ಅಸ್ಪೃಶ್ಯರನ್ನು ಅವರ ನೋವುಗಳಿಂದ ಮುಕ್ತಗೊಳಿಸಲು ಶ್ರಮಿಸಿದ ಮಹಾತ್ಮ
ಯಾವುದೇ ಸಮಸ್ಯೆಗೆ ಆಯುಧಗಳು ಮಾತ್ರ ಉತ್ತರವಲ್ಲ ಎಂದು ಮಹಾತ್ಮ ಗಾಂಧಿ ಯಾವಾಗಲೂ ನಂಬಿದ್ದರು. ನಾವು ಒಂದೇ ಒಂದು ಆಯುಧವನ್ನು ಹಿಡಿಯದೇ ಹೆಚ್ಚು ಶಕ್ತಿಶಾಲಿ ಶತ್ರು ಗಳೊಂದಿಗೆ ಹೋರಾಡುವ ಅತ್ಯುತ್ತಮ ವಿಧಾನಗಳಲ್ಲಿ ಅಹಿಂಸೆಯೂ ಒಂದು. ಗಾಂಧೀಜಿ ಅವರು ಎಲ್ಲ ನೋವುಗಳನ್ನು ಲೆಕ್ಕಿಸದೆ ತಮ್ಮ ಹೋರಾಟದ ದಾರಿಯನ್ನು ಅಹಿಂಸೆಯ ಮೂಲಕ ಕಂಡುಕೊಂಡರು. ಅವರು ನಮ್ಮ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲೇ ಬಹಳ ಮುಖ್ಯವಾದ ಭಾಗವಾಗಿದ್ದರು ಎಂಬುದನ್ನು ನಾನು ಕಂಡುಕೊಂಡೆ. ಗಾಂಧೀಜಿಯವರು ಭಾರತೀಯರನ್ನು ಸುಧಾರಿಸಲು ಅತ್ಯುತ್ತಮ ಪ್ರಯತ್ನವನ್ನು ಮಾಡಿದರು. ಅಸ್ಪೃಶ್ಯರನ್ನು ಅವರ ನೋವುಗಳಿಂದ ಮುಕ್ತಗೊಳಿಸಲು ಶ್ರಮಿಸಿದರು. ದಲಿತರ ಮೇಲಿನ ದೌರ್ಜನ್ಯದ ವಿರುದ್ಧ, ಅಸ್ಪೃಶ್ಯತೆಯ ವಿರುದ್ಧ ಮತ್ತು ಮೂಢನಂಬಿಕೆಗಳನ್ನು ಹತ್ತಿಕ್ಕಲು ಚಳವಳಿಯನ್ನು ಆರಂಭಿಸಿ ಮುನ್ನಡೆಸಿದರು.
ಅರ್ಜುನ್, 9ನೇ ತರಗತಿ, ಸರ್ಕಾರಿ ವಿಭಜಿತ ಮಹಾರಾಜ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ನಜರ್‌ಬಾದ್, ಮೈಸೂರು
ಎಲ್ಲ ಜಾತಿ ಧರ್ಮಗಳನ್ನೂ ಸಮಾನತೆಯಿಂದ ಕಂಡರೆ ಅದೇ ವಿಶ್ವಶಾಂತಿ ಮಾರ್ಗ ಎಂದಿದ್ದರು ಗಾಂಧಿ
ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದಂತೆ ಇರುವ ಹೆಸರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ. ಜನರು ಪ್ರೀತಿಯಿಂದ ಅವರನ್ನು ಬಾಪು ಎಂದು ಕರೆಯುತ್ತಾರೆ. ನಮಗೆ ಸ್ವಾತಂತ್ರ್ಯ ಸಿಗಲು ಪ್ರಮುಖವಾಗಿ ಕಾರಣರಾದವರು ಮಹಾತ್ಮ ಗಾಂಧೀಜಿ. ಅವರು ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ಸ್ವರಾಜ್ಯ, ಸರ್ವೋದಯ, ಸ್ವದೇಶಿ ಮತ್ತು ಸರಳ ಜೀವನ ಮುಂತಾದ ತತ್ವಗಳನ್ನು ಪ್ರತಿಪಾದಿಸಿದರು. ಜಾತಿ, ವರ್ಗಗಳನ್ನು ಮೀರಿ ನೈತಿಕತೆ ಮತ್ತು ಎಲ್ಲರ ಏಳಿಗೆಗಾಗಿ ಕಾರಣವಾಗುವ ಸಮಾಜ ನಿರ್ಮಾಣದ ಗುರಿಯನ್ನು ಹೊಂದಿದ್ದರು. ಅವರ ವಿಚಾರಗಳು ವೈಜ್ಞಾನಿಕ ಪ್ರಗತಿ ಜೊತೆಗೆ ಆಡಳಿತಾತ್ಮಕ ಬೆಳವಣಿಗೆಗೂ ಪೂರಕವಾಗಿದ್ದವು. ಗಾಂಧೀಜಿ ಅವರು ಪರ್ಯಾಯ ಅಭಿವೃದ್ಧಿಯ ಚಿಂತನೆ ನಡೆಸಿದ್ದರು. ಆಧುನಿಕ ಜಗತ್ತಿನ ಅತಿಯಾದ ಗ್ರಾಹಕೀಕರಣ ಮತ್ತು ಪರಿಸರ ಸಮಸ್ಯೆಗಳಿಗೆ ಗಾಂಽಜಿ ಚಿಂತನೆ ಪರ್ಯಾಯ ಮಾರ್ಗವನ್ನು ತೋರಿಸುತ್ತದೆ. ನೈತಿಕತೆ ಮತ್ತು ಎಲ್ಲರ ಸಮಾನತೆ ಆಧಾರದ ಮೇಲೆ ವಿಶ್ವಶಾಂತಿಯನ್ನು ಸ್ಥಾಪಿಸುವುದು ಗಾಂಧೀಜಿ ಅವರ ಆಶಯವಾಗಿತ್ತು. ನೈತಿಕತೆಯ ರಾಜಕಾರಣವನ್ನು ಅವರು ಪ್ರತಿಪಾದಿಸುತ್ತಿದ್ದರು. ಅಸ್ಪೃಶ್ಯತೆಯನ್ನು ಅಳಿಸಿಹಾಕುವುದು, ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವುದು ಗಾಂಧೀಜಿ ಅವರ ಬಹು ಮುಖ್ಯ ನಿಲುವಾಗಿತ್ತು. ಎಲ್ಲ ಜಾತಿ ಧರ್ಮಗಳನ್ನೂ ಸಮಾನತೆಯಿಂದ ಕಾಣುವುದು ಅತ್ಯಂತ ಮುಖ್ಯ ಎಂದು ಅವರು ತಿಳಿದಿದ್ದರು. ಆ ಮೂಲಕ ಅವರು ವಿಶ್ವಶಾಂತಿಯನ್ನು ಸ್ಥಾಪಿಸಲು ಹೊರಟ್ಟಿದ್ದರು.
ಅಂಜಲಿ ಎಂ., 8ನೇ ತರಗತಿ, ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಊಟಿ ರಸ್ತೆ, ಗುಂಡ್ಲುಪೇಟೆ
ಸತ್ಯ ಹೇಳುವುದು, ಯಾರಿಗೂ ತೊಂದರೆ ಕೊಡದಿರುವುದು ಗಾಂಧೀಜಿ ಅಸ್ತ್ರಗಳಾಗಿದ್ದವು
ಗಾಂಧೀಜಿ ಅವರು ನಮ್ಮ ದೇಶದ ಜನರೇ ಗೌರವಿಸಿದ ನಾಯಕರು. ಅವರ ಜೀವನ ನಡೆ ನುಡಿ ಎಲ್ಲವೂ ನಮಗೆ ಒಳ್ಳೆಯ ದಾರಿಯನ್ನು ತೋರಿಸುತ್ತವೆ. ಗಾಂಧೀಜಿ ಅವರು ಬರೀ ಸ್ವಾತಂತ್ರ್ಯ ಹೋರಾಟಗಾರರಲ್ಲ, ಅವರು ನಮ್ಮ ಜೀವನಕ್ಕೆ ಬೆಳಕು ತೋರಿಸಿದ ವ್ಯಕ್ತಿ. ಅವರ ಜೀವನದ ಕತೆಯನ್ನು ಓದಿ ಅದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ದೇಶಕ್ಕೆ ಒಳ್ಳೆಯ ನಾಗರಿಕ ವ್ಯಕ್ತಿಯಾಗಬಹುದು. ನಮ್ಮ ದೇಶಕ್ಕಾಗಿ ಹೋರಾಡಿದ ಮಹನೀಯರಲ್ಲಿ ಗಾಂಧೀಜಿ ಪಾತ್ರವನ್ನು ವಹಿಸಿದ್ದಾರೆ. ಅವರನ್ನು ಅಪಾರ ಗೌರವದಿಂದ ನೆನೆಯುತ್ತೇವೆ. ಮಹಾತ್ಮ ಗಾಂಧೀಜಿ ಅವರ ಮಾತು ಮತ್ತು ಶಾಂತಿಯುತ ಹೋರಾಟದಿಂದ ಭಾರತವು ಸ್ವಾತಂತ್ರ್ಯ ಗಳಿಸಿತು. ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿ ಅವರು ಅಹಿಂಸೆಯನ್ನು ಅಸವಾಗಿ ಬಳಸಿದರು. ಸತ್ಯ ಹೇಳುವುದು, ಯಾರಿಗೂ ತೊಂದರೆ ಕೊಡದೆ ನ್ಯಾಯ ಕೇಳುವುದು ಗಾಂಧೀಜಿ ಅವರ ಸತ್ಯಾಗ್ರಹದ ತತ್ವಗಳಾಗಿದ್ದವು. ಭಾರತದ ಗ್ರಾಮಗಳು, ಬಡ ಜನ, ರೈತರ ಸಮಸ್ಯೆಗಳನ್ನು ಅರಿತಿದ್ದ ಗಾಂಧೀಜಿ, ಜನರ ಸೇವೆ ಮಾಡುವುದು ನನ್ನ ಜೀವನದ ಗುರಿ ಎಂದಿದ್ದರು. ಸತ್ಯ, ಶಾಂತಿ, ಶಿಸ್ತು, ಅಹಿಂಸೆ, ಸರಳ ಜೀವನ, ಸೇವೆ ಇವು ಗಾಂಧೀಜಿ ಅವರ ಮಹತ್ವದ ಮೌಲ್ಯಗಳು. ಇವುಗಳನ್ನು ಪಾಲಿಸಿದರೆ ಎಲ್ಲರೂ ಒಳ್ಳೆಯ ನಾಗರಿಕರಾಗಬಹುದು. ಯತೀಶ್ಯ ಎಸ್.ಪಿ., 8ನೇ ತರಗತಿ, ಗೀತಾಂಜಲಿ
ಗಾಂಧೀಜಿಯವರ ಜೀವನ ಅತ್ಯಂತ ಪ್ರೇರಣಾದಾಯಕ
ಗಾಂಧೀಜಿಯವರ ಜೀವನ ಅತ್ಯಂತ ಪ್ರೇರಣಾದಾಯಕ. ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ತಮ್ಮ ಜೀವನದ ಮೂಲ ಅಂಶಗಳಾಗಿ ಸೇರಿಸಿಕೊಂಡು ಹೋರಾಟದ ಮೂಲಕ ಮಾತ್ರವಲ್ಲದೆ, ಜೀವನಶೈಲಿಯಿಂದಲೂ ನಮಗೆ ಅಪಾರ ಪಾಠ ಕಲಿಸಿದರು. ಗಾಂಧೀಜಿ ಅವರ ಸತ್ಯಾಗ್ರಹವು ತನ್ನ ಹಕ್ಕಿಗಾಗಿ ಶಾಂತಿಪೂರ್ವಕವಾಗಿ ಧೈರ್ಯದಿಂದ ಹೋರಾಡುವ ಶಕ್ತಿಯ ಸಂಕೇತವಾಗಿದೆ. ಅವರ ಜೀವನದ ಈ ತತ್ವಗಳು ನಮಗೆ ಕ್ರೂರತೆ ಮುಗಿಸಿ ಶಾಂತಿ ತೋರುತ್ತವೆ. ಗಾಂಧೀಜಿ ಅವರು ಪ್ರಾಮಾಣಿಕತೆ, ದಯೆ ಮತ್ತು ಸಹಿಷ್ಣುತೆ, ಎಲ್ಲರಿಗೂ ಸಮಾನ ಅವಕಾಶ ಎನ್ನುವ ದೃಷ್ಟಿಕೋನದಿಂದ ಬದುಕಿದರು. ಅವುಗಳು ನನಗೆ ಜೀವನದ ಮಾರ್ಗದರ್ಶಕವಾಗಿವೆ. ಜಾತಿ, ಧರ್ಮ ಭೇದಭಾವ ಮಾಡದೆ ಎಲ್ಲ ಜೀವಿಗಳಿಗೂ ಗೌರವ ನೀಡಬೇಕು ಎಂಬ ಗಾಂಧೀಜಿಯ ನಿಲುವುಗಳು ನನ್ನ ಹೃದಯವನ್ನು ಮುಟ್ಟಿದ ವಿಷಯವಾಗಿದೆ. ಗಾಂಧೀಜಿ ಎಂದರೆ ಸರಳತೆಯಷ್ಟೇ ಅಲ್ಲ ಪ್ರಾಮಾಣಿಕತೆ ಮತ್ತು ನೀತಿಯ ಸಂಕೇತ. ಅವರ ಜೀವನ ಮತ್ತು ತತ್ವಗಳು ಇಂದಿನ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಮಾರ್ಗದರ್ಶಕವಾಗಿವೆ. ಗಾಂಧೀಜಿ ಜಗತ್ತಿನ ಬದಲಾವಣೆಗೆ ಪ್ರೇರಣೆಯ ಮೂಲ. ಗಾಂಧೀಜಿಯ ತತ್ವಗಳು ಕೇವಲ ಐತಿಹಾಸಿಕವಲ್ಲ. ನಮ್ಮ ದೈನಂದಿನ ಜೀವನಕ್ಕೂ ಆದರ್ಶ ದಾರಿಯನ್ನು ತೋರುತ್ತವೆ. ಗಾಂಧೀಜಿ ಅವರ ಸಹಾನುಭೂತಿ ಮತ್ತು ಸೇವಾ ಮನೋಭಾವ ನನಗೆ ನಿಜವಾದ ಮಾನವೀಯತೆಯ ಅರ್ಥವನ್ನು ಕಲಿಸುತ್ತದೆ.
ಮೋಹಿತಾ ಆರ್. 8ನೇ ತರಗತಿ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್
ಕೋಟೆ ತಾಲ್ಲೂಕಿನ ಮುಸ್ಲಿಂ ಸಮುದಾಯದ ಪ್ರಥಮ ವೈದ್ಯೆ ಎಂಬ ಹೆಗ್ಗಳಿಕೆ ಹೊಂದಿದ ಜಹಾನ ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ…
ಅಭಿಮಾನಿಗಳು, ನಿರ್ಮಾಪಕರ ಸಂಘದ ಆಕ್ರೋಶ ಬೆಂಗಳೂರು : ಪದ್ಮಭೂಷಣ ಡಾ.ರಾಜ್‌ಕುಮಾರ್ ಅವರ ಸ್ಮಾರಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ…
ಮಡಿಕೇರಿ : ಶಿಕ್ಷಕಿಯೊಬ್ಬರು ಬಂದೂಕಿನಿಂದ ಗುಂಡು ಹೊಡೆದುಕೊಂಡು ಸಾವಿಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೇರಂಬಾಣೆಯಲ್ಲಿ ನಡೆದಿದೆ.…
ನವದೆಹಲಿ : ಆಮ್ ಆದ್ಮಿ ಪಕ್ಷದಲ್ಲಿ ಭಾರೀ ರಾಜಕೀಯ ಬೆಳವಣಿಗೆ ನಡೆದಿದ್ದು, ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ)…
ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಪ್ರತಿದಿನ ದಿನಪತ್ರಿಕೆ ಓದಿಸುವುದನ್ನು ಕಡ್ಡಾಯಗೊಳಿಸಲು ಶಿಕ್ಷಣ…
ನವದೆಹಲಿ : ದೇಶದಾದ್ಯಂತ ನಡೆಯುತ್ತಿರುವ ಜನಗಣತಿ ಕಾರ್ಯವು ಕೇವಲ ಸರ್ಕಾರದ ಕೆಲಸವಲ್ಲ, ಬದಲಾಗಿ ಪ್ರತಿ ನಾಗರಿಕರ ಜವಾಬ್ದಾರಿಯಾಗಿದೆ. ಇದರಲ್ಲಿ ಎಲ್ಲರ…