ಇಂದಿನಿಂದಲೇ ಜಾರಿಗೆ ನಗರಪಾಲಿಕೆ ಒಪ್ಪಿಗೆ: ಘನ ತ್ಯಾಜ್ಯ ನಿರ್ವಹಣೆಗೆ ವಾರಣಾಸಿ ಮಾದರಿ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದಕ್ಕೆ ಕಡಿವಾಣ ಹಾಕುವ ಜತೆಗೆ, ಘನತ್ಯಾಜ್ಯ ವಸ್ತು ನಿರ್ವಹಣೆಗೆ ಸಹಕರಿಸದೆ ಇರುವ ಸಾರ್ವಜನಿಕರು, ಉದ್ದಿಮೆದಾರರಿಗೆ ಛಾಟಿ ಬೀಸಲು ನಗರಪಾಲಿಕೆ ಮುಂದಾಗಿದ್ದು, ತತಕ್ಷಣದಿಂದಲೇ ದಂಡ ವಿಧಿಸುವ ಕಾರ್ಯಕ್ಕೆ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಅಲ್ಲದೇ ಘನ ತ್ಯಾಜ್ಯವನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದ ಮಾದರಿಯಲ್ಲಿ ನಿರ್ವಹಣೆ ಮಾಡಲು ಮುಂದಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮಾವಳಿಗಳು-೨೦೧೬ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮಹಾಪೌರ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಮಂಡಿಸಿದ್ದ ವಿಷಯಕ್ಕೆ ಒಪ್ಪಿಗೆ ದೊರೆತಿರುವುದರಿಂದ ಶುಕ್ರವಾರದಿಂದಲೇ ಕಾರ್ಯರೂಪಕ್ಕೆ ಬರಲಿದೆ. ಇದಲ್ಲದೆ,ಪ್ಲಾಸ್ಟಿಕ್ ಬಳಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ದಂಡ ಶುಲ್ಕ ವಿಧಿಸುವುದಕ್ಕೂ ಒಪ್ಪಿಗೆ ನೀಡಿರುವುದರಿಂದ ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್ ಬಳಸಿದರೆ ದಂಡ ತೆರಬೇಕಾಗುತ್ತದೆ.
ಪ್ಲಾಸ್ಟಿಕ್ ಮೇಲೆ ನಿಗಾ
ದಪ್ಪದ ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ,ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ ಫ್ಲೆಕ್ಸ್, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಮ್,ಥರ್ಮಾಕೋಲ್, ಪ್ಲಾಸ್ಟಿಕ್ ಮೈಕ್ರೋಬೀಡ್‌ನಿಂದ ತಯಾರಾಗುವ ಇತರೆ ವಸ್ತುಗಳನ್ನು ತಯಾರಿಸುವ, ಸರಬರಾಜು, ಸಂಗ್ರಹಣೆ, ಮಾರಾಟ, ವಿತರಣೆ ಮಾಡುವವರಿಗೆ ದಂಡ ಹಾಕಲಾಗುತ್ತದೆ.
ಯಾವ್ಯಾವುದಕ್ಕೆ ಎಷ್ಟೆಷ್ಟು ದಂಡ:
ಯಾವುದಕ್ಕೆ? ಮೊದಲ ಬಾರಿ ೨ನೇ ಬಾರಿ
ಸಾರ್ವಜನಿಕ ಸ್ಥಳಗಳಲ್ಲಿ ಕಸ ೫೦೦ ರೂ. ೧,೦೦೦ ರೂ.
ತ್ಯಾಜ್ಯ ವಿಂಗಡಿಸದಿದ್ದರೆ ೨೦೦ ರೂ. ೫೦೦ ರೂ.
ವಾಣಿಜ್ಯ ಉದ್ದಿಮೆದಾರರಿಗೆ ೫೦೦ ರೂ. ೧,೦೦೦ ರೂ.
ದ್ರವ ತ್ಯಾಜ್ಯ ೫೦೦ ರೂ. ೧,೦೦೦ ರೂ.
ಪ್ರಾಣಿಜನ್ಯ ತ್ಯಾಜ್ಯ ೫೦೦ ರೂ, ೧,೦೦೦ ರೂ.
ಕಟ್ಟಡ ತ್ಯಾಜ್ಯ ೫,೦೦೦ ರೂ. ೧೦,೦೦೦ ರೂ.
ಚರಂಡಿಗಳಿಗೆ ತ್ಯಾಜ್ಯ ೫೦೦ರೂ, ೧,೦೦೦ ರೂ.
ತ್ಯಾಜ್ಯ ಸುಟ್ಟರೆ ೨೦೦ ರೂ. ೫೦೦ ರೂ.
ಪ್ಲಾಸ್ಟಿಕ್ ಸುಟ್ಟರೆ ೫೦೦ರೂ, ೧,೦೦೦ ರೂ.
ಇ ತ್ಯಾಜ್ಯ ಸುಟ್ಟರೆ ೧,೦೦೦ ರೂ. ೫,೦೦೦ ರೂ.
ತ್ಯಾಜ್ಯ ಸಂಸ್ಕರಿಸದಿದ್ದಲ್ಲಿ ೨೦,೦೦೦ ರೂ. ೫೦,೦೦೦ ರೂ.
(ಹಾಸ್ಟೆಲ್, ರೆಸ್ಟೋರೆಂಟ್,ವಿದ್ಯಾಸಂಸ್ಥೆಗಳು, ಕಲ್ಯಾಣಮಂಟಪಗಳು, ಮಾಲ್‌ಗಳು, ಸರ್ಕಾರಿ ಕಚೇರಿಗಳು, ವಾಣಿಜ್ಯ ಕಟ್ಟಡಗಳಿಗೆ)
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…