ಮೈಸೂರು

ತಂತ್ರಜ್ಞಾನ ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ : ಅಕ್ರಂ ಪಾಷ

ಮೈಸೂರು :  ಸ್ಪರ್ಧಾತ್ಮಕ ಜಗತ್ತಿನ ಮ್ಯಾರಥಾನ್ ನಲ್ಲಿ ಗೆಲುವು ಗಳಿಸಲು ಪ್ರಯತ್ನ ಗಟ್ಟಿಯಾಗಿರಬೇಕು. ನಿಮ್ಮ ಪ್ರಯತ್ನಕ್ಕೆ ಕರಾರಾನಿ ನೀರೆರೆಯುತ್ತಿದೆ.  ಛಲಬಿಡದೆ ಪ್ರಯತ್ನ ಪಟ್ಟು ಗೆಲುವು ಸಾಧಿಸಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರೂ ಆದ ಹಿರಿಯ ಐ.ಎ.ಎಸ್ ಅಧಿಕಾರಿ ಅಕ್ರಂ ಪಾಷ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿ.ವಿ ಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ‌ಕೇಂದ್ರದ ವತಿಯಿಂದ ಬುಧವಾರ‌ ವಿವಿಯ ಕಾವೇರಿ ಸಭಾಂಗಣದಲ್ಲಿ ನಡೆದ  ಕೆ-ಸೆಟ್  ಮತ್ತು ಯಜಿಸಿ-ನೆಟ್  ಪರೀಕ್ಷೆಗಳ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ  ಭಾಗಿಯಾಗಿ ಅವರು ಮಾತನಾಡಿದರು.

ಸ್ಪರ್ಧೆಯಲ್ಲಿ ಗೆಲುವು ಸುಲಭವಲ್ಲ, ಭಯ ಇರಬೇಕು. ಆ ಭಯ ನಿಮ್ಮನ್ನು ಸದಾ ಎಚ್ಚರಗೊಳಸಿ ಗೆಲುವಿನ ದಾರಿ ತೋರಿಸಬೇಕು. ಹೀಗಾಗಿ  ಬದಲಾಗಿ,‌ ಸಮಯ ಮತ್ತು ಪ್ರಯತ್ನಕ್ಕೆ ಬದ್ಧರಾಗಿರಿ ಎಂದು ಸಲಹೆ ನೀಡಿದರು. ಕೆ-ಸೆಟ್ ಯುಜಿಸಿ ನೆಟ್ ಪರೀಕ್ಷೆ ಯು.ಪಿ.ಎಸ್.ಸಿ ಕೆ.ಪಿ.ಎಸ್.ಸಿ ಪರೀಕ್ಷೆಗಳಷ್ಟೆ ಕಠಿಣವಾದದ್ದು, ಇದರ ಅನುಭವ ನನಗಿದೆ. ಹೀಗಾಗಿ‌ ಸಮಯ ವ್ಯರ್ಥ ಮಾಡದೆ ಇಂದಿನಿಂದಲೇ ಪಠ್ಯಕ್ರಮ ಕಡೆಗೆ ಗಮನಹರಿಸಿ. ಹಿಂದೆ ಇದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲೂ ಕಷ್ಟವಾಗುತ್ತಿತ್ತು. ಯಾವುದೇ ಸೌಲಭ್ಯ ಹಾಗೂ ಸವಲತ್ತು ಇರುತ್ತಿರಲಿಲ್ಲ. ಆದರೆ‌ ಇವಾಗ ಹಾಗಿಲ್ಲ. ಎಲ್ಲಾ ಸೌಲಭ್ಯಗಳಿವೆ. ಮಾಹಿತಿ ತಂತ್ರಜ್ಞಾನ, ಚಾಟ್ ಜಿಪಿಟಿ ಮತ್ತು ಎ.ಐ ಅಂತಹ ಡಿಜಿಟಲ್ ಸಾಧನಗಳಿವೆ. ಚಾಟ್ ಜಿಟಿಪಿಯಲ್ಲಿ ನೀವು 10 ಪ್ರಶ್ನೆ ಕೇಳಿದರೆ 20 ಕ್ಕೂ ಹೆಚ್ಚು ಉತ್ತರ ಸಹಿತ ಪ್ರಶ್ನೆ ಸಿಗುತ್ತವೆ.‌ ಇವುಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಪರೀಕ್ಷೆಯಲ್ಲಿ ಗೆಲುವು ಸಾಧಿಸಿ ಎಂದು‌ ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆ ಟ್ರಬಲ್ ಸೂಟರ್, ವರ್ಷ ಪೂರ್ತಿ ಓದದ್ದು ಮೂರು ಗಂಟೆಯಲ್ಲಿ ತೋರಿಸಬೇಕು. ಹೀಗಾಗಿ ನೀವು ಏನನ್ನು ಓದಬೇಕು, ಎಷ್ಟು ಓದಬೇಕು, ಯಾವಾಗ ಓದಬೇಕು ಎನ್ನುವುದನ್ನು ನಿಗದಿ ಮಾಡಿಕೊಳ್ಳಿ. ಈ ಮೂಲಕ ಗುರಿ ತಲುಪಲು ಸ್ಪಷ್ಟ ದಾರಿ ಹುಡುಕಿ ಕೊಳ್ಳಬೇಕು ಎಂದು ಹೇಳಿದರು. ಪಠ್ಯಕ್ರಮವನ್ನು ದಿನ ನೋಡಬೇಕು. ಹಂತಹಂತವಾಗಿ ಅದನ್ನು ಪೂರ್ಣಗೊಳಿಸುತ್ತ ಹೋಗಬೇಕು. ಅಂತಿಮವಾಗಿ ಗುರಿ ತಲುಪುವವರೆಗೂ ಛಲ ಬಿಡಬಾರದು ಎಂದು ವಿವರಿಸಿದರು.

ಈ ಮಧ್ಯೆ ಮೊಬೈಲ್‌ ನಿಮ್ಮನ್ನು ದಾರಿ ತಪ್ಪಿಸುತ್ತದೆ. ಸ್ಕ್ರಾಲ್ ಮಾಡುವ ಕೆಟ್ಟ ಚಾಳಿ ನಿಮ್ಮನ್ನು ದಾರಿ ತಪ್ಪಿಸುತ್ತಿದೆ. ಇದರಿಂದ ನಿದ್ರೆ ಸೇರಿದಂತೆ ಭವಿಷ್ಯಕ್ಕೂ ಕುತ್ತುಂಟಾಗಲಿದೆ. ಗೆಲವು ಸಿಗುವವರೆಗೂ ಎಲ್ಲವನ್ನು ತೊರೆಯಿರಿ ಎಂದು ಎಚ್ಚರಿಸಿದರು. ಯುವ ಜನರು ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು. ನೀವು ಮುಂದೆ ಅಧಿಕಾರಿಯಾದಾಗ ನಿಮ್ಮ ಊರು, ನಿಮ್ಮ ಶಾಲೆಗಳಿಗೆ ನೆರವು ನೀಡಿ. ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಅನೇಕ ಸುಧಾರಣೆಗಳನ್ನು ತನ್ನಿ ಎಂದ ಅವರು ತಮ್ಮ ವೃತ್ತಿ ಜೀವನ ಹಾಗೂ ಶಿಕ್ಷಕರಾಗಿದ್ದ ಅನುಭವಗಳನ್ನು ಬಿಚ್ಚಿಟ್ಟರು.

ಕ.ರಾ.ಮು.ವಿ ಯ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅವರು ಮಾತನಾಡಿ,  ನಮ್ಮ ವಿವಿಯ 45  ದಿನಗಳ ತರಬೇತಿ ನಿಮಗೆ ಸ್ಪರ್ಧಾತ್ಮಕ ಪರೀಕ್ಷಾ  ಜ್ಞಾನವನ್ನು ದ್ವಿಗುಣಗೊಳಿಸಲಿದೆ ಎಂದರು. ಪ್ರಯತ್ನ ಪಟ್ಟರೆ‌ ದೇವರೆ ಒಲಿಯುತ್ತಾನೆ. ಹೀಗಾಗಿ ನಿಮ್ಮ ಗುರಿ ಕಡೆ ಪ್ರಯತ್ನ ನಿರಂತರವಿರಲಿ. ಸಮಯದ ಪರಿಪಾಲನೆ ಮಾಡಿ. ಗುರು ಮತ್ತು ಗುರಿ ನಿಮ್ಮನ್ನು ದಡ ಸೇರಿಸಲಿದೆ ಎಂದು‌ ಹೇಳಿದರು.

ಕುಲಸಚಿವ ಪ್ರೊ.ನವೀನ್ ಕುಮಾರ್ ಅವರು ಮಾತನಾಡಿ,  ಶಿಕ್ಷಣ ಮತ್ತು ಅನ್ನ ದೇಶದ ದೊಡ್ಡ ಕ್ರಾಂತಿಗಳು. ಶಿಕ್ಷಣದ ಮೂಲಕ ಉತ್ತಮ‌ ಸಾಧನೆ ಮಾಡಿ ತೋರಿಸಿ. ನಿಮ್ಮ ಶಿಕ್ಷಕರ‌‌‌ ಬಳಿ ಶೈಕ್ಷಣಿಕದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಿ. ಶಿಕ್ಷಕರು ಸಹ ಅಷ್ಟೇ ಪ್ರೀತಿ, ವಿಶ್ವಾಸದಿಂದ ಪಾಠ ಹೇಳಬೇಕು. ಕೆಟ್ಟ ಶಿಕ್ಷಕ ಭಯೋತ್ಪಾದನೆಗೆ ಸಮವಿದ್ದಂತೆ ಎಂದರು.

ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್ ಆನಂದ್ ಕುಮಾರ್,‌ ಶೈಕ್ಷಣಿಕ ಡೀನ್ ರಾಮಾನಾಥಂ ನಾಯ್ಡು, ಹಣಕಾಸು ಅಧಿಕಾರಿ ನಿರಂಜನ್‌ ಮಾತನಾಡಿದರು.‌ ಸಮಾರಂಭದಲ್ಲಿ ಸಂಯೋಜಕ ಜೈನಹಳ್ಳಿ ಸತ್ಯನಾರಾಯಣ, ಸಿದ್ದೇಶ್, ಗಣೇಶ್ ಸೇರಿದಂತೆ ಶಿಬಿರಾರ್ಥಿಗಳು ಇದ್ದರು.

ಆಂದೋಲನ ಡೆಸ್ಕ್

Recent Posts

ಕೆಪಿಎಸ್‌ಸಿ ಮುಚ್ಚುವ ಬಗ್ಗೆ ಚಿಂತನೆ: ಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಕೆಪಿಎಸ್‌ಸಿಯಲ್ಲಿ ಹಗರಣಗಳು ಹೆಚ್ಚಿವೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇನೆ ಎಂದು ಸಿಎಂ…

9 hours ago

ನಂಜನಗೂಡು: ಬೋನಿಗೆ ಬಿದ್ದ ಚಿರತೆ

ನಂಜನಗೂಡು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ಸುಮಾರು…

9 hours ago

ವಂದೇ ಮಾತರಂ ಅರ್ಧಕ್ಕೆ ಕಡಿತ: ಆದೇಶ ಮರುಪರಿಶೀಲನೆಗೆ ರಾಜ್ಯಪಾಲರ ಸೂಚನೆ

ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ…

9 hours ago

ಮದ್ದೂರಿನಲ್ಲಿ ನಿವೃತ್ತ ಹಾಸ್ಟೆಲ್ ಅಧೀಕ್ಷಕನ ಮನೆ ಮೇಲೆ ಲೋಕಾಯುಕ್ತ ದಾಳಿ

ಮದ್ದೂರು: ಮದ್ದೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಹಾಸ್ಟೆಲ್…

11 hours ago

ಮಂಡ್ಯದಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ

ಮಂಡ್ಯ: ನಗರದ ಗಾಂಧಿನಗರದಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಗಾಂಧಿನಗರ ನಿವಾಸಿ 47 ವರ್ಷದ ಪುರುಷೋತ್ತಮ್…

13 hours ago

ಓದುಗರ ಪತ್ರ: ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಸ್ವಾಗತಾರ್ಹ

ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…

18 hours ago