ಮೈಸೂರು : ಮೂವರ ಮೇಲೆ ಕಾರು ಹರಿಸಿ, ಕೊಲೆಗೆ ಯತ್ನಿಸಿದ ಆರೋಪಿ ದರ್ಶನ್ (೨೪)ನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮತ್ತೊಂದೆಡೆ, ಈ ಕೃತ್ಯಕ್ಕೆ ಆರೋಪಿಯ ತಾಯಿಯೇ ಪ್ರಚೋದನೆ ನೀಡಿದ್ದಾರೆ ಎಂದು ಗಾಯಾಳು ಪ್ರಜ್ವಲ್ ತಂದೆಯಿಂದ ಆರೋಪ ಕೇಳಿಬಂದಿದೆ.
ಭಾನುವಾರ ತಡರಾತ್ರಿ ಜನತಾ ನಗರದ ಟೆಂಟ್ ಸರ್ಕಲ್ ಬಳಿ ಪ್ರಜ್ವಲ್, ರಾಹುಲ್, ಆನಂದ್ ಎಂಬವರ ಮೇಲೆ ಟಿ.ಕೆ. ಬಡಾವಣೆಯ ನಿವಾಸಿ ವಾಸುದೇವ್ ಅವರ ಮಗ ದರ್ಶನ (೨೪) ಕಾರು ಹರಿಸಿ, ಕೊಲೆಗೆ ಯತ್ನಿಸಿದ್ದ ಈ ಸಂಬಂಧ ಸೋಮವಾರ ಸಂಜೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದರ್ಶನ್ ಹೇಳಿಕೆ : ತಡರಾತ್ರಿಯಾಗಿದ್ದರಿಂದ ರಸ್ತೆಯಲ್ಲಿ ಯಾವುದೇ ವಾಹನಗಳು ಇರಲಿಲ್ಲ. ಹಾಗಾಗಿ, ನಾನು ವೇಗವಾಗಿ ಬಂದಿದ್ದು, ನಿಜ. ಆದರೆ, ದೂರುದಾರರು ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿಕೊಂಡು ಮಾತನಾಡುತ್ತಿದ್ದರು. ಆದರೂ, ಕಾರನ್ನು ನಿಯಂತ್ರಿಸಿದೆ. ಇವರು ಯಾಕೆ ಹೀಗೆ ಬಂದೆ ಎಂದು ನನ್ನ ಮೇಲೆ ಹಲ್ಲೆ ಮಾಡಲು ಬಂದರು. ಈ ಸಮಯದಲ್ಲಿ ನಮ್ಮ ತಂದೆ-ತಾಯಿ ತಪ್ಪಾಯಿತು ಎಂದು ಸಮಾಧಾನ ಮಾಡಿದರು. ನಂತರ ನಾನು ಬೇಕೆಂದು ಅವರ ಮೇಲೆ ಕಾರು ಹರಿಸಿಲ್ಲ. ಕಾರಿನದ್ದು ಆಟೋಮೆಟಿಕ್ ಗೇರ್ ಆಗಿದ್ದರಿಂದ ಮೊದಲ ಗೇರ್‌ನಲ್ಲಿ ಕಾರು ಜಂಪ್ ಮಾಡಿ, ಅವರಿಗೆ ಡಿಕ್ಕಿ ಹೊಡೆದಿದೆ. ಮತ್ತೆ ಅವರೆಲ್ಲಿ ಹೊಡೆಯಲು ಬರುತ್ತಾರೋ ಎಂದು ಕಾರನ್ನು ರಿವರ್ಸ್ ತೆಗೆದೆ ಎಂದು ವಿಚಾರಣೆ ವೇಳೆ ದರ್ಶನ್ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಇನ್ನು ಮೂವರು ಗಾಯಾಳುಗಳಿಗೂ ಚಿಕಿತ್ಸೆ ಮುಂದುವರಿದಿದೆ. ಪ್ರಜ್ವಲ್ ಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸರ್ಜರಿಯಾಗಿಲ್ಲ. ರಾಹುಲ್‌ಗೆ ಸರ್ಜರಿ ಆಗಿ ಐಸಿಯುನಲ್ಲಿ ಇದ್ದಾರೆ. ಆನಂದ್ ಎಂಬಾತನಿಗೂ ಸರ್ಜರಿಯಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪ್ರಜ್ವಲ್ ಕುಟುಂಬದ ಮೂಲಗಳು ತಿಳಿಸಿವೆ.
ಆರೋಪಿಯ ತಾಯಿಯಿಂದಲೇ ಪ್ರಚೋದನೆ: ಆರೋಪ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಹರಿಸಲು ಕಾರಿನಲ್ಲಿ ಇದ್ದ ಆರೋಪಿ ದರ್ಶನ್ ತಾಯಿ ಪ್ರಚೋದನೆ ನೀಡಿದ್ದಾರೆ. ಆದರೆ, ಗಾಯಾಳುವಿನ ಹೇಳಿಕೆ ಪಡೆದು ಎಫ್‌ಐಆರ್ ಮಾಡಿರುವವರು ಇದನ್ನು ಸೇರಿಸಿಲ್ಲ. ಬದಲಾಗಿ, ತಂದೆ-ತಾಯಿಯೇ ಸಮಾಧಾನ ಮಾಡಿದರು ಎಂದು ಸೇರಿಸಿದ್ದಾರೆ. ಆರೋಪಿಯ ತಂದೆ-ತಾಯಿಗಳು ಮಾನವೀಯತೆಯಿಂದಲೂ ಬಂದು ಗಾಯಾಳುಗಳ ಆರೋಗ್ಯ ವಿಚಾರಿಸಿಲ್ಲ ಎಂದು ಪ್ರಜ್ವಲ್ ತಂದೆ ನಾಗರಾಜು ಆರೋಪಿಸಿದ್ದು, ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ಮಾಡಿ, ನ್ಯಾಯ ಒದಗಿಸುವಂತೆ ಕೋರಿದ್ದಾರೆ.
ಇಸ್ರೇಲ್ : ಇಸ್ರೇಲ್-ಲೆಬನಾನ್ ಉದ್ವಿಗ್ನತೆಗೆ 10 ದಿನಗಳ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.…
ನವದೆಹಲಿ : ಉತ್ತರ, ದಕ್ಷಿಣ, ದೊಡ್ಡ ಅಥವಾ ಸಣ್ಣ ರಾಜ್ಯಗಳಾವುದೇ ಇರಲಿ ಕ್ಷೇತ್ರ ಪುನರ್ ವಿಂಗಡಣೆಯ ವಿಷಯಕ್ಕೆ ಬಂದಾಗ ರಾಜ್ಯಗಳ…
ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಿಗೆ…
ನವದೆಹಲಿ : ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಸಣ್ಣ ಘರ್ಷಣೆಯಾಗಿದ್ದು, ಭಾರೀ ಅನಾಹುತ ತಪ್ಪಿದೆ.…
ರಾಯಚೂರು : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿಲಕಣಡೋಣ ಗ್ರಾಮದ ಸಮೀಪ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ…
ಬೆಂಗಳೂರು : ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆಯಾಗುವ ಸಾಧ್ಯತೆಯಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ…