ಮೈಸೂರು : ಸಂವಿಧಾನಕ್ಕೆ ತಿದ್ದುಪಡಿಗೆ ಅವಕಾಶವಿದೆ. ಆದರೆ ಸಂವಿಧಾನವನ್ನು ತಿರುಚಲು ಎಂದಿಗೂ ಅವಕಾಶವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಇಂದು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನಕ್ಕೆ ತಿದ್ದುಪಡಿಗೆ ಅವಕಾಶವಿದೆ. ತಿರುಚಲು ಅವಕಾಶವಿಲ್ಲ. ಆಶ್ವಾಸನೆಗಳು ಸಂವಿಧಾನದ ಕಾನೂನುಗಳಲ್ಲ. ಪಠ್ಯ ಪರಿಷ್ಕರಿಸಿದ ವೇಳೆ ಅನಗತ್ಯ ವಿಚಾರ ಹಾಕಿದರೆ ಅದನ್ನು ಅಭ್ಯಸಿಸುವ ಯುವ ಸಮೂಹ ದಾರಿ ತಪ್ಪಲಿದೆ ಎಂದು ಅವರು ತಿಳಿಸಿದರು.
ಬಲವಂತದ ಮತಾಂತರಕ್ಕೆ ಸಂವಿಧಾನದಲ್ಲೂ ಅವಕಾಶವಿಲ್ಲ. ಆದರೆ ಸ್ವಯಂ ಪ್ರೇರಿತ ಮತಾಂತರ ಎಲ್ಲರೂ ಹಕ್ಕು ಎಂಬುದಾಗಿ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಗೋಹತ್ಯೆ ನಿಷೇಧ ವಿಚಾರವಾಗಿ ನಾನು ಸಿದ್ದರಾಮಯ್ಯ ದನ, ಎಮ್ಮೆಗಳ ಜತೆಗೆ ಬೆಳೆದಿದ್ದು, ಅದರ ಅರಿವು ನಮಗೂ ಹೆಚ್ಚಾಗಿ ಗೊತ್ತಿದೆ ಎಂದರು.
ಶ್ರೀರಂಗಪಟ್ಟಣದಲ್ಲಿ ಒಂದು ಕಡೆ ದೇವಾಲಯದ ಘಂಟೆ ನಾದ ಮತ್ತೊಂದು ಕಡೆ ಮಸೀದಿಯ ಪ್ರಾರ್ಥನೆ ಸದ್ದು ಎರಡು ಸೌಹಾರ್ದಯುತವಾಗಿ ನಡೆಯುತ್ತಿವೆ. ವೈವಿಧ್ಯೆತೆಯಿಂದ ಏಕತೆ ಕಾಣುವ ಸಮೃದ್ಧ ಭಾರತ ನಮ್ಮೆಲ್ಲರ ಗುರಿಯಾಗಿದೆ. ಸಾಂಸ್ಕೃತಿಕ, ಶೈಕ್ಷಣಿಕ ಹಿನ್ನೆಲೆ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಮಾಡುವುದು ನಮ್ಮೆಲ್ಲರ ಉದ್ದೇಶವಾಗಿದೆ.
ಯಾರಾದರೂ ಮಾಡಿರುವ ಅಭಿವೃದ್ಧಿ ಕೊಟ್ಟರೆ ಅವರಿಗೂ ಅದನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತೇವೆ. ಪ್ರಜಾಪ್ರಭುತ್ವ ಯಶಸ್ಸು ಅಡಕ ಆಗಿರುವುದೇ ಪತ್ರಿಕಾರಂಗದಲ್ಲಿ ಆಗಿದೆ.
ಹಾಸನ, ಕೊಡಗು, ಮೈಸೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ್ದೇನೆ. ಉಡುಪಿ, ಮಂಗಳೂರು, ಬಾಗಲಕೋಟೆಯಲ್ಲೂ ಉಸ್ತುವಾರಿ ಆಗಿದ್ದೇನೆ.
ಆರೋಗ್ಯಮಂತ್ರಿಯಾಗಿದ್ದಾಗ ಉಪಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿ ದಸರಾ ನೋಡಿಕೊಳ್ಳಲು ಹೇಳಿ ಹೋಗಿದ್ದು ಪ್ರಥಮ ದಸರಾ ಆಗಿದೆ. ನಿಜವಾದ ದಸರಾ ಆಚರಣೆ, ಸಂವಿಧಾನಕ್ಕೆ ಜೋಡಿಸಿ ಮಾಡಿದ್ದು ಮೊದಲ ಬಾರಿಯಾಗಿದೆ. ನನ್ನಲ್ಲೇ ಕೆಲಸಕ್ಕೆ ಮಂಜೂರಾತಿ ಕೊಟ್ಟಿದ್ದಾರೆ. ಮಣಿಪಾಲ್ ಆಸ್ಪತ್ರೆ ಯಿಂದ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದವರೆಗಿನ ರಸ್ತೆ ಅಭಿವೃದ್ಧಿ ಮಾಡಿದ್ದೇವೆ.
ನಂಜನಗೂಡು, ಹೊಸ ಜಿಲ್ಲಾಧಿಕಾರಿ ಕಚೇರಿ, ಮೈಸೂರು- ಬೆಂಗಳೂರು ರಸ್ತೆ ಆಗ ವಿಶ್ವನಾಥ್ ಅವರು ಸಂಸದರಾಗಿದ್ದರು. ಮೂಲ ಕಾರಣವೇ ಯುಪಿ ಸರ್ಕಾರ ಆಗಿದೆ. ನಾನೇ ಮಾಡಿದೇ ಗುದ್ಧಾಡುವ ಅಗತ್ಯವಿಲ್ಲ. ಎಲ್ಲದಕ್ಕೂ ದಾಖಲೆಗಳೇ ಉತ್ತರ ಕೊಡಲಿವೆ. ಮಾಡದಿದ್ದರೂ ಪ್ರಚಾರ ತೆಗೆದುಕೊಳ್ಳುವುದು ಯಾರಿಗೂ ಶೋಭೆಯಲ್ಲ. ಜಾತಿ, ಧರ್ಮದ ಹೆಸರಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ಯರ‍್ಯಾರ ಕಾಲದಲ್ಲಿ ಏನೇನು ಅಭಿವೃದ್ಧಿ ಆಗಿದೆ ಎಂಬುದಕ್ಕೆ ದಾಖಲೆಗಳಿವೆ. ಸರಿ ತಪ್ಪೇನಿಲ್ಲಾ, ಅವಕಾಶ ಸಿಗಬೇಕಿದೆ. ಶೇ.90 ರಷ್ಟು ಮಂದಿ ದಲಿತರು ಮತ ಕೊಟ್ಟಿದ್ದಾರೆ ಎಂದರು.
ಮಂಡ್ಯ: ಸಕ್ಕರೆ ನಗರಿಯಲ್ಲಿ ಶುಕ್ರವಾರ ಆಕ್ಷರಶಃ ದೊಡ್ಡ ಜಾತ್ರೆಯ ಸೊಬಗು ಮನೆ ಮಾಡಿತ್ತು. ಎಲ್ಲಿ ನೋಡಿದರಲ್ಲಿ ಜನವೋ ಜನ; ಅದು…
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…