ಮೈಸೂರು

ಹೆಚ್ಚಾದ ತಂತ್ರಜ್ಞಾನ ; ದುಷ್ಪರಿಣಾಮಗಳ ಅರಿವು ಮುಖ್ಯ : ಕೆ.ಎಂ ಗಾಯಿತ್ರಿ

ಮೈಸೂರು: ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಮಂತ್ರಾಲಯ ಹಾಗೂ ಜಿಲ್ಲಾ ಮಾಹಿತಿ ಕೇಂದ್ರದ ವತಿಯಿಂದ ಜಿಪಂ ಕಚೇರಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು “ಸುರಕ್ಷಿತ ಇಂಟರ್ ನೆಟ್ ದಿನ” ಆಚರಣೆ ಅಂಗವಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಗಾರವನ್ನು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ  ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ದೈನಂದಿನ ಜೀವನದಲ್ಲಿ ತಂತ್ರಜ್ಞಾನ ಹೆಚ್ಚಾಗಿ ಆವರಿಸಿದ್ದು, ತಂತ್ರಜ್ಞಾನದ ಪ್ರಯೋಜನ ಹಾಗೂ ದುಷ್ಪರಿಣಾಮಗಳ ಬಗ್ಗೆ ಅರಿವು ಅಗತ್ಯವಾಗಿದ್ದು ಹಾಗೂ ಅಪರಾಧಗಳನ್ನು ತಡೆಗಟ್ಟಲು, ಸಮಾಜದ ಮೇಲೆ ಕೆಟ್ಟ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಾಗಾರ ಅನುಕೂಲವಾಗಿದೆ ಎಂದು ಹೇಳಿದರು.

ತಂತ್ರಜ್ಞಾನ ಬಳಕೆಯಿಂದ ವಿವಿಧ ರೀತಿಯಲ್ಲಿ ಮೋಸ ಮಾಡುವ ಪ್ರವೃತ್ತಿ ಹಾಗೂ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಯಾವುದೇ ಆಮೀಷಗಳಿಗೆ ಒಳಗಾಗದೇ ಅಂತರ್ಜಾಲದ ಉಪಯೋಗಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಂಡು ವಂಚಿತರಾಗದೇ ಬದುಕು ನಡೆಸಿ ಎಂದು ಅರಿವು ಮೂಡಿಸಿದರು.

ಅಪರ ಜಿಲ್ಲಾಧಿಕಾರಿಗಳಾದ ಡಾ.ಪಿ. ಶಿವರಾಜು ಅವರು ಮಾತನಾಡಿ, ಕಾಲಬದಲಾದಂತೆ ತಂತ್ರಜ್ಞಾನವು ಆಲದ ಮರದಂತೆ ಬೆಳೆದಿದ್ದು, ಮನುಷ್ಯನಿಗಿಂತ ಸಾವಿರಪಟ್ಟು ಬೆಳೆಯುತ್ತಿದೆ. ಇದರಿಂದ ತಂತ್ರಜ್ಞಾನದ ಅರಿವು ಮೊದಲು ಅಗತ್ಯವಾಗಿದ್ದು, ದೈನಂದಿನ ಕೆಲಸ ಕಾರ್ಯಗಳಿಗೆ ಅಗತ್ಯವಿರುವ ತಂತ್ರಜ್ಞಾನದ ಅರಿವು, ಮೋಸ ಹೋಗದಂತೆ ಸೈಬರ್ ಜಾಗೃತಿಗಳನ್ನು ಅಳವಡಿಸಿಕೊಳ್ಳಬೇಕು. ಕಚೇರಿಗಳಲ್ಲಿ ನಿಮ್ಮ ವೈಯಕ್ತಿಕ ಲಾಗಿನ್ ಗಳ ಬಗ್ಗೆ ಅರಿವಿನ ಜೊತೆಗೆ ಇತರರಿಗೆ ಲಾಗಿನ್ ಗಳನ್ನು ಶೇರ್ ಮಾಡದಂತೆ ಎಚ್ಚರಿಕೆ ವಹಿಸಿ ಎಂದು ತಿಳಿಸಿದರು.

ಕುವೆಂಪುನಗರದ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶಿಲ್ಪ ರವರು ಸಂಪನ್ಮೂಲ ವ್ಯಕ್ತಗಳಾಗಿ ದೈನಂದಿನ ಜೀವನದಲ್ಲಿ ಇಂಟರ್ ನೆಟ್ ಬಳಕೆ, ಇಂಟರ್ ನೆಟ್ ಅಪಾಯಗಳು, ಆನ್ ಲೈನ್ ವಂಚನೆ, ಸೈಕಾಲಾಜಿಕಲ್ ವಂಚನೆ, ಬ್ಯಾಂಕಿಂಗ್ ವಂಚನೆ, ಮೋಸ ಹೋಗದಂತೆ ಮುನ್ನೇಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಉಪಕಾರ್ಯದರ್ಶಿ(ಆಡಳಿತ) ಸವಿತಾ, ಮುಖ್ಯ ಲೆಕ್ಕಾಧಿಕಾರಿ ಸಿದ್ದಗಂಗಮ್ಮ, ಜಿಲ್ಲಾ ಸೂಚನಾ ವಿಜ್ಞಾನ ಅಧಿಕಾರಿ ಸುದರ್ಶನ್ ರವರು ಸೇರಿದಂತೆ ಇತರರು ಹಾಜರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ದೆಹಲಿಯಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್‌ ಘೋಷಣೆ

ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸತತ ಎರಡನೇ ದಿನವೂ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ…

6 hours ago

ರಾಜ್ಯದಲ್ಲಿ ಮತ್ತಷ್ಟು ತಗ್ಗಲಿದೆ ಮಳೆ: ಹವಾಮಾನ ಇಲಾಖೆ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಮತ್ತು ಉತ್ತರ ಒಳನಾಡಿನ…

8 hours ago

ನೇಪಾಳಕ್ಕೆ ಮತ್ತೆ ವಿನಾಶಕಾರಿ ಪ್ರವಾಹದ ಎಚ್ಚರಿಕೆ

ಕಠ್ಮಂಡು: ನೇಪಾಳಕ್ಕೆ ಮತ್ತೆ ವಿನಾಶಕಾರಿ ಪ್ರವಾಹದ ಆತಂಕ ಎದುರಾಗಿದೆ. ದಾರ್ಚುಲಾ ಜಿಲ್ಲೆಯ ಅಪಿ ಹಿಮಾಲ್ ಗ್ರಾಮೀಣ ಪುರಸಭೆಯ ಭಟ್ಟಾರ್ ಪ್ರದೇಶದಲ್ಲಿ…

8 hours ago

ಓದುಗರ ಪತ್ರ: ಸಚಿವರಿಬ್ಬರ ಹೇಳಿಕೆಗಳು ‘ಲಕ್ಷ್ಮಣರೇಖೆ’ ಮೀರದಿರಲಿ

ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಜಲಸಂಪನ್ಮೂಲ ಸಚಿವ ಎನ್.ಚಲುವರಾಯ ಸ್ವಾಮಿಯವರ ನಡುವಿನ ಆರೋಪ ಮತ್ತು ಪ್ರತ್ಯಾರೋಪಗಳು…

14 hours ago

ಓದುಗರ ಪತ್ರ: ‘ಸಂಧ್ಯಾ ಕಿರಣ’ ಯೋಜನೆಯ ವ್ಯಾಪ್ತಿಗೆ ವಯೋನಿಗದಿ ಬೇಡ

ಸರ್ಕಾರವು ೭೦ ವರ್ಷದೊಳಗಿನ ನಿವೃತ್ತ ಸರ್ಕಾರಿ ಪಿಂಚಣಿದಾರರಿಗೆ, ಕುಟುಂಬ ಪಿಂಚಣಿದಾರರಿಗೆ ಮತ್ತು ಅವರ ಅರ್ಹ ಅವಲಂಬಿತ ವಿಕಲಚೇತನ ಮಕ್ಕಳ ಆರೋಗ್ಯ…

14 hours ago

ಓದುಗರ ಪತ್ರ: ಗುರು-ಶಿಷ್ಯರ ಸಂಬಂಧ ವರ್ಣನಾತೀತ

ನಮ್ಮಲ್ಲಿ ಗುರುವಿಗೆ ಅಗ್ರಸ್ಥಾನ ಕೊಟ್ಟಿದ್ದೇವೆ. ಒಂದು ಅಕ್ಷರ ಕಲಿಸಿದವರನ್ನು ಗುರುವೆಂದು ಒಪ್ಪಿಕೊಂಡಿದ್ದೇವೆ. ಗುರುವು ನಮಗೆ ಒಳ್ಳೆಯ ಮಾರ್ಗ,ನಡತೆ ಹಾಗೂ ಜ್ಞಾನವನ್ನು…

14 hours ago