ಮೈಸೂರು: ನಾನೊಬ್ಬ ಸರಳ ಸರಳ ವ್ಯಕ್ತಿ ಮತ್ತು ಸದಾ ಜನರ ನಡುವೆ ಇರುವವ ಮತ್ತು ಅವರು ಕರೆ ಮಾಡಿದಾಗೆಲ್ಲ ಕೈಗೆ ಸಿಗುವ ವ್ಯಕ್ತಿಯಾಗಿದ್ದೇನೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ ಹೇಳಿದ್ದಾರೆ.
ನಗರದಲ್ಲಿನ ಕಾರ್ಯಕರ್ತರ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ತಾನು ಸರಳ ವ್ಯಕ್ತಿ ಅಂತ ಹೇಳುತ್ತಾ ಹಾಲಿ ಸಂಸದ ಪ್ರತಾಪ್ ಸಿಂಹ ಮೇಲೆ ಪರೋಕ್ಷ ದಾಳಿ ನಡೆಸಿದರು.
ತಮ್ಮ ವಿರುದ್ಧ ಕಾಮೆಂಟ್ ಮಾಡದಂತೆ ಪ್ರತಾಪ್ ಸಿಂಹ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡಿದ್ದಾರೆ, ತಡೆಯಾಜ್ಞೆ ತೆರವುಗೊಳಿಸಿದರೇ ಅವರ ಕೊಳಕು ಮನಸ್ಥೀತಿ ಬಿಚ್ಚಿಡುತ್ತೇನೆ ಎಂದರು.
ಪ್ರತಾಪ್ ಸಿಂಹ ಹೇಸರೇಳದೇ ದಾಳಿ ನಡೆಸಿದ ಲಕ್ಷ್ಮಣ್, ನಾನು ಕಾರಲ್ಲಿ ಓಡಾಡಲ್ಲ, ಜೂಜುಕೋರನಲ್ಲ, ಮದ್ಯವ್ಯಸನಿ ಅಲ್ಲ, ಧೂಮ್ರಪಾನಿಯೂ ಅಲ್ಲ, ರಾತ್ರಿಯ ವ್ಯವಹಾರಗಳು ತನಗಿಲ್ಲ, ಭ್ರಷ್ಟಾಚಾರದ ಹಣದಲ್ಲಿ ರೆಸಾರ್ಟ್ ನಿರ್ಮಾಣದ ಕೆಲಸಕ್ಕೆ ಮುಂದಾಗಿಲ್ಲ, ಮಡಿಕೇರಿಯಲ್ಲಿ ನೂರಾರು ಎಕರೆ ಕಾಫಿ ಪ್ಲಾಂಟೇಷನ್ ತನಗಿಲ್ಲ, ಈಗಲೂ ತಾನು ಬೆಂಗಳೂರಿಗೆ ಟ್ರೈನು ಮತ್ತು ಮಡಿಕೇರಿಗೆ ಬಸ್ಸಲ್ಲಿ ಹೋಗೋದು, ತನ್ನದು ಕ್ಲೀನ್ ಇಮೇಜ್ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.
ತಾನು ಒಕ್ಕಲಿಗ ಅಲ್ಲ ಎನ್ನುವ ಸಂಸದನ ಕೊಳಕು ಮನಸ್ಥಿಯನ್ನು ಜನರ ಮುಂದೆ ಬಿಚ್ಚಿಡಬೇಕಿದೆ, ಅವರೊಂದಿಗೆ ಮಾಧ್ಯಮ ಮುಂದೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ, ಅವರು ದಯವಿಟ್ಟು ಅ ತಡೆಯಾಜ್ಞೆಯನ್ನು ಹಿಂಪಡೆಯಲಿ ಎಂದು ಇದೇ ವೇಳೆ ಲಕ್ಷ್ಮಣ್ ಸವಾಲು ಹಾಕಿದರು.
ಅಮರಾವತಿ : ಹಿಂದಿನ ವೈಎಸ್‍ಆರ್‍ಸಿಪಿ ಆಡಳಿತದ ಅವಧಿಯಲ್ಲಿ ಆಂಧ್ರ ವಿಧಾನಸಭೆಯ ಪ್ರಸ್ತುತ ಉಪಸಭಾಪತಿ ಕೆ. ರಘುರಾಮ ಕೃಷ್ಣ ರಾಜು ಅವರ…
ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11ರಿಂದ…
ವಾಷಿಂಗ್ಟನ್ : ಕಾನೂನುಬಾಹಿರವಾಗಿ ಟ್ರಂಪ್ ವಿಧಿಸಿದ್ದ ಆಮದು ಸುಂಕ ಸಂಗ್ರಹವನ್ನ ಅಮೆರಿಕ ನಿಲ್ಲಿಸಲಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಗಡಿ…
ಬೆಂಗಳೂರು : ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದ ಜನರ ಕಲ್ಯಾಣಕ್ಕಾಗಿ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಗ್ರಾಮಗಳಲ್ಲಿ…
ಬೆಂಗಳೂರು : ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ಕೂಡಲೇ ತೋಟದ ಬೆಳೆಗಾರರ ಸಂಘಟನೆ…
ಚಿಕ್ಕಬಳ್ಳಾಪುರ : ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್…