ಮೈಸೂರು

ಮೈಸೂರು ಜಿಲ್ಲೆಯಲ್ಲಿ 26,38,487 ಮತದಾರರು

ಮೈಸೂರು: ‘ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಂತರ ಅಂದರೆ ಏ.12ರವರೆಗೆ 13,08,771 ಪುರುಷರು, 13,29,493 ಮಹಿಳೆಯರು ಹಾಗೂ 223 ಇತರರು ಸೇರಿದಂತೆ ಒಟ್ಟು 26,38,487 ಮಂದಿ ಮತದಾರರಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

‘ಇದೇ ವರ್ಷ ಮಾರ್ಚ್‌ 29ರ ಪಟ್ಟಿ ಪ್ರಕಾರ, 13,01,022 ಪುರುಷರು, 13,21,316 ಮಹಿಳೆಯರು ಹಾಗೂ 213 ಇತರರು ಸೇರಿದಂತೆ 26,22,551 ಮತದಾರರಿದ್ದರು. ಈಗ 7,749 ಪುರುಷರು ಹಾಗೂ 8,177 ಮಹಿಳೆಯರು ಹಾಗೂ 10 ಮಂದಿ ಇತರರು ಸೇರಿದಂತೆ 15,936 ಜನ ಸೇರ್ಪಡೆಯಾಗಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.

‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 3,535 ಮಂದಿ (1,715 ಪುರುಷರು, 1,818 ಮಹಿಳೆಯರು ಹಾಗೂ ಇಬ್ಬರು ಇತರರು) ಹೊಸದಾಗಿ ಸೇರ್ಪಡೆಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಅಭ್ಯರ್ಥಿಗಳ ಖರ್ಚು–ವೆಚ್ಚದ ಮೇಲೆ ನಿಗಾ ಇಡಲು ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 242 ಸೆಕ್ಟರ್ ಅಧಿಕಾರಿಗಳು, 51 ಫ್ಲೈಯಿಂಗ್‌ ಸ್ಕ್ವಾಡ್, 53 ಅಂಕಿ ಸಂಖ್ಯೆ ಪರಿಶೀಲನಾ ತಂಡ, 12 ವಿಡಿಯೊ ಸರ್ವಿಲೆನ್ಸ್‌, 11 ವಿಡಿಯೊ ವೀವಿಂಗ್ ತಂಡ, 11 ಅಕೌಂಟಿಂಗ್ ತಂಡ ಮತ್ತು 17 ಸಹಾಯಕ ವೆಚ್ಚ ಅಬ್ಸರ್ವರ್ಸ್‌ ತಂಡಗಳನ್ನು ರಚಿಸಲಾಗಿದೆ’ ಎಂದು ತಿಳಿಸಿದರು.

‘ಈವರೆಗೆ ಎಫ್‌ಎಸ್‌ಟಿ ತಂಡದಿಂದ ₹ 11,36 ಲಕ್ಷ, ಎಸ್‌ಎಸ್‌ಟಿಯಿಂದ ₹ 1,31 ಕೋಟಿ, ಪೊಲೀಸರು ₹ 1,39 ಲಕ್ಷ ಸೇರಿ ಒಟ್ಟು ₹ 1,47 ಕೋಟಿ ನಗದು ಜಪ್ತಿ ಮಾಡಲಾಗಿತ್ತು. ಇದರಲ್ಲಿ ದಾಖಲೆ ಒದಗಿಸಿದ್ದರಿಂದ ₹8.64 ಲಕ್ಷ ನಗದನ್ನು ಬಿಡುಗಡೆ ಮಾಡಲಾಗಿದೆ. ₹ 1.39 ಕೋಟಿ ಬಾಕಿ ಇದೆ. 137 ಗ್ರಾಂ. ಚಿನ್ನ ಜಪ್ತಿಯಾಗಿತ್ತು. ಸೂಕ್ತ ದಾಖಲೆ ನೀಡಿದ್ದರಿಂದ ಅದನ್ನು ಹಿಂತಿರುಗಿಸಲಾಗಿದೆ. ಅಬಕಾರಿ ಅಧಿಕಾರಿಗಳು 1.76 ಲಕ್ಷ ಲೀಟರ್‌ ಮದ್ಯವನ್ನು, ಪೊಲೀಸರು 17.53 ಕೆ.ಜಿ. ಮಾದಕ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಈವರೆಗೆ 17 ಪ್ರಕರಣಗಳು ದಾಖಲಿಸಲಾಗಿವೆ’ ಎಂದು ವಿವರ ನೀಡಿದರು.

‘ಆಯೋಗದಿಂದ ಬಿಡುಗಡೆ ಮಾಡಿರುವ ‘ಸಿ–ವಿಜಿಲ್’ ಆ್ಯ‌ಪ್‌ನಲ್ಲಿ 32 ದೂರುಗಳು ಬಂದಿವೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಪ್ರಮಾಣ ಕಡಿಮೆ ಇದೆ. ಸಾರ್ವಜನಿಕರು ಹೆಚ್ಚಾಗಿ ಸ್ಪಂದಿಸಬೇಕು. 32ರಲ್ಲಿ 9 ದೂರುಗಳನ್ನು ಕೈಬಿಡಲಾಗಿದೆ’ ಎಂದು ತಿಳಿಸಿದರು.

ಮತದಾರರ ವಿವರ (ಏ.12ಕ್ಕೆ)

ಕ್ಷೇತ್ರ; ಮತಗಟ್ಟೆಗಳು; ಪುರುಷರು; ಮಹಿಳೆಯರು; ಇತರೆ;ಒಟ್ಟು

ಪಿರಿಯಾಪಟ್ಟಣ;235;97,402;96,635;7;1,94,044

ಕೆ.ಆರ್.ನಗರ;250;1,07,684;1,09,114;19;2,16,817

ಹುಣಸೂರು;273;1,20,828;1,21,034;13;2,41,875

ಎಚ್‌.ಡಿ.ಕೋಟೆ;282;1,12,907;1,12,102;11;2,25,020

ನಂಜನಗೂಡು;249;1,09,250;1,09,853;6;2,19,109

ಚಾಮುಂಡೇಶ್ವರಿ;337;1,62,640;1,63,286;33;3,25,959

ಕೃಷ್ಣರಾಜ;265;1,21,590;1,26,947;27;2,48,564

ಚಾಮರಾಜ;244;1,20,215;1,23,614;31;2,43,860

ನರಸಿಂಹರಾಜ;282;1,38,948;1,47,532;49;2,86,529

ವರುಣ;261;1,16,426;1,65,564;13;2,33,003

ತಿ.ನರಸೀಪುರ;227;1,00,881;1,02,812;14;2,03,707

ಒಟ್ಟು;2,905;13,08,771;13,29,493;223;26,38,487

***

ಮಾರ್ಚ್‌ 29ರಿಂದ ಏ.12ರವರೆಗೆ ಸೇರ್ಪಡೆಯಾದ ಹೆಚ್ಚುವರಿ ಮತದಾರರ ವಿವರ

ಕ್ಷೇತ್ರ;ಪುರುಷರು;ಮಹಿಳೆಯರು;ಇತರೆ;ಒಟ್ಟು

ಪಿರಿಯಾಪಟ್ಟಣ;472;399;0;871

ಕೆ.ಆರ್‌.ನಗರ;637;623;0;1,200

ಹುಣಸೂರು;538;560;0;1,098

ಎಚ್‌.ಡಿ.ಕೋಟೆ;443;473;0;916

ನಂಜನಗೂಡು;438;470;0;908

ಚಾಮುಂಡೇಶ್ವರಿ;1,715;1,818;2;3,535

ಕೃಷ್ಣರಾಜ;680;725;2;1,407

ಚಾಮರಾಜ;514;584;2;1,100

ನರಸಿಂಹರಾಜ;1,210;1,413;3;2,626

ವರುಣ;615;657;1;1,273

ತಿ.ನರಸೀಪುರ;487;455;0;942

ಒಟ್ಟು;7,749;8,177;10;15,936

***

ಚುನಾವಣಾಧಿಕಾರಿ ಕಚೇರಿ ಸಂಪರ್ಕ ವಿವರ

ಕ್ಷೇತ್ರ;ದೂರವಾಣಿ ಸಂಖ್ಯೆ

ಪಿರಿಯಾಪಟ್ಟಣ;08223–274175

ಕೆ.ಆರ್.ನಗರ;08223–262234

ಹುಣಸೂರು;08222–252073

ಎಚ್‌.ಡಿ.ಕೋಟೆ;08228–244325

ನಂಜನಗೂಡು;08221–226252

ಚಾಮುಂಡೇಶ್ವರಿ;0821–2414811

ಕೃಷ್ಣರಾಜ;0821–2427201

ಚಾಮರಾಜ;0821–2427202

ನರಸಿಂಹರಾಜ;0821–2427403

ವರುಣ;08221–226253

ತಿ.ನರಸೀಪುರ;08227–260210

andolanait

Recent Posts

ಕೆಆರ್‌ಎಸ್‌ ಜಲಾಶಯಕ್ಕೆ ಮತ್ತಷ್ಟು ಹೆಚ್ಚಾದ ಒಳಹರಿವು

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ ಒಳಹರಿವಿನಲ್ಲಿ ಮತ್ತಷ್ಟು…

3 hours ago

ಓದುಗರ ಪತ್ರ: ಮ್ಯಾನ್‌ಹೋಲ್ ಸರಿಪಡಿಸಿ

ವಿಜಯನಗರಕ್ಕೆ ಹೋಗುವ ರಸ್ತೆಯಲ್ಲಿ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ಮಹಾದ್ವಾರದ ಎದುರಗಡೆ ರಸ್ತೆಯ ಅಂಚಿಗೆ ಸೇರಿದಂತಿರುವ ಮ್ಯಾನ್ ಹೋಲ್‌ನಿಂದ ಹೊಲಸು ನೀರು…

8 hours ago

ಓದುಗರ ಪತ್ರ: ಎಚ್೧ಎನ್೧ ಮುನ್ನೆಚ್ಚರಿಕೆ ಇರಲಿ

ಕರ್ನಾಟಕದ ೩೨ ಜಿಗಳಲ್ಲಿ ಆಗಸ್ಟ್೨೨ರವರೆಗೆ ಒಟ್ಟು ೫,೦೦೦ ಎಚ್೧ಎನ್೧ ಪ್ರಕರಣಗಳು ದಾಖಲಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲೂ ಪ್ರಕರಣಗಳು…

8 hours ago

ಓದುಗರ ಪತ್ರ: ಭಲೆ ದರ್ಶನ್…ಭಲೆ ಭಲೆ…

ಕೆಲವು ದಿನಗಳ ಹಿಂದೆ ನಂಜನಗೂಡು ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಡಾ. ಅಂಬೇಡ್ಕರ್ ಉದ್ಯಾನವನದಲ್ಲಿ ಅಭಿವೃದ್ಧಿ ಕಾರ್ಯಗಳ ನಿಮಿತ್ತ ಸ್ಥಳೀಯ…

8 hours ago

ಪೊಲೀಸ್ ಆಪ್‌ಗೆ ಖಾಸಗಿ ಸಿಸಿಟಿವಿ ಸೇರ್ಪಡೆ

ಎಚ್.ಎಸ್.ದಿನೇಶ್‌ಕುಮಾರ್ ಅಪರಾಧ ಪ್ರಕರಣಗಳ ಪತ್ತೆಗೆ ನಗರ ಪೊಲೀಸರ ಕಾರ್ಯ ತಂತ್ರ; ಆಪ್ ವ್ಯಾಪ್ತಿಯಲ್ಲಿ ೩೦,೦೦೦ ಸಿಸಿಟಿವಿಗಳು; ಸಿಸಿಟಿವಿ ಸ್ಥಿತಿ ಬಗ್ಗೆಯೂ…

8 hours ago

ಫ್ಲೈಓವರ್ ಕಾಮಗಾರಿ ಕುಂಟುತ್ತಿದೆಯೇಕೆ?

ಎಂ.ಕೇಶವ ಮೈಸೂರು: ನಗರದ ಮಣಿಪಾಲ್ ಆಸ್ಪತ್ರೆಯ ಜಂಕ್ಷನ್ ಬಳಿ ಹಾಗೂ ನಂಜನಗೂಡು ರಸ್ತೆಯ ಎಪಿಎಂಸಿ ಬಳಿ ನಿರ್ಮಾ ಣವಾಗುತ್ತಿರುವ ಫ್ಲೈ…

11 hours ago