ಮೈಸೂರು

ಸಾಂಸ್ಕೃತಿಕ ನಾಯಕರನ್ನು ಜಾತಿಯಿಂದ ಬಿಡುಗಡೆಗೊಳಿಸಿ ; ಪ್ರೊ.ಅರವಿಂದ ಮಾಲಗತ್ತಿ

ಮೈಸೂರು :  ಸಾಂಸ್ಕೃತಿಕ ನಾಯಕರನ್ನು ಜಾತಿಯಿಂದ ಬಿಡುಗಡೆಗೊಳಿಸಿದರೆ ಅವರ ಶಕ್ತಿ ವೃದ್ಧಿಸುತ್ತದೆ ಎಂದು ಖ್ಯಾತ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.

ಪದ್ಮಪಾಣಿ ಲಲಿತಕಲಾ ಅಕಾಡೆಮಿಯು ರಂಗಾಯಣದ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗೋವಿಂದಸ್ವಾಮಿ ಗುಂಡಾಪುರ ಅವರ ಗುಡಿಸಲಜ್ಯೋತಿ- ಪದಪಯಣ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಾಮಾಜಿಕ ಪರಿವರ್ತನೆಗೆ ಕಾರಣರಾದ ಹರಿಕಾರರನ್ನು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಕುವೆಂಪು, ಅಂಬೇಡ್ಕರ್‌ ಅವರಂಥವರನ್ನು ಒಂದು ಜಾತಿಗೆ ಸೀಮಿತ ಮಾಡುತ್ತಿದ್ದೇವೆ.’ ನಾವು ಬಸವ ಜಯಂತಿ ಆಚರಿಸುತ್ತೇವೆ. ಆದರೆ ಇತರರು ಅಂಬೇಡ್ಕರ್‌ ಜಯಂತಿ ಆಚರಿಸುತ್ತಾರಾ?’ ಎಂದು ಕೇಳುವ ಪರಿಸ್ಥಿತಿ ಇದೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಬುದ್ಧ-ಬಸವ- ಅಂಬೇಡ್ಕರ್‌ ಸೇರಿಸಿ ಜಯಂತಿ ಮಾಡಿ ಎಂದು ನೇರವಾಗಿ ಹೇಳಿದ್ದೇನೆ. ಈ ರೀತಿಯಾದಾಗ ಮಾತ್ರ ಸಾಂಸ್ಕೃತಿಕ ನಾಯಕರು ಎಲ್ಲರನ್ನು ಒಳಗೊಳ್ಳುತ್ತಾರೆ. ಅವರ ಶಕ್ತಿಯೂ ವೃದ್ಧಿಸುತ್ತದೆ ಎಂದರು.

ಸಿದ್ದಲಿಂಗಯ್ಯ ಅವರ ಕವನಗಳನ್ನು ಈಗಿನ ಗೋವಿಂದಸ್ವಾಮಿ ಗುಂಡಾಪುರ ಅವರ ಕವನಗಳನ್ನು ಗಮನಿಸಿದಾಗ ದಲಿತರ ಕಾವ್ಯದ ನಡೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹನಸೋಗೆ ಸೋಮಶೇಖರ್‌, ಸೋಸಲೆ ಗಂಗಾಧರ್‌ ಅವರು ತಮ್ಮ ಭಿನ್ನನಡೆಯಿಂದ ದಲಿತ ಸಾಹಿತ್ಯಕ್ಕೆ ಹೊಸ ದಿಕ್ಕು ತೋರಿದ್ದಾರೆ ಎನ್ನಬಹುದು. ನಾಲ್ಕು ಗೋಡೆಗಳ ನಡುವೆ ಹೇಳುವ ಕವಿತೆಗಳಿಗಿಂತ ಸಮಾಜಕ್ಕೆ ಪಾಠ ಹೇಳುವ ಕವಿತೆಗಳು ಹೊರಬರಲು ಬಿವಿಎಸ್‌ ಪ್ರಭಾವ ಕಾರಣ ಎನ್ನಬಹುದು ಎಂದರು.

ಗುಡಿಸಲಜ್ಯೋತಿ ಕೃತಿ ಬಿಡುಗಡೆ ಮುನ್ನವೇ ಇಲ್ಲಿನ ಕವಿತೆಗಳು ಆಸ್ಫೋಟವಾಗಿವೆ. ಗುಡಿಸಲ ಜ್ಯೋತಿ ಕವನವಂತೂ ಮನೆ ಮಾತಾಗಿದೆ. ಮೊದಲು ಗೋವಿಂದಸ್ವಾಮಿ ಅವರ ಕವನ ಸಂಕಲನ ನೋಡಿದಾಗ ಕೆಸರುಗದ್ದೆಯಲ್ಲಿ ಓಡಿದ ಅನುಭವವಾಗಿತ್ತು. ಆದರೆ ಗುಡಿಸಲ ಜ್ಯೋತಿಯಲ್ಲಿ ಸೇರ್ಪಡೆಯಾಗಿರುವ ಹೆಚ್ಚುವರಿ ಕವನಗಳನ್ನು ನೋಡಿದಾಗ ನಾನೇ ಕೆಸರಿನ ನಂತರ ಹುಲ್ಲಿನ ನಡುವೆ ಸಿಕ್ಕಿಕೊಂಡಂತೆ ಆಗಿದೆ. ಇಲ್ಲಿನ ಕವಿತೆಗಳು ಹೆಚ್ಚು ಗಂಭೀರ ಹಾಗೂ ಸಶಕ್ತವಾಗಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದ ಪರಂಪರೆಯನ್ನು ಒಳಗೊಳ್ಳುವ, ಸಮಕಾಲೀನ ಹಾಗೂ ಹಿಂದಿನ ತಲೆಮಾರಿನ ಇರುವಿಕೆ ಕಂಡು ಬರುತ್ತದೆ. ಹೀಗಾಗಿ ಇವು ಜನಪ್ರಿಯ ಹಾಗೂ ಗಂಭೀರ ಕವಿತೆಗಳ ನಡುವೆ ಬರುತ್ತವೆ. ಇದರಿಂದ ಕಾವ್ಯಕ್ಕೂ ಶಕ್ತಿ, ಕವಿಗೂ ಮೆರಗು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್‌, ಶಾಹು ಮಹಾರಾಜ್‌, ನಾರಾಯಣ ಗುರು, ಟಿಪ್ಪು ಸುಲ್ತಾನ್‌, ಕಾನ್ಸಿರಾಂ, ಸಾವಿತ್ರಿ ಬಾಫುಲೆ, ಪೆರಿಯಾರ್‌, ಡಾ.ಬಿ.ಆರ್. ಅಂಬೇಡ್ಕರ್‌, ಬುದ್ಧ, ಬಸವಣ್ಣ, ಮಹದೇಶ್ವರ ಮೊದಲಾದ ದಾರ್ಶನಿಕರ ಬಗ್ಗೆ ಇಲ್ಲಿ ಕವನಗಳಿವೆ. ಪ್ರಸ್ತುತ ಸಮಾಜಕ್ಕೆ ಈ ಎಲ್ಲಾ ಮಹನೀಯರ ಆದರ್ಶಗಳು ಬೇಕಾಗಿವೆ ಎಂದರು.

ಧ್ವನಿಸುರಳಿಯನ್ನು ಪ್ರಗತಿಪರ ಚಿಂತಕ ಬಸವರಾಜ ದೇವನೂರು ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಮಹದೇವ ಶಂಕನಪುರ ಮುಖ್ಯ ಅತಿಥಿಯಾಗಿದ್ದರು. ಗೋವಿಂದಸ್ವಾಮಿ ಗುಂಡಾಪುರ ಇದ್ದರು. ಎಂ. ಸಿದ್ದರಾಜು ಸ್ವಾಗತಿಸಿದರು. ಪದ್ಮಪಾಣಿ ಲಲಿತಕಲಾ ಅಕಾಡೆಮಿಯ ಸದಸ್ಯರು ಗೀತಗಾಯನ ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಗಾಯನ ಕ್ಷೇತ್ರದ ಸಾಧಕರಾದ ಜಯಶಂಕರ್‌ ಮೇಸ್ತ್ರಿ, ನಾರಾಯಣಸ್ವಾಮಿ, ರಮೇಶ್‌, ಸಿದ್ದೇಶ್‌, ನವೀನ್‌, ಕೆ.ಎಸ್‌. ಭವತಾರಿಣಿ, ನಾಗೇಶ್‌ ಲಕ್ಷ್ಮೀರಾಮ್, ಅಮ್ಮ ರಾಮಚಂದ್ರ, ಶೇಷಣ್ಣ, ಗಾನಸುಮಾ ಪಟ್ಟಸೋಮನಹಳ್ಳಿ, ಮರಿಸ್ವಾಮಿ ಅವರಿಗೆ ಪದಪಯಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಂದ ಈ ಬಾರಿ ದಸರಾ ಉದ್ಘಾಟನೆ

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…

10 hours ago

ಕಾಡಾನೆ ದಾಳಿಗೆ 75 ತೆಂಗಿನ ಮರ ನಾಶ: ಬೆಳೆ ಪರಿಹಾರಕ್ಕೆ ರೈತ ಕುಟುಂಬದ ಮನವಿ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ…

16 hours ago

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ

ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ…

16 hours ago

ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.…

17 hours ago

ಕೋಟೆ ಟಿಎಪಿಸಿಎಂಎಸ್: ನಾಳೆ ಮೈತ್ರಿ ಪಕ್ಷದ 8 ಸದಸ್ಯರ ರಾಜೀನಾಮೆ ಭವಿಷ್ಯ ನಿರ್ಧಾರ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು…

18 hours ago