ಮೈಸೂರು: ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಯವರ ೧೧೭ನೇ ಜನ್ಮ ದಿನಾಚರಣೆಯನ್ನು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರ ‘ಜನನಿ‘ ಕಚೇರಿಯಲ್ಲಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಎಂ.ಕೆ.ಸೋಮಶೇಖರ್ ಅವರು, ಸಿದ್ದಗಂಗಾ ಶ್ರೀಗಳಂತಹ ಮಹನೀಯರನ್ನು ನೆನೆಯುವುದೇ ಒಂದು ಪುಣ್ಯದ ಕೆಲಸ.
ಶ್ರೀಗಳು ತಮ್ಮ ಜೀವನದುದ್ದಕ್ಕೂ ಸಾಮಾಜಿಕ ಸೇವೆಯ ಮೂಲಕವೇ ಮನೆ ಮಾತಾಗಿದ್ದರು. ಶಿಕ್ಷಣ, ಕಾಯಕ, ದಾಸೋಹದ ತತ್ವವನ್ನು ಅನುಸರಿಸುತ್ತಾ ತಮ್ಮ ಉದಾತ್ತ ಚಿಂತನೆಗಳನ್ನು, ಸಾಂಸ್ಕೃತಿಕ ಮತ್ತು ಧಾರ್ಮಿಕ ಕೃಷಿಯನ್ನು ಈ ನಾಡಿಗೆ ಅರ್ಪಿಸಿದ್ದಾರೆ ಎಂದು ಬಣ್ಣಿಸಿದರು.
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ರವಿಶಂಕರ್, ವಿಜಯಕುಮಾರ್, ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕದ ವಿನಯಕುಮಾರ್, ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ರಾಕೇಶ್, ಮುಖಂಡರಾದ ಗೃಹಶೋಭೆ ಕೃಷ್ಣ, ಕೇಬಲ್ ಶೇಖರ್, ಸುಂದರ್, ಸುನಿಲ್, ಮಹೇಶ್, ಮನಸು, ನಾಗ, ಮಹಾದೇವ, ನದೀಂ ಮತ್ತಿತರರು ಹಾಜರಿದ್ದರು.
ಮೈಸೂರು : ನಟ ದರ್ಶನ್ ಕುಟುಂಬ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಕರ ಸಂಕ್ರಾಂತಿಯನ್ನು ತಮ್ಮ ಫಾರ್ಮ್ ಹೌಸ್‌ನಲ್ಲಿ…
ಮಳವಳ್ಳಿ : ತಾಲೂಕಿನ ಕಿರುಗಾವಲು ಸಮೀಪ ಅಕ್ಕಿ ತುಂಬಿದ ಲಾರಿ ಒಂದು ಪಲ್ಟಿ ಹೊಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ಗುರುವಾರ…
ಬೆಂಗಳೂರು : ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಡಗರ ಮನೆ ಮಾಡಿದೆ. ಹೊಸ ವರ್ಷದ ಮೊದಲ ಹಬ್ಬಕ್ಕೆ ಪ್ರಧಾನಿ ನರೇಂದ್ರ…
ರಾಯಚೂರು : ದೇವದುರ್ಗ ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕಗುರುಪೀಠದ ಸಿದ್ದರಾಮನಂದ ಸ್ವಾಮೀಜಿ (50) ವಿಧಿವಶರಾಗಿದ್ದಾರೆ. ಇಂದು ಬೆಳಗಿನ ಜಾವ 3:30ರ…
ಮನೆ ಮಂದಿ ಮಕ್ಕಳು ಕೂಡಿ ಕಣ ಹೊಕ್ಕಿ, ಹೊಲ ಗದ್ದೆಯೆಲ್ಲಾ ಬೆಳೆದ ಬೆಳೆ ಕೈಗೆ ಬಂದೈತಿ ನಗುವಿಂದ ಮಿಂದು ಸುಗ್ಗಿಯ…
ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬಹುರೂಪಿ ನಾಟಕೋತ್ಸವ ನಡೆಯುತ್ತಿದೆ. ಸಿನಿಮಾ ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಹಾಗೂ…