ಮೈಸೂರು

ಒಂದು ಎಕರೆಯಲ್ಲಿ 102 ವಿವಿಧ ಬೆಳೆ : ರೋಗರಹಿತ ಬೆಳೆಗಳ ತಳಿ ಪ್ರದರ್ಶನ

ಸುತ್ತೂರು : ಕೇವಲ 1 ಎಕರೆ ಪ್ರದೇಶದಲ್ಲಿ ಸುಮಾರು 102 ಮಾದರಿಯ ವಿವಿಧ ತಳಿಯ ಬೆಳೆಗಳನ್ನು ಬೆಳೆಯಬಹುದೆಂಬುದನ್ನು ಸಾಬೀತು ಪಡಿಸಲಾಗಿದೆ.

ಹೌದು ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಈ ಕೃಷಿ ಬ್ರಹ್ಮಾಂಡ ಬೆಳೆಗಳ ಪ್ರದರ್ಶನ ನಡೆದಿದ್ದು, ಇದನ್ನು ವೀಕ್ಷಿಸಿದ ಆಸಕ್ತರು ನಿಬ್ಬೆರಗಾಗಿದ್ದಾರೆ.

ಏಕದಳ ಬೆಳೆ, ಸಿರಿ ಧಾನ್ಯಗಳು, ದ್ವಿದಳ ಬೆಳೆ, ಎಣ್ಣೆ ಕಾಳು ಬೆಳೆ, ತರಕಾರಿ, ಸೊಪ್ಪುಗಳು, ಹೂವಿನ ಗಿಡಗಳು, ಹಣ್ಣಿನ ಬೆಳೆ, ತೋಟ ಪಟ್ಟಿ ಬೆಳೆ, ಔಷಧಿ, ಸುಗಂಧ ಸಸ್ಯ, ಮೇವಿನ ಬೆಳೆ, ರೇಷ್ಮೆ, ಬಹುಪಯೋಗಿ ಮರಗಳು, ಬೇಲಿ ಬೆಳೆಗಳು ಮತ್ತು ಪೂರಕ ಕಸುಬುಗಳ ಅವಶ್ಯಕತೆಗಳು ಈ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ.

ನಂಜನಗೂಡು ತಾಲೂಕು ಸುತ್ತೂರು ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಒಂದು ಎಕರೆ ಪ್ರದೇಶ ಭೂಮಿಯಲ್ಲಿ ಸುಮಾರು ನೂರ ಎರಡು ವಿವಿಧ ಬೆಳೆಗಳ ಪ್ರದರ್ಶನಕ್ಕೆ ಬೆಳೆದಿದ್ದು, ಅದರಲ್ಲೂ ವರ್ಷಪೂರ್ತಿ ಯಾವ ಕಾಲದಲ್ಲಾದರೂ ಬೆಳೆಯುವಂತ ರೋಗರಹಿತ ರಾಗಿ, ಜೋಳ, ಭತ, ಸಿರಿ ಧಾನ್ಯಗಳು, ವಿವಿಧ ತರಕಾರಿಗಳನ್ನು ಬೆಳೆದಿದ್ದು, ಈ ಬೆಳೆಗಳ ಬಗ್ಗೆ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಶಾಮ್ ರಾಜ್ ಅವರು ಮಾಹಿತಿ ನೀಡಿದ್ದಾರೆ.

ಇಂತಹ ಬೆಳೆಗಳಿಂದ ಮಣ್ಣಿನ ಫಲವತ್ತತೆಯೂ ಹೆಚ್ಚಾಗಲಿದ್ದು, ರೋಗ ರಹಿತ ರಾಗಿಯಂತಹ ಬೆಳೆಗಳನ್ನು ಎಕರೆಗೆ 10ರಿಂದ 12 ಕ್ವಿಂಟಾಲ್ ಬೆಳೆಯಬಹುದಾಗಿದೆ. 100 ರಿಂದ 102 ದಿನದೊಳಗೆ ಕಟಾವು ಸಹ ಮಾಡಬಹುದು. ಅಲ್ಲದೇ ಎಲ್ಲಾ ಸಮಯದಲ್ಲೂ ಅಂದರೆ ಹಿಂಗಾರು, ಮುಂಗಾರು, ಬೇಸಿಗೆ ಕಾಲ, ಚಳಿಗಾಲದಲ್ಲಿಯೂ ಈ ಆರೋಗ್ಯಕರ ಬೆಳೆಗಳನ್ನು ಬೆಳೆಯಬಹುದು.ಮತ್ತು ಉತ್ತಮ ಮೇವಿಗೂ ಇದು ಅನುಕೂಲಕರ ಎಂದರಲ್ಲದೇ, ಈ ಬೆಳೆಗಳಿಗೆ ಬೆಂಕಿರೋಗ, ಕುತ್ತಿಗೆ ರೋಗದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಮತ್ತು ತೆನೆ ತಿಗಣೆಯಂತಹ ಸಮಸ್ಯೆಯೂ ಉದ್ಭವಿಸಿವುದಿಲ್ಲ ಎಂದರು.

ಎಲ್ಲಕ್ಕಿಂತ ಮಿಗಿಲಾಗಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದಾದಂತಹ ಬೆಳೆಗಳು ಇದಾಗಿದ್ದು, ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಲಿದೆ.ರೈತರು ಈ ರೀತಿಯ ಅಂತರ್ ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕೆಂಬುದು ನಮ್ಮ ಸಲಹೆ ಎಂದು ಅಭಿಪ್ರಾಯವನ್ನು ಹಂಚಿಕೊಂಡರು.

ಇನ್ನು ಹೆಚ್ಚಿನ ಮಾಹಿತಿಗಾಗಿ 9986269393 ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಚಿತ್ರ, ಮಾಹಿತಿ: ಸುತ್ತೂರು ನಂಜುಂಡನಾಯಕ

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಪೌರಾಯುಕ್ತೆಗೆ ಬೆದರಿಕೆ ಹಾಕಿದ ಪ್ರಕರಣ: ರಾಜೀವ್‌ಗೌಡ ಮನೆಗಳಿಗೆ ನೋಟಿಸ್‌ ಅಂಟಿಸಿದ ಪೊಲೀಸರು

ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿರುವ ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡ ಪತ್ತೆಗಾಗಿ ಪೊಲೀಸರು…

17 mins ago

ಓದುಗರ ಪತ್ರ: ಶಾಲಾ ಮಕ್ಕಳ ಬ್ಯಾಗ್ ಹೊರೆ ತಗ್ಗಿಸಿ

ಶಾಲಾ ಮಕ್ಕಳು ಭಾರವಾದ ಪುಸ್ತಕಗಳ ಬ್ಯಾಗ್ ಹೊರಲಾರದೆ ತ್ರಾಸದಿಂದಲೇ ಹೊತ್ತುಕೊಂಡು ನಡೆಯುವ ದೃಶ್ಯ ಈಗ ಎಲ್ಲೆಡೆ ಕಂಡುಬರುತ್ತದೆ. ಬ್ಯಾಗ್‌ನಲ್ಲಿ ಪಠ್ಯ…

4 hours ago

ಓದುಗರ ಪತ್ರ: ಉದ್ಯೋಗ ನೇಮಕಾತಿ ಯಾವಾಗ?

ಸರ್ಕಾರ ಅಧಿಸೂಚನೆ ಹೊರಡಿಸುವುದು ಯಾವಾಗ? ಉದ್ಯೋಗ ನೇಮಕಾತಿ ಯಾವಾಗ? ಇದು ಸಾವಿರಾರು ಉದ್ಯೋಗ ಆಕಾಂಕ್ಷಿಗಳ ಪ್ರಶ್ನೆ. ಇದು ಕಳೆದ ಹಲವು…

4 hours ago

ಓದುಗರ ಪತ್ರ: ಉದ್ಯೋಗ ವಯೋಮಿತಿ ಹೆಚ್ಚಳ ಸ್ವಾಗತಾರ್ಹ

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ನೌಕರಿ ಪಡೆಯಲು ಇದ್ದ ವಯೋಮಿತಿಯನ್ನು ಐದು ವರ್ಷ ಹೆಚ್ಚಳ ಮಾಡಿ…

4 hours ago

ಇಂದು ಕೇರಳ ಬೈತೂರು ದೇವಾಲಯದ ಪತ್ತೂಟ

ಕಾಂಗೀರ ಬೋಪಣ್ಣ ಕೊಡಗು-ಕೇರಳದ ಜನರು ಒಟ್ಟಾಗಿ ಆಚರಿಸುವ ವಿಭಿನ್ನ ಆಚರಣೆ; ವಿಶಿಷ್ಟ  ಹಬ್ಬಕ್ಕೆ  ಅಗತ್ಯ ಸಿದ್ಧತೆ  ವಿರಾಜಪೇಟೆ: ಕೇರಳ ಹಾಗೂ…

4 hours ago

ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿ ಫುಟ್‌ಪಾತ್ ಒತ್ತುವರಿ

ಮಹೇಂದ್ರ ಹಸಗೂಲಿ ಪಾದಚಾರಿಗಳು ಓಡಾಡದಂತೆ ವಿರೂಪ; ಒತ್ತುವರಿ ತೆರವಿಗೆ ಸಾರ್ವಜನಿಕರ ಆಗ್ರಹ  ಗುಂಡ್ಲುಪೇಟೆ: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಫುಟ್‌ಪಾತ್‌ಗಳನ್ನು…

4 hours ago