ಜಿಲ್ಲೆಗಳು

ಗರಿ ಬಿಚ್ಚಿದ ಬಹುರೂಪಿ

ಮಹದೇವ ಮತ್ತು ತಂಡದಿಂದ ಕಂಸಾಳೆ, ಕೆರೆಮನೆ ಶಿವಾನಂದ ಹೆಗಡೆ ಯಕ್ಷಗಾನ

ಬಿ.ಎನ್.ಧನಂಜಯಗೌಡ

ಮೈಸೂರು: ಸಭಿಕರೆಡೆಯಿಂದ ನಾಟ್ಯದ ನಡಿಗೆಯಲ್ಲಿ ಬಂದ ನವಿಲೊಂದು, ವನರಂಗದ ವೇದಿಕೆಯ ಮೇಲೆ ಬಂದು ಗರಿಬಿಚ್ಚಿ ಕುಣಿದು ಕುಪ್ಪಳಿಸುತ್ತಾ ತನ್ನ ಗರಿಗಳಲ್ಲಿ ನಾನಾ ಬಗೆಯ ಜನಪದ ಕಲೆಗಳ ಚಿತ್ರಗಳನ್ನು ಅನಾವರಣಗೊಳಿಸಿತು.

ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ರಂಗಾಯಣದ ವನರಂಗದಲ್ಲಿ ಆಯೋಜಿಸಿರುವ ಬಹುರೂಪಿ ಜನಪದೋತ್ಸವಕ್ಕೆ ಹೀಗೆ ವಿಶಿಷ್ಟ ಮತ್ತು ವಿಭಿನ್ನ ರೀತಿಯಲ್ಲಿ ಗುರುವಾರ ಚಾಲನೆ ದೊರೆಯಿತು. ಜನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಸೇರಿದಂತೆ ವೇದಿಕೆ ಮೇಲಿನ ಎಲ್ಲ ಗಣ್ಯರು ಕಲಾವಿದನಿಂದ ನವಿಲಿನ ಗರಿಗಳಲ್ಲಿ ಅನಾವರಣಗೊಂಡ ಜನಪದ ಕಲೆಗಳ ಚಿತ್ರಗಳಿಗೆ ಕುಸುಮಾರ್ಚನೆ ಮಾಡಿದರು.

ಇನ್ನು ಮೊದಲ ದಿನ ಕಾರ್ಯಕ್ರಮದಲ್ಲಿ ಬೀಸು ಕಂಸಾಳೆಯ ಸದ್ದುಗದ್ದಲ, ಯಕ್ಷಗಾನದ ತಾಳಮದ್ದಳೆ ನೆರೆದಿದ್ದ ಕಲಾಸ್ತರನ್ನು ರಂಜಿಸಿತು. ಇನ್ನು ಡಾ.ಪಿ.ಕೆ.ರಾಜಶೇಖರ್ ಅವರು ಮಾತಿನ ಮಧ್ಯೆ ಹೇಳಿದ ಜನಪದ ಹಾಡುಗಳು, ಜನಪದ ಒಗಟು, ಕಥೆಗಳನ್ನು ಹೇಳುವ ಮೂಲಕ ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತುವ ಮೂಲಕ ಇದೊಂದು ಜನಪದಹಾಸ್ಯ ಕಾರ್ಯಕ್ರಮವೂ ಆಯಿತು.

ನಂಜನಗೂಡಿನ ಮಹದೇವ ಮತ್ತು ತಂಡದವರು ಸುಮಾರು ೩೦ ನಿಮಿಷಗಳ ಕಾಲ ಪ್ರದರ್ಶಿಸಿದ ಕಂಸಾಳೆಯ ತಾಳಗಳಿಗೆ ವೀಕ್ಷಕರು ಕುಳಿತಲ್ಲಿಯೇ ಕಾಲು ಕುಣಿಸುತ್ತಾ, ಚಪ್ಪಾಳೆ ತಟ್ಟುತ್ತಾ ಎಂಜಾಯ್ ಮಾಡಿದರು. ಇನ್ನು ಕಂಸಾಳೆ ನೃತ್ಯದಲ್ಲಿ ಕಂಡು ಬಂದ ಸಾಹಸಮಯ ದೃಶ್ಯಗಳಿಗೆ ಚಪ್ಪಾಳೆಯ ಜೊತೆಗೆ ಸಿಳ್ಳೆಗಳು ಕೇಳಿ ಬಂದವು.

ಆ ನಂತರ ಕೆರೆಮನೆ ಶಿವಾನಂದ ಹೆಗಡೆಯವರು ಪ್ರದರ್ಶಿಸಿದ ‘ಪಂಚವಟಿ’ ಕಥೆಯಾಧಾರಿತ ಯಕ್ಷಗಾನ ವೀಕ್ಷಕರನ್ನು ಬಹುವಾಗಿ ಆಕರ್ಷಿಸಿತು. ಯಕ್ಷಗಾನದ ಪ್ರತಿ ದೃಶ್ಯಗಳನ್ನು ವೀಕ್ಷಕ ವೃಂದ ಸದ್ದುಗದ್ದಲಗಳನ್ನು ಮಾಡದೇ ತದೇಕಚಿತ್ತದಿಂದ ವೀಕ್ಷಿಸಿತು. ತಾಳಮದ್ದಳೆಯ ಸದ್ದು ಮತ್ತು ಯಕ್ಷಗಾನದ ಹಿಮ್ಮೇಳದ ಹಾಡು, ಹೌಹಾರಿಕೆ ಇಡೀ ರಂಗಾಯಣವನ್ನು ಸುತ್ತುವರೆದಿತ್ತು. ಎರಡೂ ತಂಡದ ಕಲಾವಿದರಿಗೆ ಪ್ರಶಸ್ತಿ ಮತ್ತು ಸ್ಮರಣಿಕೆಯನ್ನು ನೀಡುವ ಮೂಲಕ ಗೌರವಿಸಲಾಯಿತು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಮಾತನಾಡಿ, ನಮ್ಮ ಜನಪದ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಯುವಪಡೆಯನ್ನು ಸಿದ್ಧಗೊಳಿಸಬೇಕಾದ ಜವಾಬ್ದಾರಿ ಸರ್ಕಾರ ಸೇರಿದಂತೆ ನಮ್ಮೆಲ್ಲರ ಮೇಲಿದೆ ಎಂದರು.

ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಜನಪದವನ್ನು ಪಠ್ಯದ ಮೂಲಕ ಬೋಧಿಸುವುದು, ಕಲೆಯಾಗಿ ಕಲಿಸುವ ಅಗತ್ಯವಿದೆ. ಮೈಸೂರು ವಿವಿಯಲ್ಲಿ ಬಹಳ ಉತ್ಸಾಹದಿಂದ ಜನಪದ ವಿಭಾಗವನ್ನು ಆರಂಭಿಸಲಾಯಿತು. ಆದರೆ, ಈಗ ಅದು ಮಾಮೂಲಿಯಾಗಿ ಒಂದು ವಿಷಯವಾಗಿದೆ. ಎಲ್ಲೂ ಸೀಟು ಸಿಗದೇ ಇದ್ದಾಗ ಡಿಗ್ರಿ ಸರ್ಟಿಫಿಕೇಟ್ ಪಡೆಯಲು ಅಂತಿಮವಾಗಿ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಸೇರುತ್ತಾರೆ ಎಂದರು.

ಜನಪದ ಅತ್ಯಂತ ಪ್ರಾಚೀನ ಕಲೆಯಾಗಿದ್ದು, ಇದಕ್ಕೆ ಪ್ರಸರಣ ಗುಣವೂ ಇದೆ. ಇಂತಹ ನಮ್ಮ ಸಂಸ್ಕೃತಿಯನ್ನು ಕಡೆಗಣಿಸಿ ಪಾಶ್ಚಾತ್ಯ ಸಂಸ್ಕೃತಿಯನ್ನು ಕಲಿಯತ್ತಾ, ಅನುಸರಿಸುತ್ತಾ ಹೋದರೆ ಎಲ್ಲರೂ ಪರಕೀಯರು, ಪರದೇಶಿಗಳು ಆಗುತ್ತೀರಾ. ಹಾಗಾಗಿ, ನಮ್ಮ ಸಂಸ್ಕೃತಿಯನ್ನು ಪಾಲನೆ ಮಾಡುತ್ತಾ ಸ್ವದೇಶಿಗಳಾಗಿಯೇ ನಾವಿರಬೇಕು ಎಂದರು.

ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಮಾತನಾಡಿ, ಕಲೆಯ ವಿಷಯಕ್ಕೆ ಬಂದಾಗ ನಮ್ಮ ದೇಶಕ್ಕೆ ಯಾವುದೇ ದೇಶವು ಪ್ರತಿಸ್ಪರ್ಧಿಯಾಗಲಾರದು. ಅಷ್ಟು ಕಲೆಗಳು ನಮ್ಮಲ್ಲಿ ಇವೆ. ಅವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಅನುದಾನಗಳನ್ನು ನೀಡುವ ಮೂಲಕ ಆದ್ಯತೆ ನೀಡಬೇಕು ಎಂದರು.

ಎಲ್ಲ ಕಲೆಗಳು ನಮ್ಮ ಜನಪದ ಅಡಿಗಲ್ಲಿನ ಮೇಲೆ ನಿಂತಿವೆ. ಅದೇ ಇಲ್ಲವಾದರೆ, ಬೇರೆ ಎಲ್ಲ ಕಲೆಗಳು ಕುಸಿಯುತ್ತವೆ. ಪಾಶ್ಚಿಮಾತ್ಯ ಪ್ರಭಾವ ನಮ್ಮ ಅಸ್ಮಿತೆಯನ್ನು ಕುಂದಿಸುವ ಹಂತಕ್ಕೆ ಬಂದಿದೆ. ಹೀಗಾದರೆ, ನಮ್ಮ ಕಲೆಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಅವುಗಳನ್ನು ನಾವುಗಳು ಗಟ್ಟಿಗೊಳಿಸಿ, ಕಟ್ಟಬೇಕು. ಮರೆಯಾಗುತ್ತಿರುವ ಕಲೆಗಳ ಬಗ್ಗೆ ಚಿಂತನೆ ನಡೆಸುವ ವೇದಿಕೆಯೂ ಇದಾಗಬೇಕು ಎಂದರು.

ಭಾರತದ ನೆಲದಲ್ಲಿ ನಿಂತು ಭಾರತೀಯತೆ ಬಗ್ಗೆ ಹೇಳುವ ಪರಿಸ್ಥಿತಿ ಬಂದಿರುವುದು ಆತಂಕ ಹುಟ್ಟಿಸುತ್ತದೆ. ಭಾರತವೇ ಬಹುರೂಪಿ. ಬಹುರೂಪಿ ಭಾರತವನ್ನು ನಮ್ಮ ಮನಸ್ಸಿಗೆ ತೆಗೆದುಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಉಪ ನಿರ್ದೇಶಕರಾದ ನಿರ್ಮಲ ಮಠಪತಿ, ರಂಗೋತ್ಸವದ ಸಂಚಾಲಕ ಜಗದೀಶ್ ಮನುವಾರ್ತೆ, ಜನಪದೋತ್ಸವದ ಸಂಚಾಲಕರಾದ ಗೀತ ಮೋಂಟಡ್ಕ ಹಾಜರಿದ್ದರು.

ಪೋಟೋಗಳು : ನವಿಲು ವೇಷಧಾರಿಯೊಬ್ಬರು ಸಭಿಕರೆಡೆಯಿಂದ ವೇದಿಕೆಗೆ ಬಂದು ಕುಣಿಯುವ ಮೂಲಕ ಬಹುರೂಪಿ ಜನಪದೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಡಾ.ಪಿ.ಕೆ.ರಾಜಶೇಖರ್, ಕೆರೆಮನೆ ಶಿವಾನಂದ ಹೆಗಡೆ ಇತರರು ಹಾಜರಿದ್ದರು.

 

andolanait

Recent Posts

ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನ: ಮುದ್ದಾದ ಮರಿಗೆ ಜನ್ಮ ನೀಡಿದ ನೀರಾನೆ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…

11 hours ago

‘ಬಿಡದಿ ಟೌನ್‌ಶಿಪ್ ವಿರುದ್ಧ ಕಾನೂನು ಹೋರಾಟ’: ಕೇಂದ್ರ ಬೃಹತ್ ಕೈಗಾರಿಕಾ ಖಾತೆ ಸಚಿವ ಎಚ್‌ಡಿಕೆ ಘೋಷಣೆ

ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…

11 hours ago

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ

ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…

12 hours ago

ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…

14 hours ago

ಓದುಗರ ಪತ್ರ: ‘ಮನೆಗೊಂದು ಗ್ರಂಥಾಲಯ’ ಯೋಜನೆ ಯಶಸ್ವಿಯಾಗಲಿ

‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…

17 hours ago

ಓದುಗರ ಪತ್ರ: ವಿದ್ಯಾರ್ಥಿ ಬಸ್ ಪಾಸ್ ದೂರ ಮಿತಿ ಹೆಚ್ಚಿಸಲಿ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…

17 hours ago