ಮೈಸೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಚಿರತೆ ಹಾವಳಿ ಹೆಚ್ಚುತ್ತಲೇ ಇದ್ದು, ಇದೀಗ ನಗರ ಪ್ರದೇಶದಲ್ಲೂ ಚಿರತೆ ಕಾಣಿಸಿಕೊಳ್ಳುತ್ತಿರುವುದು ನಗರದ ಜನರ ನಿದ್ದೆಗೆಡಿಸಿದೆ. ವರ್ತುಲ ರಸ್ತೆ ಸಮೀಪ ಆರ್‌ಟಿ ನಗರದಲ್ಲಿರುವ ಉರುಕಾತೇಶ್ವರಿ ದೇವಸ್ಥಾನ ಬಳಿ ರಾತ್ರಿ ಚಿರತೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮಣ್ಣಿನ ಗುಡ್ಡದ ಹಿಂದೆ ಅವಿತಿದ್ದ ಚಿರತೆ ರಸ್ತೆ ದಾಟುವ ದೃಶ್ಯ ಕಾರಿನಲ್ಲಿ ಸಾಗುತ್ತಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದೆ. ರಸ್ತೆ ದಾಟುತ್ತಿದ್ದ ಚಿರತೆ ದೃಶ್ಯವನ್ನು ವೀಕ್ಷಿಸಿದ ಸ್ಥಳೀಯರು ಇದೀಗ ಭಯಗ್ರಸ್ಥರಾಗಿದ್ದಾರೆ.
ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇತ್ತೀಚೆಗೆ ರಾಮಕೃಷ್ಣ ನಗರದಲ್ಲಿ ಕರುವೊಂದು ಪ್ರಾಣಿಯ ದಾಳಿಯಿಂದ ಮೃತಪಟ್ಟಿತ್ತು. ಇದು ನಾಯಿಗಳಿಂದ ಆಗಿರುವ ದಾಳಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದರು. ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಮೈದನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸೆರೆ ಶುಕ್ರವಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಇದೀಗ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿರುವುದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.
ಹಾಸನ: ರಾಕಿಂಗ್ ಸ್ಟಾರ್ ಯಶ್‌ಗೆ ಭೂ ಒತ್ತುವರಿ ತೆರವು ಶಾಕ್ ನೀಡಲಾಗಿದೆ. ಹಾಸನದಲ್ಲಿರುವ ಲಕ್ಷ್ಮಮ್ಮ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ…
ಮೈಸೂರು ನಗರದ ಕುವೆಂಪು ನಗರದ ವಿವೇಕಾನಂದ ವೃತ್ತದಿಂದ ಶ್ರೀರಾಂಪುರದ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ…
ರಾಜ್ಯದ ವಿವಿಧ ಭಾಗಗಳಲ್ಲಿ ರಾಗಿ, ಭತ್ತ, ಜೋಳ ಮೊದಲಾದ ಫಸಲನ್ನು ಒಕ್ಕಣೆ ಮಾಡಲು ರಸ್ತೆಯನ್ನೇ ಬಳಸುತ್ತಿದ್ದು, ಇದರಿಂದ ಅಪಘಾತಗಳು ಸಂಭವಿಸಿ…
ಮೈಸೂರು ವಿಭಾಗದಲ್ಲಿ ಹುಲಿ ಚಿರತೆಗಳ ದಾಳಿಯಿಂದಾಗಿ ಹಲವಾರು ಮಂದಿ ಸಾವನ್ನಪ್ಪಿದ್ದರು. ಮಾನವ-ಪ್ರಾಣಿ ಸಂಘರ್ಷವನ್ನು ತಪ್ಪಿಸುವಂತೆ ರೈತ ಸಂಘ ಹಾಗೂ ಗ್ರಾಮಸ್ಥರು…
ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ಕಳೆದ ವರ್ಷ ೨೦೨೫ರಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ…
ನವೀನ್ ಡಿಸೋಜ ಅನುದಾನ ಬಿಡುಗಡೆಯಾದರೂ ಆರಂಭವಾಗದ ಕಾಮಗಾರಿ ಶೀಘ್ರ ಸೇತುವೆ ನಿರ್ಮಾಣಕ್ಕೆ ಒತ್ತಾಯ ಮಡಿಕೇರಿ: ಕುಶಾಲನಗರ ತಾಲ್ಲೂಕಿನ ದುಬಾರೆ ತೂಗು…