ಮೈಸೂರು

ಮೈಸೂರು ರೈಲ್ವೆ ನಿಲ್ದಾಣ ಅಭಿವೃದ್ದಿಗೆ 493 ಕೋಟಿ ರೂ.

ನಾಗನಹಳ್ಳಿ ರೈಲ್ವೆ ಸ್ಯಾಟಲೈಟ್ ಟರ್ಮಿನಲ್ ನಿರ್ಮಾಣಕ್ಕೂ ಯೋಜನೆ: ಸಂಸದ ಪ್ರತಾಪಸಿಂಹ

ಮೈಸೂರು:ಮೈಸೂರು ರೈಲ್ವೆ ನಿಲ್ದಾಣ ಅಭಿವೃದ್ಧಿ ಹಾಗೂ ನಾಗನಹಳ್ಳಿ ರೈಲ್ವೆ ಸ್ಯಾಟಲೈಟ್ ಟರ್ಮಿನಲ್ ನಿರ್ಮಾಣದ ೪೯೩ ಕೋಟಿ ರೂ.ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ಕೇಂದ್ರ ರೈಲ್ವೆ ಸಚಿವಾಲಯದಿಂದ ಅನುಮತಿ ದೊರೆತಿದ್ದು ಶೀಘ್ರದಲ್ಲೇ ಯೋಜನೆಯನ್ನು ಕಾರ್ಯಗತಗೊಳಿಸಲು ಅಗತ್ಯ ಕ್ರಮವನ್ನು ರೈಲ್ವೆ ಇಲಾಖೆ ಕೈಗೊಳ್ಳಲಿದೆ ಎಂದು ಮೈಸೂರು- ಕೊಡಗು ಕ್ಷೇತ್ರ ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ನಗರದ ರೈಲ್ವೆಭವನದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದ ಸಭಾಂಗಣದಲ್ಲಿ ಕೇಂದ್ರ ರೈಲ್ವೆ ಸಚಿವಾಲಯದಿಂದ ಅನುಮೋದನೆ ದೊರೆತಿರುವ ಪ್ರಮುಖ ಯೋಜನೆಗಳ ಅನುಷ್ಟಾನ ಕುರಿತು ಗುರುವಾರ ನಡೆದ ವಿವಿಧ ರೈಲ್ವೆ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.

ಜನವರಿ ವೇಳೆಗೆ ಟೆಂಡರಿಂಗ್ ಕೆಲಸವಾಗಲಿದೆ. ೨೦೨೩ರ ಜೂನ್ ವೇಳೆಗೆ ಈ ಕಾರ್ಯ ಪೂರ್ಣಗೊಳ್ಳಲಿದೆ. ರಾಜ್ಯ ಸರ್ಕಾರ ತನ್ನಪಾಲಿನ ೧೧೯ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಹಾಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು

೫೩. ೧ ಕೋಟಿ ರೂ. ವೆಚ್ಚದಲ್ಲಿ ಮೈಸೂರು ರೈಲು ನಿಲ್ದಾಣ ಮರು ಅಭಿವೃದ್ಧಿಪಡಿಸಲು ೩ ಹಂತದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು.ಮೊದಲ ಹಂತವಾಗಿ ಕ್ವಾಟ್ರಸ್‌ಗಳು ಮತ್ತು ಕಚೇರಿಗಳ ನಿರ್ಮಾಣ ಮಾಡಲಾಗುವುದು. ಈ ಕಾರ್ಯಕ್ಕಾಗಿ ಈ ವ್ಯಾಪ್ತಿಗೆ ಬರುವ ರೈಲ್ವೆ ಕ್ವಾಟ್ರಸ್‌ಗಳನ್ನು ತೆರವುಗೊಳಿಸಲಾಗುವುದು. ಅಲ್ಲಿ ವಾಸವಿರುವವರಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸುವವರೆಗೆ ನಗರದ ವಿವಿಧಕಡೆ ಖಾಸಗಿ ಅಪಾರ್ಟ್‌ಮೆಂಟ್‌ಗಳಲ್ಲಿ ತಾತ್ಕಾಲಿಕವಾಗಿ ವಾಸಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಮೈಸೂರು ನಿಲ್ದಾಣ ಪ್ರದೇಶ ಮೇಲ್ದರ್ಜೆಗೇರಿಸುವುದು ಮತ್ತು ೩ ನೇ ಹಂತದಲ್ಲಿ ನಾಗನಹಳ್ಳಿಯಲ್ಲಿ ಯಾರ್ಡ್ ನಿರ್ಮಾಣ ಮಾಡಲಾಗುವುದು.ನಾಗನಹಳ್ಳಿ ಸ್ಯಾಟಲೈಟ್ ಟ್ರಕ್‌ಟರ್ಮಿನಲ್ ನಿರ್ಮಾಣಕ್ಕಾಗಿ ಈ ಮಾರ್ಗದ ಶಾಲೆಗಳ ತೆರವು, ಭೂಮಿ ಪಡೆಯುವುದು,ಈ ಮಾರ್ಗದಲ್ಲಿ ಬರುವ ಮರಗಳ ತೆರವಿಗಾಗಿ ಸಂಬಂಧಪಟ್ಟವರಿಗೆ ಪತ್ರ ಬರೆದು ಚರ್ಚಿಸಲಾಗಿದೆ. ಈ ಕೆಲಸ ನಿರ್ವಹಿಸಲು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಕುಶಾಲನಗರ ರೈಲು ಯೋಜನೆ

ಮೈಸೂರು- ಕುಶಾಲನಗರ ನಡುವಿನ ೮೭ ಕಿ.ಮೀ. ಉದ್ದದ ನೂತನ ರೈಲು ಯೋಜನೆ ಅನುಷ್ಟಾನಕ್ಕೆ ಈಗಾಗಲೇ ೧೮೫೪ ಕೋಟಿ ರೂ.ಬಿಡುಗಡೆಯಾಗಿದೆ. ಶೀಘ್ರದಲ್ಲಿ ಟೆಂಡರ್ ನೀಡುವ ಸಲುವಾಗಿ ಅಗತ್ಯ ಭೂಮಿ ಪಡೆಯಲು ಸರ್ವೇ ಕಾರ್ಯ ಪ್ರಗತಿಯಲ್ಲಿದೆ.ಈ ರೈಲು ಮಾರ್ಗದಲ್ಲಿ ಬೆಳಗೊಳ,ಇಲವಾಲ, ಬಿಳಿಕೆರೆ,ಉದ್ದೂರು, ಹುಣಸೂರು, ಸತ್ಯಗಾಲ,ಪಿರಿಯಾಪಟ್ಟಣ,ದೊಡ್ಡಹೊನ್ನೂರು,ಕುಶಾಲನಗರ ಸೇರಿದಂತೆ ಒಟ್ಟು ೯ ರೈಲ್ವೆ ನಿಲ್ದಾಣಗಳ ಬರಲಿವೆ. ಈ ರೈಲುಮಾರ್ಗದ ಸಂಚಾರ ವೇಗ ಗಂಟೆಗೆ ೧೬೦ ಕಿ.ಮೀ ಆಗಿದ್ದು ಕೊಡಗು ಮತ್ತು ಮೈಸೂರು ಜನತೆಗೆ ಇದರ ಸೇವೆ ಲಭ್ಯವಾಗಲಿದೆ ಎಂದರು.

ಅಶೋಕಪುರಂ ರೈಲು ನಿಲ್ದಾಣ ಮೇಲ್ದರ್ಜೆಗೆ

ಅಶೋಕಪುರಂ ನಿಲ್ದಾಣವನ್ನು ಅಭಿವೃದ್ಧಿಗೊಳಸಲು ಮೊದಲ ಹಂತದಲ್ಲಿ ೧೫.೧೭ ಕೋಟಿ ರೂ. ಮತ್ತು ಎರಡನೇ ಹಂತದಲ್ಲಿ ೧೩.೩೯ ಕೋಟಿ ರೂ. ಬಿಡುಗಡೆ ಯಾಗಿದ್ದು ಮೂರು ಹೆಚ್ಚುವರಿ ಪ್ಲಾಟ್ ಫಾರ್ಮ್‌ಲೈನ್‌ಗಳ ನಿರ್ಮಾಣ ಮತ್ತು ಈಗ ಇರುವ ಪ್ಲಾಟ್ ಫಾರ್ಮ್‌ಗಳ ವಿಸ್ತರಣೆ, ವರ್ಕ್‌ಶಾಪ್‌ಗೆ ತೆರಳಲು ಎರಡು ಮಾರ್ಗಗಳ ರಚನೆ,ಕೋಚ್‌ಗಳನ್ನು ಸ್ವಚ್ಛಗೊಳಿಸಲು ನೀರು ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ೫೩೧೦ ಚದರಡಿ ಹಾಗೂ ೩೪೪ ಚದರಡಿ ಖಾಸಗಿ ಜಾಗದ ಅವಶ್ಯಕತೆ ಇದ್ದು ಈ ಕೆಲಸವನ್ನು ಶೀಘ್ರದಲ್ಲಿ ಮುಗಿಸಿ ಕೆಲಸ ಆರಂಭಿಸಲಾಗುವುದು ಎಂದು ಪ್ರತಾಪಸಿಂಹ ಹೇಳಿದರು.

 

ಸಿಂಹ ಹೇಳಿದ್ದೇನು?

ಕುಕ್ಕರಹಳ್ಳಿ ಕೆರೆ ಎದುರಿನ ಗೇಟ್ ಸ್ಥಳದಲ್ಲಿ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ೨೬.೫೪ ಕೋಟಿ ರೂ ಬಿಡುಗಡೆಗೊಂಡಿದೆ

ಕೆಆರ್‌ಎಸ್ ರಸ್ತೆಯಲ್ಲಿ ರೈಲ್ವೆ ಮೇಲು ಸೇತುವೆ ಕೆಲಸ ಕಾರ್ಯಗತಕ್ಕೆ ೪೧.೮೨ ಕೋಟಿ ರೂ. ಬಿಡುಗಡೆಯಾಗಿದೆ.

ಮೈಸೂರು-ಚಾಮರಾಜನಗರ ನಡುವೆ ಎಲೆಕ್ಟ್ರಿಕ್ ರೈಲು ಸಂಚಾರಕ್ಕೆ ಅಗತ್ಯವಾದ ಎಲ್ಲ ಕೆಲಸ ಪೂರ್ಣಗೊಂಡಿದೆ.

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಸ್ಥಳಾಭಾವದಿಂದ ರೈಲುಗಳ ಸಂಚಾರ ಚಾಮರಾಜನಗರಕ್ಕೆ ವಿಸ್ತರಿಸಲು ಯೋಜನೆ

ಕಡಕೊಳ ರೈಲು ನಿಲ್ದಾಣದ ಬಳಿ ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ ೨.೫ ಕೋಟಿ ರೂ. ಬಿಡುಗಡೆ

ಯಾದವಗಿರಿ ಬಳಿ ಹೊಸ ಟರ್ಮಿನಲ್ ನಿರ್ಮಾಣ,ಹೊಸ ಸ್ಟೇಷನ್,ಬೆಳಗೊಳದಲ್ಲಿ ೨ ಸ್ಟೆಬಲಿಂಗ್ ಲೈನ್.

 

 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಯೋಗದಿನದಂದು ಮೈಸೂರಿಗೆ ಆಗಮಿಸಿದ್ದ ವೇಳೆ ೧೦ ಮಾರ್ಗಗಳ ಹೈವೇ ಸ್ಯಾಟಲೈಟ್ ಟರ್ಮಿನಲ್ ಘೋಷಣೆ ಮಾಡಿದ್ದರು.ಜಾಗದ ಸಮಸ್ಯೆ ತೊಡಕಾಗಿತ್ತು. ಈಗ ಈ ಯೋಜನೆ ಅನುಷ್ಟಾನಗೊಳಿಸಲು ಅವಕಾಶ ದೊರೆತಿದೆ.

-ಪ್ರತಾಪಸಿಂಹ,

andolana

Recent Posts

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಜೆಡಿಎಸ್‌ ಎಂಎಲ್‌ಸಿ ಸೂರಜ್‌ ರೇವಣ್ಣಗೆ ಬಿಗ್‌ ಶಾಕ್‌

ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ಪ್ರಕರಣವನ್ನು ಕೈಬಿಡುವಂತೆ ಕೋರಿ, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ…

8 hours ago

ಟಿ.ನರಸೀಪುರ| ಆನೆ ದಾಳಿಗೆ ರೈತ ಬಲಿ

ಟಿ.ನರಸೀಪುರ: ಕಾಡಾನೆ ದಾಳಿಗೆ ಸಿಲುಕಿ ರೈತರೊಬ್ಬರು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ತಲಕಾಡು ಪೊಲೀಸ್‌ ಠಾಣೆ ವ್ಯಾಪ್ತಿಯ…

12 hours ago

ಮೈಸೂರು ನಗರ ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಪೂರೈಸುತ್ತಿದ್ದ ಇಬ್ಬರ ಬಂಧನ

ಮೈಸೂರು: ಮೈಸೂರು ನಗರದ ಸಿಸಿಬಿ ಪೊಲೀಸರು ಇಂದು ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.…

12 hours ago

ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳಿ: ದಿನೇಶ್‌ ಗೂಳಿಗೌಡ

ಮಂಡ್ಯ: ಮಕ್ಕಳು ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಸಂಗೀತ, ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ಕರ್ನಾಟಕ ರಾಜ್ಯ…

13 hours ago

ಶಾಸಕರ ವಿದೇಶಿ ಪ್ರವಾಸಕ್ಕೂ ರಾಜಕೀಯ ಬೆಳವಣಿಗೆಗಳಿಗೂ ಸಂಬಂಧವಿಲ್ಲ: ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಶಾಸಕರ ವಿದೇಶಿ ಪ್ರವಾಸಕ್ಕೂ ರಾಜಕೀಯ ಬೆಳವಣಿಗೆಗಳಿಗೂ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.…

13 hours ago

ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣ: ಅಂತಿಮ ಹಂತಕ್ಕೆ ತಲುಪಿದ ಎಸ್‌ಐಟಿ ತನಿಖೆ

ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ವಿಶೇಷ ತನಿಖಾ ತಂಡ ತನಿಖೆಯನ್ನು ಪೂರ್ಣಗೊಳಿಸಿ ವರದಿ…

13 hours ago