ಹುಣಸೂರು: ನಗರಸಭೆ ಕಾರ್ಯಾಲಯದ ಕೌನ್ಸಿಲ್ ಸಾಮಾನ್ಯ ಸಭೆಯು ಬುಧವಾರ ನಗರಸಭಾ ಕೌನ್ಸಿಲ್ ಸಭಾಂಗಣದಲ್ಲಿ ನಡೆಯಿತು.
ನಗರಸಭಾಧ್ಯಕ್ಷ ಶರವಣ, ಶಾಸಕ ಹರೀಶ್ ಗೌಡ ರವರು ಹಾಜರಿದ್ದು, ತಾಳ್ಮೆಯಿಂದ ಸದಸ್ಯರ ಪ್ರಶ್ನೆಗಳನ್ನು ಆಲಿಸಿದರು. ಸಭೆ ಪ್ರಾರಂಭವಾಗುತ್ತಿದ್ದಂತೆ ಚರಂಡಿ ನೀರು ನದಿಗೆ ಸೇರಬಾರದೆಂದು ಲಕ್ಷಾಂತರ ರೂ. ಖರ್ಚು ಮಾಡಿದರೂ ನೀರಾವರಿ ನಿಗಮ ಹಾಗೂ ಪುರಸಭಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ಹಲವು ಕಡೆ ತ್ಯಾಜ್ಯ ನೀರು ನದಿಗೆ ಸೇರುತ್ತಿದೆ. ದೂರು ನೀಡಿ ಒಂದು ವರ್ಷ ಕಳೆದರೂ ಪ್ರಯೋಜನವಾಗಿ ಎಂದು ನಗರಸಭಾ ಸದಸ್ಯ ಸಯ್ಯದ್ ಯೂನುಸ್ ದೂರಿದರು.
ಈ ಸಂಬಂಧ ಟೆಂಡರ್ ಕರೆದಿದ್ದು, ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ನಿಗಮ ಹಾಗೂ ನಗರಸಭಾ ಅಧಿಕಾರಿಗಳು ತಿಳಿಸಿದರು.
ನಗರಸಭಾ ಸದಸ್ಯ ದೇವರಾಜ್ ಮಾತನಾಡಿ, ನಗರದ ಕಲ್ಕುಣಿಕೆಯ ನಾಯಕರ ಸ್ಮಶಾನದ ರಸ್ತೆಯಲ್ಲಿ ಒಳ ಚರಂಡಿ ನೀರು ಹರಿಯುತ್ತಿದ್ದು
ಹಲವು ಬಾರಿ ನೀರಾವರಿ ನಿಗಮದವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ರಸ್ತೆಯು ಕೊರೆದು ರಸ್ತೆಯೇ ಕಾಣದಂತಾಗಿದೆ. ರೈತರ ಜಮೀನುಗಳಿಗೂ ಚರಂಡಿ ನೀರು ಹರಿಯುತ್ತಿದೆ ಎಂದು ಕೆಲವರು ಶಾಸಕರಿಗೆ ದೂರು ಹೇಳಿದರು.
ನಗರಸಭಾ ಸದಸ್ಯರುಗಳಾದ ದೊಡ್ಡಹೆಜ್ಜೂರು ರಮೇಶ್, ಶ್ರೀನಾಥ್, ಸದಸ್ಯ ಸ್ವಾಮಿಗೌಡ, ಮಲ್ಲಿಕ್‌ಪಾಷ ಮತ್ತಿತರ ಸದಸ್ಯರು ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸದೆ ಜನರಿಂದ ಬೈಗುಳ ತಿನ್ನುವಂತಾಗಿದೆ. ಬೀದಿ ದೀಪಗಳನ್ನು ಅಳವಡಿಸುವ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಬಿ ಖಾತೆ ಪಡೆಯಲು ನಗರದ ವಾಸಿಗಳು ಕಳೆದ 5 ವರ್ಷಗಳಿಂದ 2 ಪಟ್ಟು ಕಂದಾಯ ಪಾವತಿಸುವಂತೆ ಸರ್ಕಾರದಿಂದ ಆದೇಶ ಬಂದಿದ್ದು, ಇದು ಬೇರೆ ಜಿಲ್ಲೆಗಳಿಲ್ಲ ಎಂದು ಸದಸ್ಯರು ಶಾಸಕರಿಗೆ ತಿಳಿಸಿದರು. ಆಗ ಶಾಸಕರು ಮಾತನಾಡಿ, ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಈ ಸಂಬಂಧ ಚರ್ಚಿಸಿದ್ದು, ಈ ಸಾಲಿನ ಕಂದಾಯವನ್ನು ಮಾತ್ರ 2 ಪಟ್ಟು ಕಟ್ಟುವಂತೆ ಆದೇಶ ಹೊರಬೀಳಲಿದೆ ಎಂದು ತಿಳಿಸಿದರು.
ಪೌರಾಯುಕ್ತರಾದ ಮಾನಸ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್, ಸದಸ್ಯರು, ಅಧಿಕಾರಿಗಳಾದ ಸಿದ್ದರಾಜು, ನಾಗರಾಜು, ನಟರಾಜು, ಶಾರದಮ್ಮ, ಲೀಲ, ಶರ್ಮಿಳಾ, ಶಮಂತ್, ಹಾಗೂ ಸಿಬ್ಬಂದಿ ಹಾಜರಿದ್ದರು.
ಹೊಸದಿಲ್ಲಿ : ಮಧ್ಯಪ್ರಾಚ್ಯದ ಸಂಘರ್ಷದಿಂದ ಉಂಟಾಗಿರುವ ಎಲ್‌ಪಿಜಿ ಸಿಲಿಂಡರ್ ಕೊರತೆ ಬಗ್ಗೆ ಸಾರ್ವಜನಿಕರಲ್ಲಿ ಉದಿಸಿದ ಆತಂಕದ ನಡುವೆ, ಕೇಂದ್ರ ಸರ್ಕಾರವು…
ಬೆಂಗಳೂರು : ಬಹುನಿರೀಕ್ಷಿತ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು…
ಮೈಸೂರು : ಸಂಶೋಧನೆ ಮಾಡುವಾಗ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಪರಿಶ್ರಮದಿಂದ ಸಂಶೋಧನೆಗಳನ್ನು ಸಿದ್ಧಪಡಿಸಬೇಕು, AI ತಂತ್ರಜ್ಞಾನದ ಕಡೆ ಮೊರೆಹೋಗುವುದನ್ನು ಕಡಿಮೆ…
ಸಾಲಿಗ್ರಾಮ : ತನ್ನ ಜಮೀನಿಗೆ ಸಂಬಂಧಿಸಿದ ಖಾತೆಯನ್ನು ಮಾಡಿಕೊಡದೆ ಸಾಲಿಗ್ರಾಮ ನಾಡಕಚೇರಿ ಅವರು ಸತಾಯಿಸುತ್ತಿದ್ದಾರೆ ಎಂದು ಮನನೊಂದು ಸಾಲಿಗ್ರಾಮದ ನಾಡ…
ಹೊಸದಿಲ್ಲಿ : ಪಶ್ಚಿಮ ಏಷ್ಯಾದ ಸಂಘರ್ಷ ಪೀಡಿತ ಸಮುದ್ರ ವಲಯದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು…
ಗುಂಡ್ಲುಪೇಟೆ : ಪಟ್ಟಣದ ಹೊರವಲಯದ ವಿಜಯಪುರ ಅಮಾನಿ ಕೆರೆಯ ಬಳಿ ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆಯಾಗಿರುವ ಘಟನೆ ನಡೆದಿದೆ. ತಾಲ್ಲೂಕಿನ ಮೂಖಹಳ್ಳಿ…