ಮೈಸೂರು : ಹಿಂದಿ ಮಾತನಾಡುತ್ತಿದ್ದ ರೈಲ್ವೆ ಅಧಿಕಾರಿಗೆ ಕನ್ನಡ ಕಲಿಯುವಂತೆ ಕೇಂದ್ರ ಸಚಿವ ವಿ.ಸೋಮಣ್ಣ ಕ್ಲಾಸ್ ತಗೊಂಡಿದ್ದಾರೆ.
ಇಂದು ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ಸಚಿವ ಭೇಟಿ ನೀಡಿ ಪರಿಶೀಲನೆ ನಡೆಸಿ ರೈಲ್ವೆ ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ವೇಳೆ ಕನ್ನಡ ಬರದೇ ಹಿಂದಿಯಲ್ಲಿ ವಿವರಿಸಿದ ರೈಲ್ವೆ ಅಧಿಕಾರಿಯಾದ DRM ಶಿಲ್ಪಾ ಅಗರ್ವಾವಾಲ್ ಅವರಿಗೆ ಸಚಿವ ವಿ ಸೋಮಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕರ್ನಾಟಕಕ್ಕೆ ಬಂದು ಎಷ್ಟು ವರ್ಷ ಆಯ್ತಮ್ಮ? ಹೋಗಿ 3 ರೂಪಾಯಿ ಕೊಟ್ಟು ಒಂದ್ ಕನ್ನಡ ಪುಸ್ತಕ ತಗೊಂಡ್ ಕಲಿ.
ಕನ್ನಡ ಕಲಿಯೋಕೆ ಕೇವಲ 3 ರೂಪಾಯಿ ಇನ್ವೆಸ್ಟ್ ಮಾಡಮ್ಮ ಸಾಕು. ನಾನು ಡೆಲ್ಲಿಗೆ ಹೋಗಿ ಹಿಂದಿ ಕಲಿತಿದೀನಿ. ಮೈಸೂರಿಗೆ ಬಂದು ಎರಡು ವರ್ಷವಾಗಿದ್ರು ಕನ್ನಡ ಕಲಿತಿಲ್ವ ಎಂದು ಪ್ರಶ್ನಿಸಿದರು.
ಬಳಿಕ ಅಧಿಕಾರಿಗಳೊಂದಿಗೆ ಹಿಂದಿಯಲ್ಲೇ ಮಾತನಾಡಿ ಸಚಿವ ವಿ ಸೋಮಣ್ಣ ವಿವರ ಪಡೆದುಕೊಂಡರು.
ವಿಜಯಪುರ: ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ. ನಮ್ಮವರು ಮೀಸಲಾತಿಗಾಗಿ ಹಿಂದೂ ರೆಡ್ಡಿ, ಹಿಂದೂ ಬಣಜಿಗ ಸೇರಿದಂತೆ…
ಬೆಂಗಳೂರು: ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ವರದಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಏನೂ ಗೊತ್ತಿಲ್ಲದೇ ನಾನು ಪ್ರತಿಕ್ರಿಯೆ…
ಮೈಸೂರು: ರಸ್ತೆ ಅಗಲೀಕರಣದ ನೆಪಹೇಳಿ ರಾತ್ರೋರಾತ್ರಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಲು ಸಾಲು ಮರಗಳಿಗೆ ಕೊಡಲಿ ಬಿದ್ದಿದೆ. ನಗರದ ಎಸ್ಪಿ…
ಬೆಂಗಳೂರು: ಜಾತಿ ಗಣತಿ ವರದಿಯೇ ಸಿದ್ದರಾಮಯ್ಯರಿಗೆ ಮರಣ ಶಾಸನ ಆಗಬಹುದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಜಾತಿ ಗಣತಿ…
ಬೆಂಗಳೂರು: ಬಿಜೆಪಿ ನಡೆಸುತ್ತಿರುವ ಭೀಮ ಹೆಜ್ಜೆ ಯಾತ್ರೆ ಬಿಜೆಪಿಗರ ಅನೈತಿಕ ಯಾತ್ರೆಯಾಗಿದೆ ಎಂದು ಹೇಳಿದ್ದ ಸಚಿವ ಎಚ್.ಸಿ.ಮಹದೇವಪ್ಪ ವಿರುದ್ಧ ವಿರೋಧ…
ಚಿಕ್ಕಬಳ್ಳಾಪುರ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದು ಪತ್ನಿ ಸಮೇತ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು. ಇಂದು ಬೆಳ್ಳಂಬೆಳಿಗ್ಗೆಯೇ ದೇವಾಲಯಕ್ಕೆ ಭೇಟಿ…