ಮೈಸೂರು : ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಸುತ್ತಮುತ್ತಲಿನ ಹಾಗೂ ನಗರದ ಸೌಂದರ್ಯ ವೀಕ್ಷಣೆಗೆ ಅಡೆತಡೆಯಾಗಿದ್ದ ಮರಗಳ ರೆಂಬೆ ಹಾಗೂ ಕೊಂಬೆಗಳ ತೆರವು ಕಾರ್ಯಾಚರಣೆ ಶುರುವಾಗಿದೆ.
ಜಂಬೂಸವಾರಿ ಸಾಗುವ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ರಸ್ತೆ ಬದಿಗಳಲ್ಲಿನ ಬೃಹತ್ ಮರಗಳಲ್ಲಿ ಒಣಗಿರುವ ಅಪಾಯಕಾರಿ ರೆಂಬೆ ಹಾಗೂ ಕೊಂಬೆಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು, ಅದರಂತೆ ಇಂದು ಅರಮನೆ ಸುತ್ತ ಇರುವ ರಸ್ತೆಗಳು, ಗನ್‌ಹೌಸ್ ರಸ್ತೆ, ಹಾರ್ಡಿಂಗ್ ವೃತ್ತ, ಕಾಡಾ ಕಚೇರಿ ರಸ್ತೆ, ಕೆ.ಆರ್.ರಸ್ತೆಗಳಲ್ಲಿ ಇರುವ ಬೃಹತ್ ಮರಗಳನ್ನು ಪರಿಶೀಲಿಸಿದ ಬಳಿಕ, ಒಣಗಿ ಬೀಳುವ ಮಟ್ಟದಲ್ಲಿರುವ ರೆಂಬೆ-ಕೊಂಬೆಗಳನ್ನು ಯಂತ್ರದ ಮೂಲಕ ಕತ್ತರಿಸಲಾಯಿತು.
ಇದನ್ನು ಓದಿ:ದಸರಾ ಸಾಂಸ್ಕೃತಿಕವಾಗಿ ಮಾಡುವ ನಾಡಹಬ್ಬ: ಸಿಎಂ ಸಿದ್ದರಾಮಯ್ಯ
ಹಾರ್ಡಿಂಜ್ ವೃತ್ತದಿಂದ ಗನ್ ಹೌಸ್ ವೃತ್ತದವರೆಗೆ ತೆರವು ಕಾರ್ಯಾಚರಣೆಯನ್ನು ನಗರ ಪಾಲಿಕೆಯ ತೋಟಗಾರಿಕೆ ವಿಭಾಗದ ಸಿಬ್ಬಂದಿ ಮಾಡಿದರು. ಕಾರ್ಯಾಚರಣೆ ವೇಳೆ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು.
ದಸರಾ ದೀಪಾಲಂಕಾರಕ್ಕಾಗಿ ಹಲವೆಡೆ ಕಂಬಗಳನ್ನು ಅಳವಡಿಸುತ್ತಿರುವ ಚಾಮುಂಡೇಶ್ವರಿ ವಿದ್ಯತ್ ಸರಬರಾಜು ನಿಗಮದವರು ಕೂಡ ಮರಗಳಿಂದ ಅಪಾಯಕಾರಿ ರೆಂಬೆ, ಕೊಂಬೆಗಳನ್ನು ತೆರವುಗೊಳಿಸಿ ಜಾಗ್ರತೆ ವಹಿಸುತ್ತಿದೆ. ಮಳೆಯಾದರೆ ಹಸಿ ಮರಗಳಿಗೆ ವಿದ್ಯುತ್ ಸ್ಪರ್ಶಿಸಿ ಅಪಾಯ ಎದುರಾಗಬಹುದು. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಅಪಾಯಕಾರಿ ಮರಗಳ ರೆಂಬೆ, ಕೊಂಬೆ ತೆರವುಗೊಳಿಸಲಾಗುತ್ತಿದೆ.
1 ಕೆ.ಜಿ.ಬೆಳ್ಳಿಗೆ 3.30 ಲಕ್ಷ ರೂಪಾಯಿ ಹೈದರಾಬಾದ್ : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ನಿಲ್ಲುತ್ತಿಲ್ಲ. ಬುಧವಾರ ಹಳದಿ…
ಮೈಸೂರು : ಸೋಮವಾರ ತಡರಾತ್ರಿ ಯುವಕನೋರ್ವನನ್ನು ಐವರ ಗುಂಪು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ…
ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟಿರುವುದರಿಂದ ಚಿರತೆ…
ಇಡಿ ಬಂಧನದಿಂದ ಬಿಡುಗಡೆ ಕೋರಿ ಮಾಜಿ ಆಯುಕ್ತ ಸಲ್ಲಿಸಿದ್ದ ಅರ್ಜಿ ತಿರಸ್ಕಾರ ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ…
ಬೆಂಗಳೂರು : ಜನವರಿ ಅಂತ್ಯ ಅಥವಾ ಫೆಬ್ರವರಿ 10ರೊಳಗೆ ಮಧುಸೂದನ್ ನಾಯಕ್ ಅವರ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ…
ಹೆಚ್.ಡಿ.ಕೋಟೆ : ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶ, ನಾಗರಹೊಳೆ-ಬಂಡೀಪುರ ಅರಣ್ಯ ವ್ಯಾಪ್ತಿ ಹಾಗೂ ಪರಿಸರ ಸಂವೇದಿ ವಲಯಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ…