ಮೈಸೂರು : ಬೆಂಗಳೂರಿನ ಲಾಲ್‌ಬಾಗ್‌ನಂತಹ ಸುಂದರ ಸಸ್ಯ ಶಾಸ್ತ್ರೀಯ ತೋಟ ಮೈಸೂರಿನ ಲಿಂಗಾಂಬುದಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ರಾಮಕೃಷ್ಣನಗರಕ್ಕೆ ಹೊಂದಿಕೊಂಡಂತೆ ಇರುವ ಲಿಂಗಾಂಬುದಿಕೆರೆಯ ಪಕ್ಕದಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ ಸುಂದರವಾದ ಸಸ್ಯಶಾಸ್ತ್ರೀಯ ತೋಟವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು. ಅವರು ಇಂದು ಲಿಂಗಾಂಬುದಿ ಸಸ್ಯ ಶಾಸ್ತ್ರೀಯ ತೋಟಕ್ಕೆ ಬೇಟಿ ನೀಡಿ, ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು, ಬಾಕಿ ಇರುವ ಕಾಮಗಾರಿಗಳನ್ನು ಕೂಡಲೇ ಮುಗಿಸುವಂತೆ ಸೂಚಿಸಿದರು.
ಈ ಸಸ್ಯ ಕ್ಷೇತ್ರದಲ್ಲಿ ಸುಮಾರು 300 ವಿವಿಧ ಸಸ್ಯ ಪ್ರಭೇದಗಳೊಂದಿಗೆ, ಔಷಧಿಯ ಮತ್ತು ಸುಗಂಧ ಸಸ್ಯಗಳ ಉದ್ಯಾನವನ, ಗುಲಾಬಿ ತೋಟ, ಟೋಪಿಯರಿ ಉದ್ಯಾನವನ, ಚಿಟ್ಟೆ ಉದ್ಯಾನವನ, ಬಿದಿರಿನ ಗುಂಪು, ಫೈಕಸ್ ಬ್ಲಾಕ್, ಕೊಳ ಸೇರಿದಂತೆ ಸುಮಾರು 150 ಅಡಿ ಉದ್ದದ 12 ಅಡಿ ಅಗಲದ ಸುಂದರವಾದ ರೆಡ್ ಜೇಡ್ ವೈನ್ ನಿಂದ ಕೂಡಿರುವುದನ್ನು ಪರಿಶೀಲಿಸಿದರು.
ನಂತರ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂತಹ ಸುಂದರವಾದ ಸಸ್ಯ ಕ್ಷೇತ್ರ ನಿರ್ಮಾಣವಾಗುತ್ತಿರುವುದು ಮೈಸೂರು ನಗರದಲ್ಲಿರುವ ಪ್ರವಾಸಿ ತಾಣಗಳ ಪಟ್ಟಿಗೆ ಸೇರಲಿದೆ ಎಂದರು.ಇಂತಹ ಸುಂದರವಾದ ಸಸ್ಯಕ್ಷೇತ್ರವನು ನಿರ್ಮಾಣ ಮಾಡಲು ಕಾಳಜಿ ಹೊಂದಿರುವ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳ ಬದ್ದತೆ ಇರುವುದು ಅಪರೂಪ. ಈ ಸಸ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ, ಕಾರ್ಮಿಕರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ವಿವಿಧ ಕಾಮಗಾರಿಗಳಿಗೆ ಚಾಲನೆ : ಪಾಲಿಕೆ ವತಿಯಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ. 46 ರ ದಟ್ಟಗಳ್ಳಿಯ ಎಫ್ ಬ್ಲಾಕ್‌ನ ಅಡ್ಡ ರಸ್ತೆಗಳನ್ನು 20 ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣಕ್ಕೆ, ಜೆ. ಬ್ಲಾಕ್‌ನಲ್ಲಿ 25.00 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಹಾಗೂ ವಾರ್ಡ್ ನಂ. 58ರ ವ್ಯಾಪ್ತಿಯ ರಾಮಕೃಷ್ಣನಗರ ಜಿ ಬ್ಲಾಕ್‌ನಲ್ಲಿ ರೂ. 55 ಲಕ್ಷ ವೆಚ್ಚದಲ್ಲಿ ಕನಕ ಟ್ರಾವಲ್ಸ್ ನಿಂದ ಗಣಪತಿ ದೇವಸ್ಥಾನದವರಗೆ ರಸ್ತೆ ಮತ್ತು ಪುಟ್‌ಬಾತ್ ನಿರ್ಮಾಣಕ್ಕೆ ಚಾಲನೆ ನೀಡಿದರು.
ಈ ವೇಳೆ ಪಾಲಿಕೆ ಸದಸ್ಯರುಗಳಾದ ಶ್ರೀಮತಿ ಲಕ್ಷ್ಮಿಕಿರಣ್, ಶರತ್ ಕುಮಾರ್, ಮುಖಂಡರಾದ ಖೇಣಿ, ಶಿವಪ್ರಕಾಶ್, ಜಗದೀಶ್, ಶಶಿಕುಮಾರ್, ಕೊಪ್ಪಲು ದಿನೇಶ್, ಕಾರ್ಗಿಲ್ ಮಹೇಶ್, ಗೋಪಾಲ್, ಮನೋಜ್, ಮನು ಗೌಡ, ಪಾಲಿಕೆ ಕಾರ್ಯಪಾಲಕ ಅಭಿಯಂತರರಾದ ಮಹೇಶ್, ಡಿ.ಓ.ಸತ್ಯಮೂರ್ತಿ, ಲಿಂಗಾಂಬುದಿಪಾಳ್ಯ ಸಸ್ಯಕ್ಷೇತ್ರದ ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಮಂಜುನಾಥ್, ನವೀನ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…
ಬೆಳಗಾವಿ : ಮುಂದಿನ ಮಾರ್ಚ್‌ನಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ…
ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್…
ಬೆಂಗಳೂರು : ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ದಿ ಡೆವಿಲ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಅಭಿಮಾನಿಗಳು, ದರ್ಶನ್…
ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…
ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…