ಮೈಸೂರು

ಚನ್ನಪಟ್ಟಣದಿಂದ ಡಿಕೆ ಸ್ಪರ್ಧೆ ಕೇವಲ ರಾಜಕೀಯ ಗಿಮಿಕ್‌ ಅಷ್ಟೆ: ಜಿಟಿ ದೇವೇಗೌಡ

ಮೈಸೂರು: ಕೇಂದ್ರ ಸಚಿವರಾಗಿ ನೇಮಕಗೊಂಡಿರುವ ಎಚ್‌ಡಿ ಕುಮಾರಸ್ವಾಮಿ ಅವರ ಚನ್ನಪಟ್ಟಣ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಎಚ್‌ಡಿಕೆಯಿಂದ ತೆರವಾಗಿರುವ ಕ್ಷೇತ್ರದಿಂದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಸ್ಪರ್ಧೆ ಮಾಡುವುದಿಲ್ಲ. ಇದೊಂದು ಕೇವಲ ರಾಜಕೀಯ ಗಿಮಿಕ್‌ ಅಷ್ಟೆ ಎಂದು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಇದು ನನ್ನ ರಾಜಕೀಯ ಅನುಭವದಿಂದ ಹೇಳುತ್ತಿರುವ ಮಾತು. ಡಿಕೆಶಿ ಅವರ ಮಾತಿನಲ್ಲಿ ಕೇವಲ ರಾಜಕೀಯ ತಂತ್ರಗಾರಿಕೆಯಷ್ಟೆ ಇದೆ. ಈ ಕ್ಷೇತ್ರದಿಂದ ಡಿಕೆ ಸುರೇಶ್‌ ಸ್ಪರ್ಧೆ ಮಾಡಿಸುವ ಮೂಲಕ ನಾನು ಮತ ಕೇಳಿದರೇ ನೀಡುತ್ತಾರಾ ಎಂದು ಅವರು ಚನ್ನಪಟ್ಟಣ ಜನರನ್ನು ಕೇಳುತ್ತಿದ್ದಾರೆ ಎಂದರು.

ಚನ್ನಪಟ್ಟಣ ಕ್ಷೇತ್ರದಿಂದ ನಿಖಿಲ್‌ ಸ್ಪರ್ಧೇ ವಿಚಾರವಾಗಿ ಎಲ್ಲಿಯೂ ಹೇಳಿಲ್ಲ. ಜನಗಳ ಅಭಿಪ್ರಾಯ ನನ್ನ ಪರವಾಗಿದೆ ಎಂದಷ್ಟೆ ಸಿ.ಪಿ ಯೋಗೇಶ್ವರ್‌ ಹೇಳಿದ್ದಾರೆ. ಈ ಸ್ಪರ್ಧೆ ಬಗ್ಗೆ ಮೈತ್ರಿ ಹೈಕಮಾಂಡ್‌ ತೀರ್ಮಾನ ಮಾಡಲಿದೆ.

ಇನ್ನು ನಮ್ಮ ಸ್ಪರ್ಧಿ ಯಾರೆಂದು ಈವರೆಗೂ ಚಿಂತನೆ ಮಾಡಿಲ್ಲ. ಕೋರ್‌ ಕಮಿಟಿ ಅಧ್ಯಕ್ಷ ನಾನೇ ಆಗಿರುವ ಕಾರಣ ವೈಯಕ್ತಿಕ ಅಭಿಪ್ರಾಯ ಹೇಳಲು ಆಗುವುದಿಲ್ಲ ಈ ಬಗ್ಗೆ ಕೋರ್‌ ಕಮಿಟಿಯಲ್ಲಿ ಚರ್ಚೆ ಮಾಡಿ ನಾನೇ ಮಾಹಿತಿ ನೀಡುತ್ತೇನೆ ಎಂದು ಜಿಟಿಡಿ ತಿಳಿಸಿದರು.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಅಪರಿಚಿತ ವ್ಯಕ್ತಿಯ ಕೊಲೆ ಜಾಡು ಪತ್ತೆ!

ಮೈಸೂರು : ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮದ್ಯ ಸೇವಿಸಿ ಬಂದು ಕಿರುಕುಳ…

6 mins ago

ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ಪ್ರವಾಸಿಗರ ಮೇಲೆ ಏಕಾಏಕಿ ಕಾಡಾನೆ ದಾಳಿ

ರಾಮನಗರ : ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ಪ್ರವಾಸಿಗರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಸಂಗಮ ಅರಣ್ಯ ಪ್ರದೇಶದ ಮೇಕೆದಾಟು…

50 mins ago

ಕೊಡಗು | ಜಿಲ್ಲೆಯಲ್ಲಿ 2-3 ಸಾವಿರ ಅನಧಿಕೃತ ಹೋಂಸ್ಟೇ!

ಅನಧಿಕೃತ ಹೋಂಸ್ಟೇಗಳ ವಿರುದ್ಧ ಕ್ರಮಕ್ಕೆ ಒತ್ತಾಯ ; ವಿದೇಶಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದ ಬೆನ್ನಲ್ಲೇ ಕ್ರಮಕ್ಕೆ ಆಗ್ರಹ  ನವೀನ್…

1 hour ago

ಕೋಟೆ | ರೆಸಾರ್ಟ್‌, ಹೋಂ ಸ್ಟೇಗಳ ಮೇಲೆ ಹೆಚ್ಚಿನ ನಿಗಾ

ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಿರುವ ಕುರಿತು ಪರಿಶೀಲಿಸುತ್ತಿರುವ ಅಧಿಕಾರಿಗಳು ಎಚ್.ಡಿ.ಕೋಟೆ : ಕಬಿನಿ ಜಲಾಶಯದ ಹಿನ್ನೀರು ಮತ್ತು ನಾಗರಹೊಳೆ, ಬಂಡೀಪುರ…

2 hours ago

ಆಂದೋಲನ ದಿನಪತ್ರಿಕೆಯ ಗಾಂಧಿ ಅಭಿಯಾನ | ಮಕ್ಕಳ ಮನದಂಗಳದಲ್ಲಿ ಗಾಂಧೀ ಚಿಂತನೆಯ ಬೇರುಗಳು

ಅಸ್ಪೃಶ್ಯರನ್ನು ಅವರ ನೋವುಗಳಿಂದ ಮುಕ್ತಗೊಳಿಸಲು ಶ್ರಮಿಸಿದ ಮಹಾತ್ಮ ಯಾವುದೇ ಸಮಸ್ಯೆಗೆ ಆಯುಧಗಳು ಮಾತ್ರ ಉತ್ತರವಲ್ಲ ಎಂದು ಮಹಾತ್ಮ ಗಾಂಧಿ ಯಾವಾಗಲೂ…

2 hours ago

ಇರುವೆ ಕಚ್ಚಿ ಶಿಶು ಸಾವು ಪ್ರಕರಣ ; ವೈದ್ಯರು ಸೇರಿ 7 ಮಂದಿಗೆ ಶೋಕಾಸ್‌ ನೋಟಿಸ್

ಮೈಸೂರು : ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ಇರುವೆ ಕಚ್ಚಿ ನವಜಾತ ಶಿಶು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಸಿಯುನ ಉಸ್ತುವಾರಿ ವೈದ್ಯರು…

2 hours ago