ಮೈಸೂರು

ಅನೈತಿಕ ಸಂಬಂಧ: ರೌಡಿ ಶೀಟರ್‌ ಸೂರ್ಯ ಹತ್ಯೆ

ಮೈಸೂರು: ತಾಲ್ಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿ ಅನುಗನಹಳ್ಳಿಯ ತೋಟದಲ್ಲಿ ರೌಡಿ ಶೀಟರ್ ಸೂರ್ಯ ಬರ್ಭರ ಹತ್ಯೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೃತನನನ್ನು ರೌಡಿ ಶೀಟರ್ ಅವರ ಹೆಸರು ದೊರೆಸ್ವಾಮಿ ಅಲಿಯಾಸ್‌ ಸೂರ್ಯ ಎಂದು ಗುರುತಿಸಲಾಗಿದೆ. ಈತನನ್ನು ಮಾರಕಾಸ್ತ್ರದಿಂದ ನಾಲ್ಕಾರು ಕಡೆ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೃತ್ಯ ಮಾರ್ಚ್. 12 ರ ರಾತ್ರಿ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಸೂರ್ಯನ ವಿರುದ್ಧ 4-5 ಪ್ರಕರಣಗಳು ಇದ್ದು, ಆತ ಎಂಓಬಿಯಲ್ಲಿ ಸೇರ್ಪಡೆಯಾಗಿದ್ದನು. ಅಲ್ಲದೇ 6 ತಿಂಗಳ ಹಿಂದೆ ಅವನ ಪತ್ನಿ ದೀಪಿಕಾ ಈತನಿಂದ ದೂರವಾಗಿದ್ದಳು. ಕೆಲವು ದಿನಗಳಿಂದ ಬೇರೆಯೊಂದು ಯುವತಿಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಎನ್ನಲಾಗುತ್ತಿದೆ. ಅಲ್ಲದೇ ಕೃತ್ಯ ನಡೆದ ಸ್ಥಳದಲ್ಲಿ ಹೋಟೆಲ್‌ನಿಂದ ತೆಗೆದುಕೊಂಡು ಬಂದ ಪದಾರ್ಥಗಳು ಹಾಗೂ ಮದ್ಯಪಾನ ಮಾಡಿರುವ ಸುಳಿವುಗಳು ಸಿಕ್ಕಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ವಾನ ದಳ ಹಾಗೂ ಬೆರಳುಮುದ್ರೆ ಘಟಕದೊಂದಿಗೆ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಕೊಲೆಯ ಅಪರಾಧಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಶ್ವೇತಾ ಎಂಬ ಯುವತಿಯೇ ತನ್ನ ಪತಿಯನ್ನು ಕೊಂದಿದ್ದಾಳೆ: ಪತ್ನಿ ದೀಪಿಕಾ ಆರೋಪ

ಇನ್ನು ರೌಡ ಶೀಟರ್‌ ಸೂರ್ಯನ ಪತ್ನಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನನ್ನ ಗಂಡನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಶ್ವೇತಾ ಎಂಬ ಯುವತಿಯೇ ತನ್ನ ಪತಿಯನ್ನು ಸಾಯಿಸಿದ್ದಾಳೆ ಎಂದಿದ್ದಾರೆ.

ಶ್ವೇತಾ ಎಂಬಾಕೆ ಖಾಸಗಿ ವಾಹಿನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ನನ್ನ ಗಂಡನಿಗೆ ಇನ್​ಸ್ಟಾಗ್ರಾಮ್ ಮೂಲಕ ಸೂರ್ಯನಿಗೆ ಹತ್ತಿರವಾಗಿದ್ದಳಂತೆ. ಶ್ವೇತಾಳೊಂದಿಗೆ ಬದುಕಲಾರಂಭಿಸಿದ್ದ ಸೂರ್ಯ ಹೆಂಡತಿ-ಮಕ್ಕಳು ಹಾಗೂ ಹೆತ್ತ ತಾಯಿಯನ್ನೂ ಮನೆಯಿಂದ ಹೊರಹಾಕಿದ್ದರು. ಅಲ್ಲದೇ ನನ್ನ ಗಂಡ ಸಾಯುವ ಹಿಂದಿನ ರಾತ್ರಿ ಸೂರ್ಯ ಮತ್ತು ಶ್ವೇತಾ ಜೊತೆಗಿದ್ದರೆಂದು ಅವರು ಹೇಳುತ್ತಾರೆ.

ಅರ್ಚನ ಎಸ್‌ ಎಸ್

Recent Posts

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

6 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

7 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

8 hours ago

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ಗವಿಸಿದ್ಧೇಶ್ವರ ಶ್ರೀಗಳಿಂದ ಸ್ಪಷ್ಟನೆ

ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…

10 hours ago

ಬ್ಯಾಂಕ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್‌ ಸೇವೆಗಳಲ್ಲಿ…

10 hours ago

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

14 hours ago