ಮೈಸೂರು: ನಗರದ ತ್ರಿನೇಶ್ವರನಿಗೆ ಚಿನ್ನದ ಮುಖವಾಡ ಧರಿಸಿ ವಿಶೇಷ ಪೂಜೆ ನೆರವೇರಿಸಲಾಯಿತುಮೈಸೂರು : ಮಹಾಶಿವರಾತ್ರಿಯ ನಿಮಿತ್ತ ಇಂದು ಬೆಳಗ್ಗೆಯಿಂದಲೇ ಮೈಸೂರು ಜಿಲ್ಲೆಯ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ಆರಂಭವಾಗಿದೆ. ಅರಮನೆ ಆವರಣದಲ್ಲಿರುವ ತ್ರಿನೇಶ್ವರ ಸ್ವಾಮಿಗೆ 11 ಕೆಜಿ ತೂಕದ ಚಿನ್ನದ ಮುಖವಾಡದ ಕೊಳಗವನ್ನು ಹಾಕಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳು ಬೆಳಗ್ಗೆಯಿಂದಲೇ ತ್ರಿನೇಶ್ವರನ ದರ್ಶನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.ದೇಶಾದ್ಯಂತ ಇಂದು ಮಹಾಶಿವರಾತ್ರಿ ಸಂಭ್ರಮ. ಮುಂಜಾನೆಯಿಂದಲೇ ಭಕ್ತರು ಶಿವನ ದೇವಾಲಯಗಳಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಉಪವಾಸ ಹಾಗೂ ಜಾಗರಣೆ ಈ ದಿನದ ವಿಶೇಷವಾಗಿದ್ದು, ಮೈಸೂರು ಜಿಲ್ಲೆಯಲ್ಲಿ ಸಹ ಶಿವರಾತ್ರಿ ಸಂಭ್ರಮ ಜೋರಾಗಿದೆ. ನಗರದ ಅಂಬಾ ವಿಲಾಸ ಅರಮನೆಯ ಆವರಣದಲ್ಲಿರುವ ಇತಿಹಾಸ ಪ್ರಸಿದ್ಧ ತ್ರಿನೇಶ್ವರ ಸ್ವಾಮಿಗೆ ಮಹಾರಾಜರು ನೀಡಿರುವಂತಹ 11 ಕೆಜಿ ತೂಕದ ಬಾಲ ಶಿವನ ಚಿನ್ನದ ಮುಖವಾಡದ ಕೊಳಗವನ್ನು ಬೆಳಗ್ಗೆಯೇ ದೇವರಿಗೆ ಧರಿಸಿ ಪೂಜೆ ಸಲ್ಲಿಸಲಾಯಿತು. ವರ್ಷದಲ್ಲಿ ಶಿವರಾತ್ರಿಯ ದಿನದಂದು ಮಾತ್ರ ಈ ದರ್ಶನ ಭಾಗ್ಯ ಶಿವಭಕ್ತರಿಗೆ ಸಿಗುವುದು ವಿಶೇಷ.
ಶಿವರಾತ್ರಿಯಂದು ನಡೆಯುವ ವಿಶೇಷ ಪೂಜೆಗಳು : ಶಿವರಾತ್ರಿ ದಿನದಂದು ಶಿವನ ದರ್ಶನ ಪಡೆದು ಅರ್ಚನೆ ಮಾಡಿದರೆ ಪುಣ್ಯ ಫಲಗಳು ಸಿಗುತ್ತವೆ ಎಂಬುದು ಶಿವಭಕ್ತರ ನಂಬಿಕೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆ ಆವರಣದಲ್ಲಿ ಇರುವ ತ್ರಿನೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 4:30 ಯಿಂದಲೇ ವಿಶೇಷ ಚಿನ್ನದ ಕೊಳಗವನ್ನ ಧಾರಣೆ, ಗಣಪತಿ ಪೂಜೆ, ರುದ್ರಾಭಿ
ವಿರಾಜಪೇಟೆ: ಅಕಾಲಿಕ ಮಳೆಯ ಪರಿಣಾಮ ಒಣಗಿದ ಮರ ದೇಗುಲದ ಕಟ್ಟಡ ದ ಮೇಲೆ ಬಿದ್ದು ಹಾನಿಯಾಗಿರುವ ಘಟನೆ ವಿರಾಜಪೇಟೆ ತೆಲುಗರಬೀದಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್, ಆನೆಕಂದಕ ನಿರ್ಮಾಣ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಾರ್ಚ್ 2026ರ ರಾಜ್ಯ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ನೀಡಲಾಗಿದ್ದ ಹಿಂದಿನ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು : ಚಿರತೆ ದಾಳಿಗೆ ಹಸುವೊಂದು ಬಲಿಯಾಗಿರುವ ಘಟನೆ ರಾಮಾಪುರ ಸಮೀಪದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ರಾಮನಗುಡ್ಡ ಜಲಾಶಯಕ್ಕೆ ನೀರು ತುಂಬಿಸಿ, ಅಲ್ಲಿಂದ…
ತುಮಕೂರು: ಎಷ್ಟೇ ಟೀಕೆ ಟಿಪ್ಪಣಿಗಳು ಬಂದರೂ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ…