ಯುಜಿಡಿ ಸಂಪರ್ಕ ವ್ಯವಸ್ಥೆ ಮಾಡದ ಖಾಸಗಿ ಕಟ್ಟಡಕ್ಕೆ ನೀರು ಬಂದ್ ಮಾಡಲು ಸೂಚನೆ
ಮೈಸೂರು: ದಸರಾ ಮಹೋತ್ಸವ ಹತ್ತಿರವಾಗುತ್ತಿದ್ದಂತೆ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಾಗುವ ಕಾರಣ ನಗರದ ಹೃದಯ ಭಾಗ ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳಲು ಮಹಾಪೌರ ಶಿವಕುಮಾರ್ ಬೆಳ್ಳಂಬೆಳಿಗ್ಗೆ ನಗರ ಪ್ರದಕ್ಷಿಣೆ ಮಾಡಿದರಲ್ಲದೆ, ಅವ್ಯವಸ್ಥೆಗಳನ್ನು ಕಣ್ಣಾರೆ ನೋಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಹೃದಯ ಭಾಗದಲ್ಲಿ ಸ್ವಚ್ಛತೆ ಕಾಪಾಡದಿರುವುದು ಹಾಗೂ ಮ್ಯಾನ್‌ಹೋಲ್ ಮುಚ್ಚದಿರುವುದನ್ನು ಕಂಡು ಯುಜಿಡಿ, ಪರಿಸರ ಇಂಜಿನಿಯರ್‌ಗಳಿಗೆ ತರಾಟೆ ತಗೆದುಕೊಂಡರು.
ಫೈವ್‌ಲೈಟ್ ವೃತ್ತದಿಂದ ಮಂಗಳವಾರ ಬೆಳಿಗ್ಗೆ ನಗರದ ಪ್ರದಕ್ಷಿಣೆ ಆರಂಭಿಸಿದ ಮಹಾಪೌರರು, ವೃತ್ತದಲ್ಲಿ ಮ್ಯಾನ್‌ಹೋಲ್ ಒಡೆದು ರಸ್ತೆಯಲ್ಲಿ ನೀರು ಹರಿಯುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡರು. ತಕ್ಷಣವೇ ಮ್ಯಾನ್‌ಹೋಲ್ ದುರಸ್ತಿಪಡಿಸಿ ಲೀಕ್ ಆಗುವುದನ್ನು ತಪ್ಪಿಸಬೇಕು ಎಂದು ಸೂಚಿಸಿದರು. ನಂತರ, ಬಿಷಪ್ ಹೌಸ್ ವೃತ್ತದಲ್ಲಿರುವ ಖಾಸಗಿ ಕಟ್ಟಡದ ಮಾಲೀಕರು ಜಾಗ ಬಿಟ್ಟುಕೊಡದ ಕಾರಣ ಜೋಡಿ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಇರ್ವೀನ್ ರಸ್ತೆಯಲ್ಲಿ ಪರಿಹಾರದ ಮೊತ್ತವನ್ನೇ ನಮಗೂ ಕೊಡುವಂತೆ ಕೇಳಿದ್ದು, ಈವಿಚಾರದಲ್ಲಿ ಹಲವಾರು ಬಾರಿ ಮಾತುಕತೆ ನಡೆಸಲಾಗಿದೆ. ಹೀಗಿದ್ದರೂ, ಜಾಗಬಿಡಲು ಒಪ್ಪಿಲ್ಲವೆಂದು ಹೇಳಿದಾಗ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು, ಕಾನೂನು ತಜ್ಞರ ಸಲಹೆ ಪಡೆದು ಸಮಸ್ಯೆ ಇತ್ಯರ್ಥಪಡಿಸಿ ಉಳಿದ ಕಾಮಗಾರಿ ಮುಗಿಸಲು ಕ್ರಮಕೈಗೊಳ್ಳಬೇಕು ಎಂದು ಹೇಳಿದರು. ಇದೇ ರಸ್ತೆಯಲ್ಲಿ ಯುಜಿಡಿ ಕಾಮಗಾರಿಗೆ ರಸ್ತೆಯನ್ನು ೫೦ ಮೀಟರ್‌ನಷ್ಟು ಅಗೆದಿದ್ದು, ಈ ವೇಳೆ ಬಸ್‌ಗಳ ಸಂಚಾರಕ್ಕೆ ತೊಂದರೆಯಾಗಿರುವುದನ್ನು ಗಮನಿಸಿದ್ದು, ದಸರಾ ತನಕ ಆರಂಭಿಸಿರುವ ಕಾಮಗಾರಿ ಪೂರ್ಣಗೊಳಿಸಿ,ಉಳಿದನ್ನು ನಂತರಕೈಗೆತ್ತಿಕೊಳ್ಳಬೇಕು. ಪೈಪ್ ಅಳವಡಿಸಿದ ಮೇಲೆ ಚೆನ್ನಾಗಿ ಮಣ್ಣು,ಜಲ್ಲಿಯಿಂದ ಮುಚ್ಚಬೇಕು.ಅದೇಮಣ್ಣನ್ನು ಹಾಕಿ ತುಂಬಿದರೆ ಒತ್ತಡ ತಾಳದೆ ಹೂತುಬಿಡುತ್ತದೆ ಎಂದರು.
-ರಸ್ತೆಯಲ್ಲಿ ಫುಟ್‌ಪಾತ್‌ಗಳು ಹಾಳಾಗಿರುವುದರಿಂದ ಓಡಾಡಲು ತುಂಬಾ ತೊಂದರೆಯಾಗಿದೆ. ಸಬರ್ಬ್‌ಬಸ್ ನಿಲ್ದಾಣದ ಅಕ್ಕಪಕ್ಕದ ರಸ್ತೆಗಳಲ್ಲಿ ಫುಟ್‌ಪಾತ್ ನಿರ್ಮಾಣ ಮಾಡಬೇಕು. ಯುಜಿಡಿ ಲೈನ್ ಹಾಳಾಗಿರುವುದರಿಂದ ರಿಪೇರಿಗೆ ಗಮನಹರಿಸಬೇಕು. -ಎಂ.ಸತೀಶ್, ನಗರಪಾಲಿಕೆ ಸದಸ್ಯರು
ದೇಶ-ವಿದೇಶಗಳಿಂದ ದಸರಾ ಮಹೋತ್ಸವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಕಾರಣ ಹೃದಯ ಭಾಗದ ರಸ್ತೆಗಳನ್ನು ಸ್ವಚ್ಛವಾಗಿಡಬೇಕಿದೆ. ಅಲ್ಲಲ್ಲಿ ಯುಜಿಡಿ ಸಮಸ್ಯೆ, ಸ್ವಚ್ಛತೆ ಸಮಸ್ಯೆಗಳು ಕಂಡುಬಂದಿದ್ದರಿಂದ ಎರಡು ದಿನಗಳಲ್ಲಿ ಸರಿಪಡಿಸಿ ಫೋಟೋ ಸಮೇತ ವರದಿ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬಸ್ ನಿಲ್ದಾಣದ ರಸ್ತೆಯಲ್ಲಿ ಇರುವ ಅವ್ಯವಸ್ಥೆಗೆ ಶೀಘ್ರ ಮುಕ್ತಿ ಕೊಡಲಾಗುವುದು. -ಶಿವಕುಮಾರ್,ಮಹಾಪೌರರು
ಮೈಸೂರಿನ ಸಬರ್ಬ್ ಬಸ್ ನಿಲ್ದಾಣದ ರಸ್ತೆ, ಬಿಷಪ್ ಹೌಸ್ ರಸ್ತೆ, ಬಿ.ಎನ್.ರಸ್ತೆ,ಪುರಭವನ ಮೊದಲಾದ ಕಡೆಗಳಲ್ಲಿ ಮಂಗಳವಾರ ನಗರ ಪ್ರದಕ್ಷಿಣೆ ಹಾಕಿದ ಮಹಾಪೌರ ಶಿವಕುಮಾರ್ ಹಲವಾರು ಸಮಸ್ಯೆಗಳನ್ನು ವೀಕ್ಷಿಸಿದರು.ನಗರಪಾಲಿಕೆ ಸದಸ್ಯರಾದ ಎಂ.ಸತೀಶ್, ಎಂ.ಬಿ.ನಾಗರಾಜು,ಉಪ ಆಯುಕ್ತರಾದ ಎಂ.ಜೆ.ರೂಪಾ ಇನ್ನಿತರರು ಹಾಜರಿದ್ದರು
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…
ಹೈದರಾಬಾದ್ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…