ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ 2022ರ ಅಂಗವಾಗಿ ಪ್ರಕಾಶಮಾನ ದೀಪದ ವ್ಯವಸ್ಥೆ ಮತ್ತು ಕೆಲಸದ ಸಮಯವನ್ನು ವಿಸ್ತರಣೆ ಮಾಡಲಾಗಿದೆ.
ನೈರುತ್ಯ ರೈಲ್ವೆಯ ಕೆ ಆರ್ ಎಸ್ ರಸ್ತೆಯಲ್ಲಿರುವ ಮೈಸೂರು ರೈಲ್ವೆ ವಸ್ತು ಸಂಗ್ರಹಾಲಯವನ್ನು ಇದೇ ತಿಂಗಳ 26ರಿಂದ ಅಕ್ಟೋಬರ್ 5ರವರೆಗೆ ನಡೆಯುವ ದಸರಾ ಉತ್ಸವಗಳ ಸಮಯದಲ್ಲಿ ಪ್ರಕಾಶಮಾನ ದೀಪದ ವ್ಯವಸ್ಥೆಯೊಂದಿಗೆ ಬೆಳಗಿಸುವುದರ ಜೊತೆಗೆ ಕೆಲಸದ ಸಮಯವನ್ನು ಎರಡು ಗಂಟೆಗಳವರೆಗೆ ವಿಸ್ತರಿಸಲಾಗಿದೆ.
ವಸ್ತು ಸಂಗ್ರಹಾಲಯದ ವಿoಟೇಜ್ ಸ್ಟೀಮ್ ಲೋಕೋಮೋಟಿವೆಟ್, ಕೋಚ್ಗಳು, ವ್ಯಾಗನ್ಗಳು,ಆಟಿಕೆ, ರೈಲು ಕೈಯಿಂದ ಚಾರಿತ ಕ್ರೇನ್, ರೈಲ್ ಬಸ್ ಮತ್ತು ಸ್ಟೀಮ್ ಪೈರ್ ಪಂಪ್ ನಂತಹ ಹೊರಾಂಗಣ ಪ್ರದರ್ಶನಗಳ ಅದ್ಭುತ ಪ್ರಕಾಶಿತ ನೋಟವನ್ನು ಪ್ರವಾಸಿಗರು ಈ ಬಾರಿ ನೋಡಬಹುದಾಗಿದೆ.
ರೈಲ್ವೆ ವಸ್ತು ಸಂಗ್ರಹಾಲಯವು ರಾಜಾ ದಿನಗಳಾದ ಇದೆ ತಿಂಗಳ 27 ಮತ್ತು ಅಕ್ಟೋಬರ್ 4ರಂದು ದಸರಾ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ತೆರೆದಿರುತ್ತದೆ.
ನಿಗದಿತ ಶುಲ್ಕ ಪಾವತಿಯೊಂದಿಗೆ ಎಸ್ ಎಲ್ ಆರ್, ಡಿಎಸ್ಎಲ್ಆರ್ ಕ್ಯಾಮೆರಾ ಗಳನ್ನು ಛಾಯಾಗ್ರಹಣಕ್ಕೆ ಬಳಸುವ ಅವಕಾಶವಿರುತ್ತದೆ. ಇದರ ಜೊತೆಗೆ ರೈಲು ವಸ್ತು ಸಂಗ್ರಹಾಲಯದ ಆವರಣದೊಳಗೆ ತಿಂಡಿ ತಿನಿಸುಗಳನ್ನು ನಿಷೇಧಿಸಲಾಗಿದೆ ಎಂದು ಮೈಸೂರು ರೈಲು ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ಅವರು ತಿಳಿಸಿದ್ದಾರೆ.
ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…
ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…
ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…
ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…
ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…
ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…