ಮೈಸೂರು

ಜೆಡಿಎಸ್‌ ತೋರೆಯುತ್ತಾರಾ ಜಿ.ಟಿ ದೇವೇಗೌಡ..? ಈ ಬಗ್ಗೆ ಸ್ವತಃ ಅವರೇ ಹೇಳಿದ್ದೇನು..

ಮೈಸೂರು : ಯಾವ ನಾಯಕರು ನನ್ನನ್ನು ಯಾವ ಪಕ್ಷಕ್ಕೂ ಆಹ್ವಾನಿಸಿಲ್ಲ. ನಾನು ಕಾಂಗ್ರೆಸ್‌ಗೆ ಹೋಗ್ಬೇಕಾ, ಬಿಜೆಪಿಗೆ ಹೋಗ್ಬೇಕಾ ಎಂದು ನನ್ನ ಕ್ಷೇತ್ರದ ಜನ ತೀರ್ಮಾನಿಸ್ತಾರೆ. ನಾನು ಪಕ್ಷಾಂತರ ಮಾಡಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಂದುಬಿಡು ಕಾಂಗ್ರೆಸ್‌ಗೆ ಅಂತ ಕರೆದಿಲ್ಲ, ಶಿವಕುಮಾರ್ ಕೂಡ ಕರೆದಿಲ್ಲ, ಚನ್ನಪಟ್ಟಣ ಬೈ ಎಲೆಕ್ಷನಲ್ಲಿ ನನ್ನ ಯಾರು ಕರೆದಿಲ್ಲ, ಹಾಗಂತ ನಾನು ಯಾವ ಪಕ್ಷಕ್ಕೂ ಕೂಡ ಹೋಗಲ್ಲ ಎಂದರು.

ಮುಂದಿನ ಚುನಾವಣೆಯಲ್ಲಿ ಸರ್ಧೆ ಖಚಿತ: ನನ್ನ ಮುಂದೆ ನಿಲ್ಲುವ ಶಕ್ತಿ ಇಲ್ಲದವರು, ನಿನ್ನೆ ಮೊನ್ನೆ ಬಂದ ಶಾಸಕರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸ್ವ ಪಕ್ಷದವರ ಬಗ್ಗಯೇ ಹರಿಹಾಯ್ದ ಜಿಟಿಡಿ, ದೇವೇಗೌಡರ ಜೊತೆ ಬಾವುಟ ಕಟ್ಟಿ ಪಕ್ಷ ಕಟ್ಟಿದವನು ನಾನು.

ಮುಂದೆ ಏನು ಮಾಡ್ಬೇಕು ಅಂತ ಕ್ಷೇತ್ರದ ಹೇಳ್ತಾರೆ. ಜನ ಜೆಡಿಎಸ್ ಅಲ್ಲಿ ಇರು ಅಂದ್ರೆ ಇರ್ತೀನಿ, ಕಾಂಗ್ರೆಸ್ ಗೆ ಹೋಗಿ ಅಂದ್ರೆ ಹೋಗ್ತೀನಿ, ಬಿಜೆಪಿಗೆ ಹೋಗು ಅಂದ್ರು ಹೋಗ್ತೀನಿ. ಆದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡ್ತೀನಿ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ಕೆಪಿಎಸ್‌ಸಿ ಹಗರಣ | ಜ್ಞಾನೇಂದ್ರ ಕುಮಾರ್ ಅಮಾನತ್ತು

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 2016ನೇ ಬ್ಯಾಚ್‌ನ…

3 hours ago

ವ್ಯಾಪಕ ಟೀಕೆ : ವಿವಾದಾತ್ಮಕ ʼಉದ್ಯಾನ ಮಸೂದೆʼ ಹಿಂಪಡೆಯಲು ಸರ್ಕಾರ ನಿರ್ಧಾರ

​ಬೆಂಗಳೂರು : ಸಾರ್ವಜನಿಕರಿಂದ ವ್ಯಕ್ತವಾದ ತೀವ್ರ ವಿರೋಧ ಹಾಗೂ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ವಿವಾದಿತ ‘ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ)…

4 hours ago

ಕೆಪಿಎಸ್‌ಸಿ ಹಗರಣ | ಜ್ಞಾನೇಂದ್ರ ಕುಮಾರ್‌ ವಿರುದ್ಧ ಇನ್ನೊಂದು ಪ್ರಕರಣ ದಾಖಲು

ಬೆಂಗಳೂರು : ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್…

8 hours ago

ಕೊಡಗು ಜಿಲ್ಲೆಯಾದ್ಯಂತ ಸಂಭ್ರಮದ ಕೈಲ್ ಪೊಳ್ದ್ ಆಚರಣೆ

ಚೆಟ್ಟಳ್ಳಿ: ಕೊಡಗು ಜಿಲ್ಲೆಯಾದ್ಯಂತ ಕೈಲ್ ಪೊಳ್ದ್ ನಮ್ಮೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಚೆಟ್ಟಳ್ಳಿಯ ಪುತ್ತರಿರ ಐನ್ ಮನೆಯಲ್ಲಿ ಕೊಡವ ಸಂಪ್ರದಾಯ, ಕುಟುಂಬದ…

8 hours ago

ಸೆ.21 ರಿಂದ ಮೂರು ದಿನ ವಿಧಾನಮಂಡಲದ ವಿಶೇಷ ಅಧಿವೇಶನ

ಬೆಂಗಳೂರು : ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರಗಾಲದ ಪರಿಸ್ಥಿತಿ, ಕಸ್ತೂರಿ ರಂಗನ್ ವರದಿ ಹಾಗೂ ಇತ್ಯಾದಿ ಪ್ರಮುಖ ಜನಪರ ವಿಷಯಗಳ…

8 hours ago

ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ: ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಕುಸಿತ

ಮಂಡ್ಯ:  ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ಒಳಹರಿವಿಗಿಂತ ಮೂರು ಪಟ್ಟು ಅಧಿಕ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆ…

10 hours ago