ಮೈಸೂರು: ಕಷ್ಟ ಎನ್ನುವ ಭ್ರಮೆಯನ್ನು ಕಳಚಿದರೆ ಯಶಸ್ಸು ಕೈಹಿಡಿಯುತ್ತದೆ. ನಿರಂತರ ಕಠಿಣ ಪರಿಶ್ರಮದಿಂದ ಅಸಾಧ್ಯವಾದುದನ್ನು ಸಾಧಿಸಬಹುದು. ಯಶಸ್ಸಿಗೆ ಆತ್ಮವಿಶ್ವಾಸ ಮುಖ್ಯ ಎಂದು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾದ ಪ್ರೊ. ಎಂ.ಜಿ. ಮಂಜುನಾಥ್ ಅಭಿಪ್ರಾಯಪಟ್ಟರು.
ಇಂದು(ಜ.2) ನಗರದ ಜ್ಞಾನಬುತ್ತಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಯುಜಿಸಿ ನೆಟ್ ಪರೀಕ್ಷಾ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶುಭ ಹಾರೈಕೆ ಮಾಡಿ ಅವರು ಮಾತನಾಡಿದರು.
1996 ರಲ್ಲಿ ಯುಜಿಸಿ ಪರೀಕ್ಷೆ ಆರಂಭವಾಗಿದ್ದು, ನಾನು ಕೂಡ ಪರೀಕ್ಷೆ ಎದುರಿಸಿ ಅಧ್ಯಾಪಕನಾಗಿ ಆಯ್ಕೆಯಾದೆ. ಯುಜಿಸಿ ನೆಟ್ ಪರೀಕ್ಷೆಯ ಗುಟ್ಟು ಹಳೆಯ ಪ್ರಶ್ನೆಗಳನ್ನು ಆಗಾಗ್ಗೆ ತಿರುವು ಹಾಕಿ. ಮೊದಲು ಸುಲಭದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದರೆ ಸಮಯದ ಮಿತಿಯ ನಡುವೆ ಅತಿ ಹೆಚ್ಚು ಪ್ರಶ್ನೆಗೆ ಉತ್ತರಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಯುಜಿಸಿ ಪರೀಕ್ಷೆಯಲ್ಲಿ ಅತಿಹೆಚ್ಚಿನ ಅಂಕ ಬಂದರೆ ಪ್ರತಿ ತಿಂಗಳು ಸುಮಾರು ೪೦ಸಾವಿರ ಯುಜಿಸಿ ಶಿಷ್ಯವೇತನ ಐದು ವರ್ಷಗಳ ಕಾಲ ಸಿಗಲಿದೆ. ಈ ಹೊತ್ತು ಯಾವುದೇ ಕೆಲಸಕ್ಕೂ ಇಷ್ಟೊಂದು ಮೊತ್ತದ ಸಂಬಳ ಸಿಗುವುದಿಲ್ಲ. ಇದೇ ಸಮಯದಲ್ಲಿ ಪಿಎಚ್ಡಿ ಅಧ್ಯಯನದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸಬಹುದು ಎಂದರು.
ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಮತ್ತು ಮೈಸೂರು ವಿವಿ ಸಿಂಡಿಕೇಟ್ ಸದಸ್ಯೆ ಡಾ. ಬಿ.ಆರ್. ಜಯಕುಮಾರಿ ಯುಜಿಸಿ ನೆಟ್ ಅಧ್ಯಯನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಸಂಪತ್ತನ್ನು ನಾವು ಕಾಪಾಡಬೇಕು ಆದರೆ ವಿದ್ಯೆ ನಮ್ಮನ್ನು ಕಾಪಾಡುತ್ತದೆ. ಸಂಪತ್ತನ್ನು ಅಪಹರಿಸಬಹುದು ಆದರೆ ಜ್ಞಾನವನ್ನು ಕದಿಯಲು ಸಾಧ್ಯವಿಲ್ಲ. ನಮ್ಮ ಒಳಗಿರುವ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊರಗೆ ತರಲು ಸ್ಪರ್ಧೆ ಇರಬೇಕು. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಅಂತಹ ಕೆಲಸವನ್ನು ಮಾಡುತ್ತವೆ. ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಇದ್ದರೆ ಪ್ರತಿಫಲವಾಗಿ ಯಶಸ್ಸು ಸಿಗುವುದರಲ್ಲಿ ಯಾವುದೇ ಅನುಮಾನ ಬೇಡ. ಮನಸ್ಸು ಮಾಡಿ, ಕರ್ತವ್ಯನಿಷ್ಠರಾಗಿ, ಕಾದು ನೋಡಿ ಎಂಬ ಮಾತಿನಲ್ಲಿ ಸದಾ ನಂಬಿಕೆಯಿಟ್ಟು ಕೆಲಸಮಾಡಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಹಕಾರಿಗಳಾದ ವೈ.ಎನ್. ಶಂಕರೇಗೌಡ ಮಾತನಾಡಿ, ಆಸಕ್ತಿ ಮತ್ತು ಕಠಿಣ ಪರಿಶ್ರಮ ಎರಡೂ ಸೇರಿದರೆ ಮಾತ್ರ ಗೆಲುವು ನಿಮ್ಮದಾಗುತ್ತದೆ. ಶಿಕ್ಷಕ ವೃತ್ತಿಯನ್ನು ಆಯ್ದಕೊಂಡು ಹೊರಟಿರುವ ನಿಮಗೆ ಶುಭವಾಗಲಿ ಎಂದರು.
ಸಮಾರಂಭದಲ್ಲಿ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಆರ್. ಎನ್. ಪದ್ಮನಾಭ, ಶಿಕ್ಷಣ ತಜ್ಞ ಪ್ರೊ. ಎಚ್. ಎಸ್. ಮಲ್ಲಿಕಾರ್ಜುನಶಾಸ್ತ್ರಿ, ಪ್ರೊ. ವಿ. ಜಯಪ್ರಕಾಶ್, ಪ್ರೊ. ಕೃ.ಪ. ಗಣೇಶ, ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್. ಬಾಲಕೃಷ್ಣ, ಕೆ.ವೈ.ನಾಗೇಂದ್ರ, ಕಿರಣ್ ಕೌಶಿಕ್, ಯು.ಎಂ. ಶರದ್ ರಾವ್, ಪ್ರೊ. ಎಚ್.ಆರ್. ತಿಮ್ಮೇಗೌಡ, ಡಾ. ಎಸ್.ಬಿ.ಎಂ. ಪ್ರಸನ್ನ, ರೋಹನ್ ರವಿಕುಮಾರ್ ಉಪಸ್ಥಿತರಿದ್ದರು.
ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…
ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…
ದೇಶದ ಬಹುತೇಕ ರೈಲು ನಿಲ್ದಾಣದ ಫ್ಲಾಟ್ ಫಾರ್ಮ್‌ಗಳಲ್ಲಿ ಸಾರ್ವಜನಿಕರು ಕುಡಿಯುವ ವಾಟರ್ ಕೂಲರ್‌ಗಳಲ್ಲಿ, ಇ-ಕೊಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ಕಂಟ್ರೋಲರ್…
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉನ್ನತ ಹುದ್ದೆಗಳಿಗೆ ತಜ್ಞರನ್ನು ಬಿಟ್ಟು ರಾಜಕೀಯ ವ್ಯಕ್ತಿಗಳನ್ನು ನೇಮಿಸುತ್ತಿರುವುದು ರಾಜ್ಯದ ಪರಿಸರ ಆಡಳಿತಕ್ಕೆ…
ದೇಶದ ೮೦ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಕ್ಷಣಗಳಲ್ಲಿ, ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ‘ಬುರ್ಜ್ ಖಲೀಫಾ’ದಲ್ಲಿ ಭಾರತದ ತ್ರಿವರ್ಣ…
ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ಅವರ ವಾರದ ಅಂಕಣ ಸಂಸತ್ ಎಂದರೆ ಪ್ರಜಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಿಕೊಂಡು ದೇಶದ ಸಮಸ್ಯೆಗಳು ಮತ್ತು…