ಕೆ.ಆರ್.ನಗರ : ತಾಲೂಕಿನ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಬಳಿ ನಡೆದ ಹಜರತ್ ಖಾದರ್ ಲಿಂಗವಲ್ಲಿ ಉರುಸ್ ಕಾರ್ಯಕ್ರಮಕ್ಕೆ ಬಂದಿದ್ದವರು ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ಎಂಟು ಬಂದಿದ್ದವರರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಐಮನ್ (13 ವರ್ಷ, ಬೆಂಗಳೂರು), ಅಫೀಫ್(13 ವರ್ಷ, ಕೆ.ಆರ್.ನಗರ), ಯಾಸಿನ್ (23 ವರ್ಷ, ಬೆಂಗಳೂರು), ನೇಹಾ (22 ವರ್ಷ, ಬೆಂಗಳೂರು), ಫಾತಿಮಾ (30 ವರ್ಷ, ಊಟಿ), ಉಮೆರ್ (5 ವರ್ಷ, ಮೈಸೂರು) ಮೃತಪಟ್ಟವರು.
ಪೊಲೀಸರು ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಭಾಗವಹಿಸಿದ್ದರು.
ಘಟನೆ ಕುರಿತು ಮಾತನಾಡಿರುವ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ, ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ 8 ಮಂದಿಯಲ್ಲಿ ಮುಳುಗಿ 6 ಜನ ಸಾವನ್ನಪ್ಪಿದ್ದಾರೆ. ಘಟನೆ ಹೇಗಾಯಿತು ಎನ್ನುವ ಬಗ್ಗೆ ಹೆಚ್ಚಿನ ತನಿಖೆ ಮಾಡುತ್ತಿದ್ದೇವೆ. ಮುಂದಿನ ದಿನದಲ್ಲಿ ಇಂತಹ ಘಟನೆ ಜರುಗದಂತೆ ನಮ್ಮ ಇಲಾಖೆಯಿಂದ ಎಚ್ವರಿಕೆ ವಹಿಸಲಾಗುವುದು ಎಂದರು.
ಈಗಿನ ಕಾಲದ ಮಕ್ಕಳಿಗೆ ಎಲ್ಲವೂ ಕ್ಷಣ ಮಾತ್ರದಲ್ಲಿ ಅರ್ಥವಾಗುವುದರಿಂದ ಅವರ ವರ್ತನೆಯಲ್ಲಿ ಸಹಜತೆಯನ್ನು ಕಾಣಬಹುದು. ಇಂದಿನ ಮಕ್ಕಳಿಗೆ ಭಯ ಇಲ್ಲ…
ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ನಾಗರತ್ನ ದಂಪತಿಯ ವಿವಾಹ ವಿಚ್ಛೇದನಕ್ಕೆ ರಾಜ್ಯ ಹೈಕೋರ್ಟ್ ಸಮ್ಮತಿ ನೀಡಿರುವುದು ಮಾಧ್ಯಮಗಳ…
ಮೈಸೂರಿನ ಶಾರದಾದೇವಿ ನಗರದಲ್ಲಿ ಹೊಸ ಬಸ್ ನಿಲ್ದಾಣವನ್ನು ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಈ ಬಸ್…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ರಾಷ್ಟ್ರೀಯ ಸ್ವಯಂ ಸೇವಾ ಸಂಘವು ಆರಂಭವಾಗಿ ನೂರು ವರ್ಷ ತುಂಬಿದ ಸ್ಮರಣಾರ್ಥವಾಗಿ ಸಂಘದ ಉದ್ದೇಶ…
ಅಕ್ಷತಾ ‘ಹವ್ಯಾಸ ಮನುಷ್ಯನ ಕನಸುಗಳಿಗೆ ಗರಿ ಮೂಡಿಸುತ್ತದೆ. ಕನಸು ಕಾಣುವ ವ್ಯಕ್ತಿಗೆ ಅವಕಾಶಗಳ ದಾರಿ ತೆರೆದುಕೊಳ್ಳುತ್ತವೆ’ ಇದು ಬೆಂಗಳೂರಿನಲ್ಲಿ ನೆಲೆಸಿರುವ…
ಸಿರಿ ಮೈಸೂರು ಆ ದಿನ ನಾನು ಸಾಮಾನ್ಯವಾಗಿ ಹೋಗದಂತಹ ಒಂದು ಅಪರೂಪದ ಸ್ಥಳಕ್ಕೆ ಹೋಗಿದ್ದೆ. ಮೈಸೂರಿನಿಂದ ಐದಾರು ಗಂಟೆಗಳ ಪ್ರಯಾಣದ…