ಮೈಸೂರು

ಡ್ರಗ್ಸ್‌ ಪತ್ತೆ | ಗುಪ್ತಚರ, ಪೊಲೀಸ್‌ ವೈಫಲ್ಯ ಇದೆ : ಶಾಸಕ ತನ್ವೀರ್‌ ಸೇಠ್‌

ಮೈಸೂರು : ಮೈಸೂರಿನಲ್ಲಿ ಡ್ರಗ್ಸ್ ಪತ್ತೆಯಾದ ವಿಚಾರದಲ್ಲಿ ಗುಪ್ತಚರ, ಪೊಲೀಸ್ ವ್ಯವಸ್ಥೆ ವಿಫಲತೆ ಕಾಣುತ್ತಿದೆ ಎಂದು ಶಾಸಕ ತನ್ವೀರ್ ಸೇಠ್ ಕಿಡಿಕಾರಿದರು.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಗರೀಕ ಸಮಾಜದ ವಿರುದ್ಧ ನಡೆಯುವ ಯಾವುದೇ ಚಟುವಟಿಕೆ ನಡೆಯಬಾರದು. ಅದನ್ನು ಬೆಂಬಲಿಸುವ ಕೆಲಸ ನಾವು ಎಂದೂ ಸಹ ಮಾಡಿಲ್ಲ. ಇಂತಹದ್ದು ನಡೆಯುತ್ತಿದೆ ಎನ್ನುವುದು ತಿಳಿದಿಲ್ಲ. ಅಂದರೆ ಇಂಟಲಿಜನ್ಸ್ ವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆ ವಿಫಲತೆ ಕಾಣುತ್ತಿದೆ. ನನ್ನ ಭಾಗಕ್ಕೆ ಕಾನೂನು ಹಾಗೂ ಸಂಚಾರ ವ್ಯವಸ್ಥೆ ಕಡೆಗಣಿಸುವುದು ಹೆಚ್ಚಾಗಿ ಕಾಣುತ್ತಿದೆ. ಹೊರ ವಲಯ ರಸ್ತೆಗಳಲ್ಲಿ ಹೆಚ್ಚು ಕಡಿವಾಣ ಮತ್ತು ನಿಗಾ ವಹಿಸಬೇಕು. ಈ ಬಗ್ಗೆ ಪೊಲೀಸ್ ಆಯುಕ್ತರು ಹಾಗೂ ಸರ್ಕಾರದ ಬಳಿ ಮಾತನಾಡಿದ್ದೇನೆ ಎಂದರು.

ಸಂಸತ್ತಿನಲ್ಲೂ ಮೈಸೂರು ಉದಯಗಿರಿ ಬಗ್ಗೆ ಚರ್ಚೆ ಆಗಿದೆ. ಉದಯಗಿರಿಯಲ್ಲಿ ಹೊಸ ಪೊಲೀಸ್ ಠಾಣೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸರ್ಕಾರ ಹೊಸ ಪೊಲೀಸ್ ಠಾಣೆಯನ್ನು ಮಂಜೂರು ಮಾಡಿದೆ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಚುನಾವಣೆ ಸಮಯದಲ್ಲಿ ಪಕ್ಷ ಪ್ರತಿಪಕ್ಷ ಎನ್ನುವ ವಿಚಾರ ಬರಬೇಕು. ಆರೋಪಗಳನ್ನೆಲ್ಲ ಕೇವಲ ಒಬ್ಬರ ಮೇಲೆ ಹಾಕಬಾರದು. ಸಂಸದರು ಹಾಗೂ ಶಾಸಕರಿಗೆ ಚರ್ಚೆ ಮಾಡಲು ಅವಕಾಶ ಇದೆ. ಸರ್ಕಾರದಿಂದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದೇವೆ. ರಾಜ್ಯದ ಹಿತ ಕಾಪಾಡುವುದು ಬಿಟ್ಟು ಸಂಸತ್‌ನಲ್ಲಿ ಮಾತಾನಾಡುವುದು ಶೋಭೆ ತರುವಂತಹದ್ದಲ್ಲ ಎಂದು ತಿಳಿಸಿದರು.

ಮೈಸೂರಿನಲ್ಲಿ ಡ್ರಗ್ ಪತ್ತೆಹಚ್ಚಲು ಮಹಾರಾಷ್ಟ್ರದ ಪೊಲೀಸರು ಬರಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ತನ್ವೀರ್ ಸೇಠ್, ನೋಡಿ ನಮ್ಮ ಬೆನ್ನು ನಮಗೆ ಕಾಣಲ್ಲ ಮಹಾರಾಷ್ಟ್ರ ಪೊಲೀಸರಿಗೆ ದಸ್ತಗಿರಿ ಮಾಡಿದ ವ್ಯಕ್ತಿಯಿಂದ ಮಾಹಿತಿ ಸಿಕ್ಕಿದ್ದು. ಅವರಿಗೇನು ಕನಸುಬಿದ್ದು ಮೈಸೂರಿಗೆ ಬಂದಿಲ್ಲ. ಆಡಳಿತದಲ್ಲಿ ಲೋಪ ಆಗಿದೆ ಅದನ್ನು ಒಪ್ಪಬೇಕು. ಗುಪ್ತಚರ ಪೊಲೀಸರ ವೈಫಲ್ಯವೂ ಇದಕ್ಕೆ ಕಾರಣ. ಎಲ್ಲಾ ಕಾಲದಲ್ಲೂ ಅದೇ ಪೊಲೀಸ್ ವ್ಯವಸ್ಥೆ ಇತ್ತು ಎನ್ನುವುದನ್ನು ಮರೆಯಬಾರದು. ಒಪ್ಪುವ ವಿಚಾರ ಒಪ್ಪಬೇಕು. ಇಲ್ಲವಾದ ವಿಚಾರ ಒಪ್ಪುವುದಿಲ್ಲ ಅಷ್ಟೇ .ಸುರಕ್ಷತೆ ವಿಚಾರದಲ್ಲಿ ಪೊಲೀಸ್ ಇಲಾಖೆ ಮತ್ತಷ್ಟು ಜಾಗೃತವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಂಸತ್‌ನಲ್ಲಿ ಸಂಸದ ಯದುವೀರ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಅಲ್ಲಿ ಮಾತನಾಡುವುದರಿಂದ ಸಂಸತ್ ಏನು ಮಾಡುತ್ತೆ? ಚುನಾವಣೆಯಿಂದ ಗೆದ್ದು ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ ನಾವೇನು ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿಲ್ಲ. ೨೦೦೬, ೨೦೦೮, ೨೦೧೯ರ ಚುನಾವಣೆಯಲ್ಲಿ ಬಿಜೆಪಿ ಬಹುಮತ ಎಷ್ಟಿತ್ತು? ಜನರ ತೀರ್ಪನ್ನು ಧಿಕ್ಕರಿಸಿ ಮತದಾರರಿಗೆ ಮೋಸ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಇಂತಹ ವಿಚಾರಗಳನ್ನು ಚರ್ಚೆ ಮಾಡುವ ಅಗತ್ಯ ಇಲ್ಲ. ಆಡಳಿತದಲ್ಲಿರುವ ಮುಖ್ಯಮಂತ್ರಿ ಮನೆ ಮನೆಗೆ ಹೋಗಿ ನಿಲ್ಲಲು ಸಾಧ್ಯವಿಲ್ಲ. ವ್ಯವಸ್ಥೆಯಲ್ಲಿ ಲೋಪ ಆಗಿದ್ದರೆ ಸರಿಮಾಡುವುದರ ಕಡೆಗೆ ಗಮನಹರಿಸಬೇಕು.ಅದು ಬಿಟ್ಟು ಬೇರೆ ರೀತಿ ಮಾತುಗಳು ಬೇಡ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ಕೆಪಿಎಸ್‌ಸಿ ಮುಚ್ಚುವ ಬಗ್ಗೆ ಚಿಂತನೆ: ಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಕೆಪಿಎಸ್‌ಸಿಯಲ್ಲಿ ಹಗರಣಗಳು ಹೆಚ್ಚಿವೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇನೆ ಎಂದು ಸಿಎಂ…

5 hours ago

ನಂಜನಗೂಡು: ಬೋನಿಗೆ ಬಿದ್ದ ಚಿರತೆ

ನಂಜನಗೂಡು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ಸುಮಾರು…

5 hours ago

ವಂದೇ ಮಾತರಂ ಅರ್ಧಕ್ಕೆ ಕಡಿತ: ಆದೇಶ ಮರುಪರಿಶೀಲನೆಗೆ ರಾಜ್ಯಪಾಲರ ಸೂಚನೆ

ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ…

5 hours ago

ಮದ್ದೂರಿನಲ್ಲಿ ನಿವೃತ್ತ ಹಾಸ್ಟೆಲ್ ಅಧೀಕ್ಷಕನ ಮನೆ ಮೇಲೆ ಲೋಕಾಯುಕ್ತ ದಾಳಿ

ಮದ್ದೂರು: ಮದ್ದೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಹಾಸ್ಟೆಲ್…

7 hours ago

ಮಂಡ್ಯದಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ

ಮಂಡ್ಯ: ನಗರದ ಗಾಂಧಿನಗರದಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಗಾಂಧಿನಗರ ನಿವಾಸಿ 47 ವರ್ಷದ ಪುರುಷೋತ್ತಮ್…

9 hours ago

ಓದುಗರ ಪತ್ರ: ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಸ್ವಾಗತಾರ್ಹ

ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…

14 hours ago