ಮೈಸೂರು

ಮೈಸೂರು | ವೃದ್ಧೆಯನ್ನು ಬೆದರಿಸಿ 37 ಲಕ್ಷ ರೂ. ವಂಚನೆ : ದೂರು ದಾಖಲು

ಮೈಸೂರು : ನಿಮ್ಮ ಖಾತೆಯಲ್ಲಿ ಮನಿ ಲ್ಯಾಂಡ್ರಿಂಗ್ ನಡೆದಿದೆ. ಪಿಎಫ್‌ಐ ಸಂಘಟನೆಯಿಂದ ನಿಮ್ಮ ಖಾತೆಗೆ ಎರಡೂವರೆ ಕೋಟಿ ರೂ. ಜಮಾ ಆಗಿದೆ ಎಂದು ಬೆದರಿಸಿ ನಗರದ ವೃದ್ಧೆಯೊಬ್ಬರಿಂದ 37.82 ಲಕ್ಷ ರೂ. ಲಪಟಾಯಿಸಿರುವ ಘಟನೆ ನಡೆದಿದೆ.

ಜೆ.ಪಿ.ನಗರ ನಿವಾಸಿಯಾದ 73 ವರ್ಷದ ಮಹಿಳೆಗೆ ಜು.12 ರಂದು ವಾಟ್ಸಾಪ್ ಸಂದೇಶ ಕಳುಹಿಸಿ, ಕೆಲವೇ ಕ್ಷಣಗಳಲ್ಲಿ ವಾಟ್ಸಾಪ್ ವಿಡಿಯೋ ಕರೆ ಮಾಡಿದ ವಂಚಕರು, ಮುಂಬೈನಲ್ಲಿರುವ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಯೂನಿಟ್‌ನಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದಾರೆ.

ಸಮವಸ್ತ್ರದಲ್ಲಿದ್ದ ವ್ಯಕ್ತಿ ವಿಡಿಯೋ ಕರೆಯಲ್ಲಿ ಮಾತನಾಡಿದ್ದರಿಂದ ಮಹಿಳೆ ನಂಬಿದ್ದಾರೆ. ಕರೆ ಮಾಡಿದ ಕಾರಣ ಕೇಳಿದಾಗ ಪ್ರಕರಣವೊಂದರ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಡೀಟೆಲ್ಸ್ ಫೋಟೋಗಳನ್ನು ಕಳುಹಿಸುವಂತೆ ತಿಳಿಸಿದ್ದಾರೆ.

ವಂಚಕರ ಮಾತು ನಂಬಿದ ಮಹಿಳೆ, ಅವರು ಕೇಳಿದ್ದ ದಾಖಲೆಗಳ ಫೋಟೋ ಕಳುಹಿಸಿದ್ದಾರೆ. ಕೆಲಹೊತ್ತು ಪರಿಶೀಲನೆ ನಾಟಕವಾಡಿದ ವಂಚಕರು, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ದು, ಖಾತೆಯನ್ನು ಮನಿ ಲ್ಯಾಂಡ್ರಿಂಗ್‌ಗಾಗಿ ವ್ಯಕ್ತಿಯೊಬ್ಬರಿಗೆ ನೀಡಲಾಗಿದೆ.

ಟೆರರಿಸಂ ಫಂಡ್‌ಗೆ ಹಣ ಬಳಸಿಕೊಳ್ಳಲು ನಿಮ್ಮ ಖಾತೆಗೆ ಪಿಎಫ್‌ಐನಿಂದ ಎರಡೂವರೆ ಕೋಟಿ ರೂ.ಹಣ ಬಂದಿದೆ ಎಂದಿದ್ದಾರೆ. ಇದರಿಂದ ಭಯಗೊಂಡ ಮಹಿಳೆ, ಇದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಪರಿಪರಿಯಾಗಿ ಹೇಳಿದರೂ ಕೇಳದ ವಂಚಕರು, ನಿಮ್ಮ ಮೇಲೆ ಕೇಸ್ ದಾಖಲಾಗಿದ್ದು, ಅರೆಸ್ಟ್ ವಾರೆಂಟ್ ಕೂಡ ಜಾರಿ ಯಾಗಿದೆ ಎಂದು ಹೇಳಿ ಮತ್ತಷ್ಟು ಹೆದರಿಸಿದ್ದಾರೆ.

ಮಹಿಳೆ ಆತಂಕಗೊಂಡು ದಿಕ್ಕು ತೋಚದ್ದನ್ನು ಗಮನಿಸಿದ ವಂಚಕರು ನಿಮ್ಮ ಖಾತೆಯಲ್ಲಿ ಇರುವ ಹಣವನ್ನು ವರ್ಗಾವಣೆ ಮಾಡಿದರೆ ವಾಪಸ್ ಜಮೆ ಮಾಡುತ್ತೇವೆ ಎಂದಿದ್ದಾರೆ. ಗಾಬರಿಯಲ್ಲಿದ್ದ ಮಹಿಳೆ ಜು.15, 19, 24 ರಂದು ಹಂತ ಹಂತವಾಗಿ ಒಟ್ಟು 37.82 ಲಕ್ಷ ರೂ. ಜಮೆ ಮಾಡಿ, ಮೋಸ ಹೋಗಿದ್ದಾರೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಂದೋಲನ ಡೆಸ್ಕ್

Recent Posts

ಟ್ರಂಪ್‌ ಭಾಷಣದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಭಾರೀ ಏರಿಕೆ

ವಾಷಿಂಗ್ಟನ್:‌ ಯುದ್ಧಕ್ಕೆ ಸಂಬಂಧಿಸಿದಂತೆ ಅಮೇರಿಕಾ ಪ್ರಜೆಗಳನ್ನು ಉದ್ದೇಶಿಸಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾಷಣ ಮಾಡಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ…

13 mins ago

ಮಂಡ್ಯದಲ್ಲಿಂದು ವಿಶ್ವ ಹಿಂದೂ ಪರಿಷತ್‌ ಬೃಹತ್‌ ಶೋಭಾಯಾತ್ರೆ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಇಂದು ವಿಶ್ವ ಹಿಂದೂ ಪರಿಷತ್‌ ವತಿಯಿಂದ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ನಗರದಾದ್ಯಂತ ಕೇಸರಿ ಬಾವುಟ, ಬ್ಯಾನರ್‌,…

32 mins ago

2 ಅಥವಾ ಮೂರು ವಾರಗಳಲ್ಲಿ ಯುದ್ಧ ಅಂತ್ಯ: ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್:‌ ಇನ್ನು ಎರಡು ಅಥವಾ ಮೂರು ವಾರಗಳಲ್ಲಿ ಯುದ್ಧ ಅಂತ್ಯಗೊಳ್ಳಲಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ದೇಶವನ್ನು…

1 hour ago

ಶ್ರೀ ಸಬ್ಬಮ್ಮ ನೆಲೆಯ ಮಲೆನಾಡಿನಾದ್ಯಂತ ಸುಗ್ಗಿ ಉತ್ಸವ ಶುರು

ಲಕ್ಷ್ಮಿಕಾಂತ್ ಕೊಮಾರಪ್ಪ ಗ್ರಾಮೀಣ ಭಾಗದಲ್ಲಿ ಮನೆಮಾಡಿದ ಸಂಭ್ರಮ; ಭಕ್ತಿ ಭಾವದಿಂದ ಪ್ರಕೃತಿ-ಗ್ರಾಮದೇವಿಗೆ ಪೂಜೆ ಸೋಮವಾರಪೇಟೆ: ಗ್ರಾಮೀಣ ಪ್ರದೇಶದ ಜನಪದದ ಪ್ರಮುಖ…

2 hours ago

ಚಾಮರಾಜನಗರದಲ್ಲಿ ನೀರಿನ ಸಮಸ್ಯೆ ಮುಂದೆ ಇನ್ನೂ ಉಲ್ಭಣ!

ಬೇಸಿಗೆ ತಾಪಮಾನದ ಪರಿಣಾಮವಾಗಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಬಹುದು ಎಂದು ವರದಿ ನೀಡಿಕೆ... ಚಾಮರಾಜನಗರ: ಬೇಸಿಗೆಯ ತಾಪಮಾನದ ಪರಿಣಾಮವಾಗಿ ಕುಡಿಯುವ…

2 hours ago

ಚಂದಿರನತ್ತ ಮಾನವ: ಆರ್ಟೆಮಿಸ್‌-II ಮಿಷನ್‌ ಉಡಾವಣೆ ಯಶಸ್ವಿ

ಫ್ಲೋರಿಡಾ: 50 ವರ್ಷಗಳ ಬಳಿಕ ಚಂದಿರನ ಅನ್ವೇಷಣೆಗೆ ಹೊರಟಿರುವ ನಾಸಾ ಐತಿಹಾಸಿಕ ಆರ್ಟೆಮಿಸ್‌-II ಮಿಷನ್‌ ಉಡಾವಣೆ ಯಶಸ್ವಿಯಾಗಿದೆ. ಅಮೇರಿಕಾದ ಕಾಲಮಾನ…

2 hours ago