ಮೈಸೂರು : ಕೆರೆಯಲ್ಲಿ ಈಜಲು ಹೋದ 15 ವರ್ಷದ ಬಾಲಕ ನಾಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಜಿಲ್ಲೆಯ ಹುಣಸೂರು ತಾಲೂಕಿನ ಹಸ್ವಾಳು ಗ್ರಾಮದ ಗರಿಕೆ ಕಟ್ಟೆ ಬಳಿಯ ಕೆರೆಗೆ ನವೀನ್ ಗೌಡ ಎಂಬ 15 ವರ್ಷದ ಬಾಲಕ ಈಜಲು ಹೋಗಿದ್ದ. ಆದರೆ ಈಗ ಬಾಲಕನ ಸುಳಿವೇ ಸಿಗುತ್ತಿಲ್ಲ.
ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ನವೀನ್ ಮೈಸೂರಿನ ಬೋಗಾದಿ ನಿವಾಸಿಯಾಗಿದ್ದಾನೆ. ಮಂಜೇಗೌಡ ಆಶಾ ದಂಪತಿಯ ಪುತ್ರ. ಹಸ್ವಾಳು ಗ್ರಾಮದ ಅಜ್ಜಿ ಮನೆಗೆ ಬಂದಿದ್ದ ನವೀನ್, ತನ್ನ ಸ್ನೇಹಿತನ ಜೊತೆ ಈಜಲು ಹೋಗಿದ್ದ. ಈ ವೇಳೆ ಕೆರೆಯಲ್ಲಿ ಮುಳುಗಿರಬಹುದು ಎನ್ನಲಾಗುತ್ತಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಂಡ್ಯ: ಕನ್ನಡ ಕರ್ನಾಟಕ ಫೌಂಡೇಶನ್, ಎಂಪ್ಟಿ ಪಾಕೆಟ್ ಡ್ರೀಮ್ಸ್ ಜೊತೆಗೂಡಿ ಆಯೋಜಿಸಿದ್ದ ಆಪ್ತ ಸಂವಾದ: ಒಂದು ಪುಸ್ತಕ ಕ್ರಾಂತಿ ಕಾರ್ಯಕ್ರಮದ…
ಬೆಂಗಳೂರು: ಗಾಯಕಿ ಮಂಗ್ಲಿ ಮತ್ತು ಅವರ ಸಹೋದರನ ವಿರುದ್ಧ ೧೦ ಕೋಟಿ ರೂ. ಮೋಸದ ಆರೋಪದಡಿ ಪಂಜಗುಟ್ಟ ಪೊಲೀಸರು ಪ್ರಕರಣ…
ಬೆಂಗಳೂರು: ರಾಜ್ಯದ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಒಂದು ವಾರ ಭಾರೀ ಮಳೆಯಾಗಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ…
ದಾವಣಗೆರೆ: ಉಪಚುನಾವಣೆ ಮುಗಿದ ಬೆನ್ನಲ್ಲೇ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಉಸ್ತುವಾರಿ…
ಬೆಂಗಳೂರು: ಸಾಂಸ್ಕೃತಿಕ ನಗರ ಮೈಸೂರಿನ ಅಶೋಕಪುರಂ ರೈಲು ನಿಲ್ದಾಣದ ಹೆಸರನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ವದಂತಿಯನ್ನು ಕೇಂದ್ರ ರೈಲ್ವೆ ಸಚಿವ…
ಬೀದರ್: ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.…