ಮೈಸೂರು

ದೀಪಾವಳಿಯಂದೇ ಕತ್ತಲು ಕವಿದ ಪಟ್ಟಣದ ರಸ್ತೆಗಳು

ತಿ.ನರಸೀಪುರ: ‘ಕತ್ತಲಿಂದ ಬೆಳಕಿನೆಡೆಗೆ’ಎಂದು ದೀಪಾವಳಿ ಹಬ್ಬ ಸಂದೇಶ ಸಾರಿದರೆ, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲದೇ ಪಟ್ಟಣದ ಹಲವೆಡೆ ಕತ್ತಲು ಆವರಿಸಿದೆ.
ಪುರಸಭಾ ವ್ಯಾಪ್ತಿಗೆ ಒಳಪಡುವ ಪಟ್ಟಣದ ಕಾವೇರಿ- ಕಪಿಲಾ ಜೋಡಿ ರಸ್ತೆಯ ಹಳೇ ತಿರುಮಕೂಡಲನಿಂದ ವಿದ್ಯೋದಯ ಕಾಲೇಜ್ ವೃತ್ತ,ಮಹದೇವಪ್ಪ ಕಲ್ಯಾಣ ಮಂಟಪದಿಂದ ಹೆಳವರಹುಂಡಿ ಮತ್ತು ಕಪಿಲಾ ನದಿಗೆ ನಿರ್ಮಿಸಿರುವ ಹೊಸ ಸೇತುವೆಯ ಮೇಲ್ಭಾಗದಲ್ಲಿರುವ ವಿದ್ಯುತ್ ಕಂಬಗಳಿಗೆ ಬೀದಿ ದೀಪ ಅಳವಡಿಸದೆ ಇರುವುದರಿಂದ ಸದರಿ ಜಾಗಗಳಲ್ಲಿ ಕತ್ತಲು ಕವಿದಿದೆ.ಬೀದಿ ದೀಪ ಇಲ್ಲದ ಪರಿಣಾಮ ಖಾಸಗಿ ಬಸ್ ನಿಲ್ದಾಣದ ಬಳಿ ವಾಹನ ಸಂಚಾರ ದುಸ್ತರವಾಗಿದೆ.

ಹೊಸ ಸೇತುವೆ ಮೇಲ್ಭಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳ ಕೋರಿಕೆ ನಿಲ್ದಾಣ ವಿದ್ದು, ಇಲ್ಲಿ ಬೀದಿ ದೀಪ ಇಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಬಸ್ ನಿಂದ ಇಳಿಯುವ ಮಹಿಳಾ ಪ್ರಯಾಣಿಕರಿಗೆ ಯಾವುದೇ ಭದ್ರತೆ ಇರುವುದಿಲ್ಲ.
ಪಟ್ಟಣದ ವಿವಿಧ ರಸ್ತೆಗಳಲ್ಲಿ ಬೀದಿ ದೀಪ ಇಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಓಡಾಡುವ ವಾಹನ ಚಾಲಕ ಮತ್ತು ಪಾದಚಾರಿಗಳಿಗೆ ಬಹಳ ತೊಂದರೆಯಾಗಿದೆ.

ಈ ಸ್ಥಳಗಳಲ್ಲಿ ಕತ್ತಲು ಆವರಿಸಿರುವುದರಿಂದ ಅಪಘಾತಗಳು ನಡೆಯುವ ಸಂಭವವಿರುತ್ತದೆ.
ಕಳೆದ ಹಲವು ದಿನಗಳಿಂದಲೂ ಬೀದಿ ದೀಪದ ಸಮಸ್ಯೆ ಇದ್ದು,ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಮತ್ತು ಅಧ್ಯಕ್ಷರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಕಳ್ಳ-ಕಾಕರಿಗೆ ಆಸ್ಪದ ಈ ರಸ್ತೆ : ಪಟ್ಟಣದ ಪ್ರಮುಖ ರಸ್ತೆಗಳಾದ ಕಾಲೇಜ್ ರಸ್ತೆ, ಜೋಡಿ ರಸ್ತೆ,ಲಿಂಕ್ ರಸ್ತೆಗಳಲ್ಲಿ ಚಿನ್ನದ, ಮೊಬೈಲ್ ಮತ್ತು ಕಿರಾಣಿ ಅಂಗಡಿಗಳು ಹೆಚ್ಚಿವೆ. ಹಾಗಾಗಿ ಭಾಗಗಳಲ್ಲಿ ಬೀದಿ ದೀಪ ಇಲ್ಲದಿರುವುದು ಕಳ್ಳಕಾಕರು ಕಳ್ಳತನ ನಡೆಸಲು ಅವಕಾಶ ಕಲ್ಪಿಸಿದಂತಾಗುತ್ತದೆ.ಅಲ್ಲದೇ  ಈ ಭಾಗಗಳಲ್ಲಿ ಯಾರೇ ಓಡಾಡಿದರೂ ಪತ್ತೆ ಹಚ್ಚಲು ಗುರುತಿಸಲಾಗದಷ್ಟು ಕತ್ತಲು ಆವರಿಸಿದೆ.

andolana

Recent Posts

ಅಯೋಧ್ಯೆಯಲ್ಲಿ ಗಣಪತಿ ಆಶ್ರಮ ಶಾಖೆ ಉದ್ಘಾಟನಾ ಕಾರ್ಯಕ್ರಮ

ಮೈಸೂರು: ದೇಶ-ವಿದೇಶಗಳಲ್ಲಿ ಜನ ಸಮೂಹವನ್ನು ಹೊಂದಿರುವ ಅವಧೂತ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನೂತನ ಶಾಖೆಯನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ…

2 hours ago

ಜನವರಿ.5ಕ್ಕೆ ಮೈಸೂರು ವಿವಿ 106ನೇ ಘಟಿಕೋತ್ಸವ

ಕುಲಪತಿ ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ೧೦೬ನೇ ಘಟಿಕೋತ್ಸವವನ್ನು ಜ.೫ರಂದುನಡೆಸಲು ತೀರ್ಮಾನಿಸಲಾಗಿದ್ದು, ಘಟಿಕೋತ್ಸವ…

2 hours ago

ಗ್ರಾಮೀಣ ಭಾಗದಲ್ಲಿ ಚಳಿಗೆ ತತ್ತರಿಸಿದ ಜನರು

ಲಕ್ಷ್ಮೀಕಾಂತ್ ಕೊಮಾರಪ್ಪ ಶೀತಗಾಳಿಯಿಂದ ಪಾರಾಗಲು ಬೆಚ್ಚನೆಯ ಬಟ್ಟೆ, ಹೊದಿಕೆ, ಬೆಂಕಿಯ ಮೊರೆ  ಸೋಮವಾರಪೇಟೆ: ಶೀತಗಾಳಿಯಿಂದ ಚಳಿಯ ಪ್ರಮಾಣ ಹೆಚ್ಚಾಗಿದ್ದು, ಕಳೆದೆರಡು…

2 hours ago

ಒಂದೇ ವರ್ಷದಲ್ಲಿ ಕಿತ್ತು ಬಂದ ರಸ್ತೆಯ ಜಲ್ಲಿ ಕಲ್ಲು!

ಕೊಳ್ಳೇಗಾಲ: ಶಾಸಕರು ಮೊದಲಿದ್ದ ಡಾಂಬರು ರಸ್ತೆಯನ್ನು ಕಿತ್ತು ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಮುಂದಾದರೆ ಗುತ್ತಿಗೆದಾರ ನಡೆಸಿದ ಕಳಪೆಕಾಮಗಾರಿಯಿಂದ ಜಲ್ಲಿಕಲ್ಲುಗಳು ಮೇಲೆದ್ದು…

2 hours ago

ನಿರಂತರ ಹುಲಿ, ಚಿರತೆಗಳ ಹಾವಳಿ; ಕಂಗಾಲಾದ ರೈತರು

ಹನಗೋಡು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಆತಂಕ; ಜಮೀನಿಗೆ ತೆರಳಲು ಹಿಂದೇಟು ವೀರನಹೊಸಹಳ್ಳಿ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ಬಫರ್…

2 hours ago