಳು. ಆದ್ರೆ ಜ್ಯೂನಿಯರ್ ವೈದ್ಯನ ಜೊತೆ ಪ್ರೇಮ ಪಾಶಕ್ಕೆ ಬಿದ್ದು 12 ವರ್ಷ ಜೀವಂತ ಶವವಾಗಿದ್ದಳು, ಇದೀಗ ಉಸಿರುಚೆಲ್ಲಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಡಾ. ನಾಗಶ್ರೀ ಆಯುರ್ವೇದ ವಿಭಾಗದಲ್ಲಿ ಪ್ರ್ಯಾಕ್ಟೀಸ್ ಮಾಡ್ತಿದ್ದರು. ಇದೇ ವೇಳೆ ಜೂನಿಯರ್ ವೈದ್ಯ ಡಾ. ವಿನಯ್ ಕುಮಾರ್ ಪರಿಚಯವಾಗಿದ್ದರು. ಡಾ. ನಾಗಶ್ರೀ ಜೊತೆಗೆ ಸಲುಗೆ ಪ್ರೀತಿ ನಾಟಕವಾಡಿ, ಬಳಿಕ ವಯಸ್ಸಿನಲ್ಲಿ ದೊಡ್ಡವಳು ಮನೆಯಲ್ಲಿ ಒಪ್ಪಲ್ಲ ಅಂತಾ ನಾಟಕವಾಡಿದ್ದಾನೆ. ಬಳಿಕ ಶ್ರೀರಂಗಪಟ್ಟಣ ಲಾಡ್ಜ್ ಗೆ ಕರೆದೊಯ್ದು ಸಾಯೋ ನಾಟಕವಾಡಿ, ಡಾ.ನಾಗಶ್ರೀಗೆ ನಿದ್ರೆ ಮಾತ್ರೆ ಹಾಗೂ ಓವರ್ ಡೋಸ್ ಇಂಜೆಕ್ಷನ್ ನೀಡಿದ್ದಾನೆ. ಈ ವೇಳೆ ತಾನೂ ಕೂಡ ಆತ್ಮಹತ್ಯೆ ಪ್ರಯತ್ನದ ನಾಟಕವಾಡಿ, ಬಳಿಕ ಘಟನೆಯಿಂದ ವೈದ್ಯೆ ಕೋಮಕ್ಕೆ ಜಾರಿದ್ದರು. ಒಂದೇ ದಿನದಲ್ಲಿ ಈತ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಆದರೆ, ಕೋಮದಿಂದ ಹೊರಬಂದು 12 ವರ್ಷಗಳ ಕಾಲ ಜೀವಂತ ಶವವಾಗಿದ್ದ ನಾಗಶ್ರೀ ನಿನ್ನೆ ನಿಧನ ಹೊಂದಿದ್ದಾರೆ.

ಡಾ. ವಿನಯ್ ಕುಮಾರ್ ನಿಂದ ಈ ಹಿಂದೆ ಪ್ರಾಣ ಕಳೆದುಕೊಂಡಿದ್ದ ಚಾರ್ಟೆಡ್ ಅಕೌಂಟೆಡ್ ಗೌತಮಿ ಹಿರೇಮಠ ಪ್ರಕರಣ ಕೋರ್ಟ್‌ನಲ್ಲಿದ್ದು, ಸದ್ಯ ಬಿ.ರಿಪೋರ್ಟ್ ಸಲ್ಲಿಕೆಯಾಗಿದೆ. ಇವೆಲ್ಲಾ ಆದ ಬಳಿಕ ಆರೋಪಿ ಜೂನಿಯರ್‌ ವೈದ್ಯ ವಿನಯ್‌ ಕುಮಾರ್‌, ವಿನೋದಾ ಎಂಬಾಕೆ ಜೊತೆ ಮದುವೆಯಾದರು. ಇಲ್ಲಿಯೂ ಸಹ ಆತನ ಕಿರುಕುಳ ತಾಳಲಾರದೆ ಪತ್ನಿ ವಿನೋದ ಆತನನ್ನು ಬಿಟ್ಟರು. ಹುಣಸೂರು ತಾಲ್ಲೂಕಿನ ಹನಗೂಡಿನಲ್ಲಿ ವೈದ್ಯ ವಿನಯ್ ಕುಮಾರ್ ಕ್ಲಿನಿಕ್ ನಡೆಸುತ್ತಿದ್ದರು. ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಲು ವಕೀಲ ಪಾಂಡು ಪೂಜಾರಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

ಏಳೆಂಟು ವರ್ಷ ಹಿಂದೆಯೇ ಎಚ್‌ ಪಿವಿ ಲಸಿಕೆ ಆರಂಭಿಸಿದ ವೈದ್ಯ!

ಪುರುಷರೂ ಎಚ್‌ಪಿವಿ ಲಸಿಕೆ ಪಡೆಯುವುದು ಸುರಕ್ಷಿತ: ಡಾ.ಯೋಗೇಂದ್ರಕುಮಾರ್ ಸಲಹೆ • ಹೇಮಂತ್‌ಕುಮಾ‌ರ್‌ ಮಂಡ್ಯ :  ಹೆಣ್ಣು ಮಕ್ಕಳನ್ನು ಬಾಧಿಸುತ್ತಿರುವ ಗರ್ಭಕಂಠ…

2 mins ago

ಕಾಳು ಮೆಣಸು ಕಳ್ಳತನ; ಆರೋಪಿಗಳ ಬಂಧನ

ತನಿಖೆ ವೇಳೆ ಮತ್ತಷ್ಟು ಕಳ್ಳತನ ಮಾಡಿದ ಪ್ರಕರಣಗಳು ಬೆಳಕಿಗೆ ವಿರಾಜಪೇಟೆ : ಕಾಫಿ ಕಣದಲ್ಲಿ ಒಣಗಿಸಲು ಇಟ್ಟಿದ ಕಾಳು ಮೆಣಸು…

12 mins ago

ಮೈಸೂರಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ

ನಗರಪಾಲಿಕೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡನೆ ಮೈಸೂರು : ರಾಜಧಾನಿ ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿಯ ಸಮಗ್ರ…

2 hours ago

ಹೈಕಮಾಂಡ್ ಹೇಳುವವರೆಗೂ ನಾನೇ ಸಿಎಂ‌ : ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದ ಎಲ್ಲ 224 ಮಂದಿ ಶಾಸಕರೂ ಮುಖ್ಯ ಮಂತ್ರಿಯಾಗಲು ಅರ್ಹರಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ…

2 hours ago

ಸರ್ಕಾರದ ಆದೇಶ ಕಡೆಗಣಿಸಿ ಏಕಾತ್ಮ ಮಾನವ ದರ್ಶನ ಸಮ್ಮೇಳನ

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಆಯೋಜಿಸಿದ್ದ ಮೂರು ದಿನಗಳ 'ಏಕಾತ್ಮ ಮಾನವ ದರ್ಶನ: ಭಾರತದ ವಿಶ್ವದೃಷ್ಟಿ' ಎಂಬ…

3 hours ago

ಮಳವಳ್ಳಿ ದರೋಡೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

ಮಳವಳ್ಳಿ : ತಾಲೂಕಿನ ಹಲಗೂರು ಸಮೀಪದ ಜೂಗನಹಳ್ಳಿ ವ್ಯಾಪ್ತಿಯ ತೋಟದ ಮನೆಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಚಿನ್ನ ದೋಚಿ ಪರಾರಿಯಾಗಿದ್ದ…

16 hours ago