ಮೈಸೂರು

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ.

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಬಿಜೆಪಿ ಶಾಸಕ ಶ್ರೀವತ್ಸ ಅವರು ಈ ಬಗ್ಗೆ ಮನವಿ ನೀಡಿದ್ದಾರೆ. ಅದರ ಆಧಾರದ ಮೇಲೆ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದು, ಶೀಘ್ರವೇ ಪ್ರಕಟಿಸಲಾಗುವುದು ಎಂದು ಹೇಳಿದರು.

ನ್ಯಾಯಮೂರ್ತಿ ದೇಸಾಯಿ ಆಯೋಗದ ವರದಿಯಂತೆಯೇ ಎಲ್ಲಾ ಅಕ್ರಮ ಸೈಟ್‌ಗಳನ್ನು ರದ್ದು ಮಾಡಲಾಗಿದೆ. ಕಾನೂನುಬದ್ಧವಾಗಿ ಸೈಟ್‌ ಪಡೆದವರನ್ನು ಆಯೋಗದ ವರದಿಯಲ್ಲಿ ಪಟ್ಟಿಯಿಂದ ಹೊರಗಿಡಲಾಗಿದೆ.

ಪ್ರತಿ ಸೈಟ್‌ನ್ನೂ ತನಿಖೆ ಮಾಡಿ ಆಯೋಗ ವರದಿ ನೀಡಿರುವುದರಿಂದ, ಮತ್ತೆ ಪರಿಶೀಲನೆ ಮಾಡುವ ಅಗತ್ಯವಿಲ್ಲ. ಆಯೋಗ ನೀಡಿರುವ ಅಕ್ರಮ ಸೈಟ್‌ಗಳ ಪಟ್ಟಿಯನ್ನೇ ಪ್ರಕಟಿಸುತ್ತೇವೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಅಕ್ರಮವಾಗಿ ಪಡೆದ ಸೈಟ್‌ಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದರೆ, ಖರೀದಿದಾರರಿಗೆ ಸಮಸ್ಯೆಯಾಗದಂತೆ ತಪ್ಪಿಸಬಹುದೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದರು.

ಇನ್ನು ಈ ಬಾರಿಯ ಮೈಸೂರು ದಸರಾಗೆ ಇದೇ ಮೊದಲ ಬಾರಿಗೆ 22 ಸಚಿವರಿಗೆ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ.

10 ದಿನಗಳ ನವರಾತ್ರಿ ಕಾರ್ಯಕ್ರಮಕ್ಕೆ ಸಚಿವರಿಗೆ ಉಸ್ತುವಾರಿ ಜವಾಬ್ದಾರಿ ನೀಡಲಾಗಿದ್ದು, ಒಂದು ದಿನಕ್ಕೆ ಇಬ್ಬರು ಸಚಿವರು ಉಸ್ತುವಾರಿ ವಹಿಸಲಿದ್ದಾರೆ.

ಇದು ಮುಖ್ಯಮಂತ್ರಿ ಅವರ ಪರಿಕಲ್ಪನೆಯಾಗಿದ್ದು, ದಸರಾವನ್ನು ಹೆಚ್ಚು ಅಚ್ಚುಕಟ್ಟಾಗಿ ನಡೆಸಲು ಈ ಪ್ಲ್ಯಾನ್ ಮಾಡಲಾಗಿದೆ. ಇದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಇಲ್ಲಿ ಯಾರ ಕೈ ಮೇಲೂ ಅಲ್ಲ, ಯಾರ ಕೈ ಕೆಳಗೂ ಅಲ್ಲ ಎಂದು ಸ್ಪಷ್ಟನೆ ನೀಡಿದರು.

ತಾವೇ ಎಲ್ಲಾ ಸಮಿತಿಗಳ ಉಸ್ತುವಾರಿ ವಹಿಸಿಕೊಂಡಿರುವುದರಿಂದ, ಇದರಿಂದ ತಮಗೆ ಯಾವುದೇ ಹಿನ್ನಡೆ ಇಲ್ಲ ಎಂದರು.

 

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ಗವಿಸಿದ್ಧೇಶ್ವರ ಶ್ರೀಗಳಿಂದ ಸ್ಪಷ್ಟನೆ

ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…

1 hour ago

ಬ್ಯಾಂಕ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್‌ ಸೇವೆಗಳಲ್ಲಿ…

2 hours ago

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

6 hours ago

ಪೋಕ್ಸೋ ಕಾಯಿದೆ ದುರ್ಬಳಕೆ, ಚಿತಾವಣೆ ಪೋಕ್ಸೋ ಅಪರಾಧಕ್ಕೆ ಸಮ!

ಸ್ಟ್ಯಾನ್ಲಿ, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಮಕ್ಕಳಿಗೆ ನೈತಿಕ ಪಾಠ ಮಾಡಬೇಕಾದ ಶಿಕ್ಷಕರು ಸೇರಿಕೊಂಡು ಮಕ್ಕಳಿಗೆ ಪ್ರಚೋದನೆ ನೀಡಿ ತಮ್ಮ…

6 hours ago

ರಾಜಕೀಯ ಧ್ರುವೀಕರಣಕ್ಕೆ ಈಗ ಸಿಗುತ್ತಿದೆ ವೇಗ

ರಾಜ್ಯ ರಾಜಕಾರಣ ಕುತೂಹಲಕಾರಿ ತಿರುವು ಪಡೆಯುತ್ತಿದೆ. ನಾಲ್ಕು ತಿಂಗಳ ಹಿಂದೆ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಕೆಳಗಿಳಿದಿದ್ದೇ ಇದಕ್ಕೆ ಕಾರಣ. ಅಂದ…

6 hours ago

ಮಳೆಯಿಲ್ಲದೇ ಒಣಗುತ್ತಿದೆ ನಾಟಿ ಮಾಡಿದ ಪೈರು

ಲಕ್ಷ್ಮೀಕಾಂತ್ ಕೊಮಾರಪ್ಪ ವಾಡಿಕೆಯಂತೆ ಸುರಿಯದ ಮಳೆ; ಆತಂಕಗೊಂಡಿರುವ ರೈತರು ಸೋಮವಾರಪೇಟೆ: ಮಳೆ ಕೈಕೊಟ್ಟ ಪರಿಣಾಮ ಭತ್ತದ ಬೆಳೆಗೆ ನೀರಿನ ಕೊರತೆ…

6 hours ago