ರೈತ ದಸರಾ ಕ್ರೀಡಾಕೂಟದಲ್ಲಿ ಕೃಷಿಕರ ಸಂಭ್ರಮದ ಹೊನಲು
ಮೈಸೂರು: ನೀರಿನ ಬಿಂದಿಗೆ ಹೊತ್ತು ಎದ್ನೋ,ಬಿದ್ನೋ ಅಂಥ ಓಡಿದ ನಾರಿಯರು. ಹೆಣ್ಮಕ್ಕಳಿಗಿಂತ ತಾವೇನೂ ಕಮ್ಮಿ ಇಲ್ಲವೆನ್ನುವಂತೆ ಗೋಣಿಚೀಲದ ಗೊಬ್ಬರ ಮೂಟೆ ಹೊತ್ತು ಓಡಿದ ಪುರುಷರು. ಕೆಸರುಗದ್ದೆ ಓಟದಲ್ಲಿ ಎದ್ದು ಬಿದ್ದು ಗುರಿ ತಲುಪಿದ ರೈತರು.. ನೀರು ತುಂಬಿದ ಬಿಂದಿಗೆ ಹೊತ್ತು ಓಡಿದ ಮಹಿಳಾ ರೈತರು !.. ಇದು ಮೈಸೂರು ದಸರಾ ಮಹೋತ್ಸವ ಅಂಗವಾಗಿ ರೈತದಸರಾ ಪ್ರಯುಕ್ತ ಶನಿವಾರ ನಡೆದ ಕ್ರೀಡಾಕೂಟದಲ್ಲಿ ಕಂಡು ಬಂದ ವಿಶೇಷತೆಗಳು. ಹಲವು ದಿನದಿಂದ ತಮ್ಮ ಗದ್ದೆ,ಜಮೀನಿನಲ್ಲಿ ವ್ಯವಸಾಯದಲ್ಲಿ ನಿರತರಾಗಿದ್ದ ರೈತರು-ರೈತ ಮಹಿಳೆಯರು ಎಲ್ಲ ಕೆಲಸವನ್ನು ಬದಿಗೊತ್ತಿ ನಾಡಹಬ್ಬ ದಸರಾ ಕ್ರೀಡಾಕೂಟದ ಸಂಭ್ರಮದಲ್ಲಿ ಭಾಗವಹಿಸಿ ಮಿಂಚಿದರು.
ಬಿಂದಿಗೆ ಹೊತ್ತರು: ನಗರದ ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನದಲ್ಲಿ ಹಲವಾರು ಸ್ಪರ್ಧೆಗಳು ನಡೆಯಿತು. ಸಮಯಕ್ಕೆ ಸರಿಯಾಗಿ ಮನೆಯಿಂದ ಠಾಕುಠೀಕಾಗಿ ಬಂದಿದ್ದ ಮಹಿಳೆಯರು ಓವಲ್ ಮೈದಾನಕ್ಕೆ ಬಂದರು. ಬಳಿಕ ಸ್ಪರ್ಧೆಗೆ ಥೇಟ್ ಹಳ್ಳಿ ಹೆಣ್ಣುಮಕ್ಕಳಂತೆ ಸಜ್ಜಾದರು. ಬಳಿಕ ನೀರಿನ ಬಿಂದಿಗೆ ಹೊತ್ತುಕೊಂಡು ನಿಗಧಿತ ಗುರಿ ತಲುಪಲು ಪೈಪೋಟಿ ನೀಡಿದರೆ, ಸುತ್ತಲೂ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ತಲೆ ಮೇಲೆ ಬಿಂದಿಗೆಯನ್ನು ಹೊತ್ತು ಸರಾಗವಾಗಿ ಬೇಗ ಗುರಿ ತಲುಪಿ ಪ್ರಥಮ,ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡರೆ, ಹಲವರು ಸುಸ್ತಾಗಿ ನಿಂತಿದ್ದು ಕಾಣಿಸಿತು. ಇದೇ ರೀತಿ ಲೆಮನ್ ಅಂಡ್ ಸ್ಪೂನ್ ಸ್ಪರ್ಧೆಯಲ್ಲೂ ಮಹಿಳೆಯರು ಖುಷಿಯಿಂದಲೇ ಪಾಲ್ಗೊಂಡಿದ್ದರು. ನಗರ ಪ್ರದೇಶದ ಹೆಣ್ಣು ಮಕ್ಕಳಿಗಿಂತ ತಾವೇನೂ ಕಮ್ಮಿ ಎನ್ನುವುದನ್ನು ಸ್ಪರ್ಧೆ ಉತ್ಸಾಹದ ಮೂಲಕವೇ ತೋರಿಸಿಕೊಟ್ಟರು. ಬಾಯಲ್ಲಿ ಚಮಚ ಇಟ್ಟುಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.
ಎದ್ದುಬಿದ್ದು ಓಡೋಡಿದರು: ಇನ್ನೂ ೫೦ಕೆಜಿ ತೂಕದ ಗೊಬ್ಬರ ಮೂಟೆ ಹೊತ್ತುವ ಸ್ಪರ್ಧೆ ಬಹಳ ರೋಮಾಂಚನಕಾರಿಯಾಗಿತ್ತು. ಹಳ್ಳಿಯಲ್ಲಿ ಕ್ವಿಂಟಾಲ್ ಚೀಲ ಹೊತ್ತುವ ಅಭ್ಯಾಸ ಇದ್ದರೂ ಪಟ್ಟಣದಲ್ಲಿ ಓಡುವ ಸ್ವಭಾವ ಕಡಿಮೆಯಿರುತ್ತದೆ. ಹೀಗಿದ್ದರೂ ಸುಡುವ ಬಿಸಿಲಲ್ಲೂ ಹೆಗಲ ಮೇಲೆ ಗೊಬ್ಬರದ ಮೂಟೆಯನ್ನು ೧೦೦ ಮೀಟರ್ ಹೊತ್ತು ಓಡಿದರು. ಮೂಟೆ ಹೊತ್ತು ಓಡಿ ಬರುವ ರಭಸಕ್ಕೆ ಎಲ್ಲಾದರೂ ಜಾರಿಬಿದ್ದರೆ ಎನ್ನುವ ಕಾರಣಕ್ಕಾಗಿ ಕೆಲವರು ತಡೆದುಕೊಳ್ಳಲು ಸಜ್ಜಾಗಿದ್ದರು.ಆದರೆ, ಕೆಲವರು ನಿಧಾನವಾಗಿ ಓಡಿದರೆ, ಹಲವರು ಮೂಟೆ ಹೊತ್ತು ನಿಗಧಿತ ಗುರಿ ತಲುಪಿ ಸೈ ಎನ್ನಿಸಿಕೊಂಡರು. ಇನ್ನು ಗೋಣಿಚೀಲದ ಒಳಗೆ ಕಾಲಿಟ್ಟು ಓಡುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ರೈತರು ಗೆಲುವಿಗಾಗಿ ಎಲ್ಲ ಶ್ರಮ ಹಾಕಿ ಓಡುವ ಭರದಲ್ಲಿ ಕೆಲವರು ಆಯತಪ್ಪಿ ಬಿದ್ದರೆ,ಹಲವರು ತಮ್ಮ ಜಾಣತನದಿಂದಲೇ ಗುರಿ ತಲುಪಿ ಬಹುಮಾನ ತಮ್ಮದಾಗಿಸಿಕೊಂಡರು. ಇದೇ ರೀತಿ ಪುರುಷರಿಗೆ ಮೂರು ಕಾಲಿನ ಓಟ,ಗುಂಡು ಮಹಿಳಾ ರೈತರಿಗೆ ಚಮಚದಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಓಡುವ ಸ್ಪರ್ಧೆಯು ಎಲ್ಲರು ಕೂತುಹಲದಿಂದ ನೋಡುವಂತೆ ಮಾಡಿತು. ಪುರುಷರ ಮೂರು ಕಾಲಿನ ಓಟದ ಸ್ಪರ್ಧೆ ನೋಡುಗರ ಗಮನ ಸೆಳೆದರೆ, ಮಹಿಳೆಯರ ಒಂಟಿ ಕಾಲಿನ ಓಟದ ವೇಳೆ ಸುತ್ತುವರಿದಿದ್ದವರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.
ಯಳಂದೂರು: ಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ 4 ತಾಸು ಒದ್ದಾಟ ನಡೆಸಿದ ಘಟನೆ ಯಳಂದೂರು ತಾಲ್ಲೂಕಿನ ಗಂಗವಾಡಿಯಲ್ಲಿ…
ಮೈಸೂರು: ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕಾದಾಟ ತೀವ್ರಗೊಳ್ಳುತ್ತಿದ್ದಂತೆ, ಅಹಿಂದ ಸಮಾವೇಶದ ಹೆಸರಿನಲ್ಲಿ ಭಾರೀ ರಾಜಕೀಯ ಚಟುವಟಿಕೆಗಳಿಗೆ ವೇಗ ಸಿಕ್ಕಿದೆ. ಮುಖ್ಯಮಂತ್ರಿ…
ಮೈಸೂರು: ಚಿರತೆಯೊಂದು ರಾತ್ರೋರಾತ್ರಿ ಬೀದಿ ನಾಯಿಯನ್ನು ಹೊತ್ತೊಯ್ದಿರುವ ಘಟನೆ ಮೈಸೂರಿನ ಹೊರವಲಯದ ಬೆಳಗಾವಿ ಗ್ರಾಮದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯಲ್ಲಿ ಕಾಡು…
ಬೆಂಗಳೂರು,- ನಿರಂತರ ಏರಿಕೆಯಿಂದಾಗಿ ಚಿನ್ನ, ಬೆಳ್ಳಿ ಬೆಲೆಯು ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಇಂದು ಪ್ರತೀ ಗ್ರಾಂ ಚಿನ್ನಕ್ಕೆ (24 ಕ್ಯಾರೆಟ್)…
ಅಮೇರಿಕಾ: ಯುವ ರೋಗಿಯನ್ನು ಹಾಗೂ ಇತರ ಏಳು ಜನರನ್ನು ಸಾಗಿಸುತ್ತಿದ್ದ ಮೆಕ್ಸಿಕ್ನ ನೌಕಾಪಡೆಯ ಸಣ್ಣ ವಿಮಾನವು ಗಾಲ್ವೆಸ್ಟನ್ ಬಳಿ ಪತನಗೊಂಡು…
ಬೆಂಗಳೂರು: 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.…