Hotel owner assaults youth
ಹುಣಸೂರು : ತಾಲ್ಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯ ಬಿಬಿಸಿ ಕಾಲೋನಿಯ ಅಲೆಮಾರಿ ಯುವಕ ಗಣೇಶ ಎಂಬಾತನಿಗೆ ಇತ್ತೀಚೆಗೆ ಹೋಟೆಲ್ ಮಾಲೀಕ ಜಯಣ್ಣ ಮತ್ತು ಇತರರು ಹಲ್ಲೆ ಮಾಡಿರುವುದನ್ನು ತಾಲ್ಲೂಕು ದಸಂಸ ತೀವ್ರವಾಗಿ ಖಂಡಿಸಿದೆ.
ಹಲ್ಲೆಗೊಳಗಾದ ಅಲೆಮಾರಿ ಯುವಕ ಗಣೇಶ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬುಧವಾರ ದಸಂಸ ಮುಖಂಡರು ಈತನನ್ನು ಭೇಟಿ ನೀಡಿ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ, ನಲ್ಲೂರು ಪಾಲದಲ್ಲಿ ಕೇರಳ ಮೂಲದ ಹೋಟೆಲ್ ಮಾಲೀಕನಾದ ಜಯಣ್ಣ, ಅನೀಸ್ ಎಂಬವರು ಗಣೇಶನಿಗೆ ಕೊಳೆತ ಮೊಟ್ಟೆಯನ್ನು ಕೊಟ್ಟ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಆತನ ತಲೆಗೆ ಕಬ್ಬಿಣದ ಕುರ್ಪಿಯಿಂದ ಹಲ್ಲೆ ಮಾಡಿದ ಪರಿಣಾಮ ತಲೆಗೆ ಗಾಯವಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ಹೋಟೆಲ್ ಮಾಲೀಕ ಜಯಣ್ಣ ಮತ್ತು ಇತರರು ಗಣೇಶನ ವಿರುದ್ಧವೇ ಸುಳ್ಳು ಪ್ರಕರಣವನ್ನು ದಾಖಲು ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾಗಿದ್ದು ಹೋಟೆಲ್ ಮಾಲೀಕರೇ ಹಲ್ಲೆ ಮಾಡಿ ಹಲ್ಲೆಗೊಳಗಾದ ಗಣೇಶನ ಮೇಲೆಯೇ ದೂರು ಕೊಟ್ಟಿರುವುದು ಇವರ ದುಷ್ಟತನವನ್ನು ತೋರಿಸುತ್ತದೆ ಎಂದರು.
ಹಲ್ಲೆಗೊಳಗಾದ ಯುವಕ ಅಲೆಮಾರಿ ಸಮುದಾಯದವನಾಗಿದ್ದು, ಚಿಕಿತ್ಸೆಗೂ ಹಣವಿಲ್ಲದೆ ಪರದಾಡುವ ಸ್ಥಿತಿ ಇದೆ. ಪೊಲೀಸ್ ಇಲಾಖೆ ಈ ಬಗ್ಗೆ ಕೂಲಂಕುಶವಾಗಿ ತನಿಖೆ ಮಾಡಿ ಗಣೇಶನ ಮೇಲೆ ಹಲ್ಲೆ ಮಾಡಿರುವ ಹೋಟೆಲ್ ಮಾಲೀಕರನ್ನು ಬಂಽಸಬೇಕು. ನೊಂದ ಅಲೆಮಾರಿ ಗಣೇಶನಿಗೆ ರಕ್ಷಣೆ ಮತ್ತು ನ್ಯಾಯ ಕೊಡಿಸಬೇಕು. ಗಣೇಶನ ಮೇಲೆ ಕೊಟ್ಟಿರುವ ಸುಳ್ಳು ಪ್ರಕರಣವನ್ನು ವಜಾಗೊಳಿಸಬೇಕು ಎಂದು ಪೊಲೀಸ್ ಅಧಿಕಾರಿಗಳನ್ನು ದಸಂಸ ಒತ್ತಾಯಿಸುತ್ತದೆ ಎಂದರು.
ಈ ವಿಷಯವನ್ನು ಹುಣಸೂರು ಶಾಸಕರಾದ ಜಿ.ಡಿ.ಹರೀಶ್ ಗೌಡ ಅವರಿಗೆ ತಿಳಿಸಿದಾಗ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಗಣೇಶನನ್ನು ಸಂತೈಸಿ ಚಿಕಿತ್ಸೆಗೆ ೧೦ ಸಾವಿರ ರೂ. ಧನ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ ಎಂದರು.
ದಸಂಸದ ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಬಿಬಿಸಿ ಅಲೆಮಾರಿ ಸಮಾಜದ ಮುಖಂಡರುಗಳಾದ ಅಣ್ಣಯ್ಯ, ರಮೇಶ, ಸಣ್ಣಸ್ವಾಮಿ, ರಾಮಕೃಷ್ಣ, ಶಿವಣ್ಣ, ವಿಷ್ಣು, ಕೃಷ್ಣ, ಗುಂಡ, ಅಣ್ಣಯ್ಯ ಬೋಡಿ ಮುಂತಾದವರು ಹಾಜರಿದ್ದರು.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…