ಡಿಸೆಂಬರ್ 26ರಂದು ನಂಜನಗೂಡಿನಲ್ಲಿ ನಡೆಯಬೇಕಿದ್ದ ಅಂಧಕಾಸುರ ಸಂಹಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಭಕ್ತರು ಅಂಧಕಾಸುರನ ಚಿತ್ರವನ್ನು ಸಂಹಾರ ಮಂಟಪ ವೃತ್ತದಲ್ಲಿ ರಂಗೋಲಿನಲ್ಲಿ ಬರೆಯುತ್ತಾರೆ. ಬಳಿಕ ಉತ್ಸವಮೂರ್ತಿಯನ್ನು ಈ ರಂಗೋಲಿ ಬಳಿಕ ತಂದು ಕಾಲಿನಿಂದ ಅಂಧಕಾಸುರನ ರಂಗೋಲಿಯನ್ನು ಅಳಿಸಿಹಾಕುವ ಮೂಲಕ ಅಂಧಕಾಸುರ ವಧೆಯನ್ನು ಆಚರಿಸಲಾಗುತ್ತದೆ.
ಹೀಗೆ ನೂರಾರು ವರ್ಷಗಳಿಂದ ಇದೇ ರೀತಿಯ ಆಚರಣೆಯನ್ನು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿದ್ದವರಿಗೆ ಪ್ರಗತಿಪರ ಚಿಂತಕರು ಅಡ್ಡಿ ವ್ಯಕ್ತಪಡಿಸಿದ್ದಾರೆ. ಅಂಧಕಾಸುರ ವಧೆಯನ್ನು ಆಚರಿಸಬಾರದು ಎಂದು ಪ್ರಗತಿಪರ ಹೋರಾಟಗಾರರು ಪಟ್ಟುಹಿಡಿದಿದ್ದರು. ಅತ್ತ ಭಕ್ತಾದಿಗಳು ಮಾತ್ರ ತಾವು ನೂರಾರು ವರ್ಷಗಳಿಂದ ಈ ಆಚರಣೆ ಮಾಡುತ್ತಿದ್ದಾರೆ.
ಆದರೆ ಈ ಬಾರಿ ಅಂಧಕಾಸುರ ವಧೆ ಆಚರಣೆಗೆ ವಿರೋಧ ವ್ಯಕ್ತವಾಗಿದ್ದು, ಭಕ್ತಾದಿಗಳಿಗೆ ಭಾರೀ ನಿರಾಸೆಯುಂಟಾಗಿದೆ. ಅಲ್ಲದೇ ಈ ವಾಗ್ವಾದದ ಸಂದರ್ಭದಲ್ಲಿ ದೇವರ ಮೂರ್ತಿ ಮೇಲೆ ನೀರನ್ನೂ ಸಹ ಎರಚಲಾಗಿದೆ. ಇದರಿಂದ ಬೇಸತ್ತ ಭಕ್ತಾದಿಗಳು ಜನವರಿ 4ರಂದು ನಂಜನಗೂಡು ಬಂದ್ ಆಚರಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…
ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…
ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…
ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…
ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…