ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ ವೇಳೆ ಹೆಚ್ಚುವರಿ ಭೂಮಿ ವಶಕ್ಕೆ ಪರ್ಯಾಯ ಚಿಂತನೆ
ಮೈಸೂರು: ಹಲವು ವರ್ಷಗಳಿಂದ ಅವಳಿ ಜಿಲ್ಲೆಗಳ ಜನರು ಭಾರೀ ನಿರೀಕ್ಷೆಯೊಂದಿಗೆ ಕಾದಿದ್ದ ಮೈಸೂರು-ಚಾಮರಾಜನಗರ ನಡುವಿನ ವಿದ್ಯುತ್ ಚಾಲಿತ ರೈಲು ಸಂಚಾರ ಸದ್ಯಕ್ಕೆ ಆರಂಭವಾಗುವ ಲಕ್ಷಣಗಳಿಲ್ಲ.
ಮೈಸೂರು ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ಹಾದು ಹೋಗಿರುವ ರೈಲ್ವೆ ಹಳಿಯಲ್ಲಿ ಒಂದೂವರೆ ಕಿಲೋ ಮೀಟರ್ ವಿದ್ಯುತ್ ಲೇನ್ ಎಳೆಯಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅನುಮತಿ ಕೊಡದ ಕಾರಣ ವಿದ್ಯುತ್ ಚಾಲಿತ ರೈಲು ಸಂಚಾರ ವಿಳಂಬಕ್ಕೆ ಕಾರಣವಾಗಿದೆ. ಹೀಗಾಗಿ, ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ ಮಾಡಲು ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಹೆಚ್ಚುವರಿ ಭೂಮಿ ಪಡೆದುಕೊಂಡ ನಂತರ ಪರ್ಯಾಯ ಆಲೋಚನೆ ಮಾಡಲು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.
ಮೈಸೂರು-ಚಾಮರಾಜನಗರ ನಡುವೆ ಡಿಸೇಲ್ ಚಾಲಿತ ರೈಲುಗಳು ಸಂಚರಿಸುತ್ತಿದ್ದು, ಎಲೆಕ್ಟ್ರಿಕಲ್ ರೈಲುಗಳ ಓಡಾಟಕ್ಕೆ ಈಗಾಗಲೇ ವಿದ್ಯುತ್ ಲೇನ್ ಅಳವಡಿಸಲಾಗಿದೆ. ವಿದ್ಯುತ್ ಲೇನ್ ಅಲ್ಲದೆ ಎರಡು ಬದಿಗಳಲ್ಲಿ ಸಾರ್ವಜನಿಕರು, ದನಕರುಗಳು, ವಾಹನಗಳು ನುಗ್ಗದಂತೆ ತಡೆಗೋಡೆ ನಿರ್ಮಾಣ ಮಾಡಿಕೊಂಡು ಸಜ್ಜು ಮಾಡಲಾಗಿತ್ತು. ಆದರೆ, ಮೈಸೂರು ವಿಮಾನ ನಿಲ್ದಾಣ ಬಳಿ ಒಂದೂವರೆ ಕಿ.ಮೀ ನಷ್ಟು ವಿದ್ಯುತ್ ಲೇನ್ ಅಳವಡಿಸಲು ಪ್ರಾಧಿಕಾರವು ಒಪ್ಪಿಗೆ ಕೊಡದ ಕಾರಣ ಬಾಕಿ ಉಳಿದಿದೆ. ರನ್ ವೇ ವಿಸ್ತರಣೆ ಮಾಡಿದ ನಂತರ ವಿಮಾನ ಕೆಳಗಿಳಿಯುವಾಗ ಅಪಾಯ ಉಂಟಾಗುವ ಸಾಧ್ಯತೆಯಿದೆ ಎನ್ನುವ ವಿಚಾರವನ್ನು ಮುಂದಿಟ್ಟುಕೊಂಡು ಅನುಮತಿ ಕೊಡಲು ನಿರಾಕರಣೆ ಮಾಡಿದ್ದಾರೆ. ಹಾಗಾಗಿ ಈ ಸಮಸ್ಯೆ ಇತ್ಯರ್ಥವಾಗುವ ತನಕವೂ ಸಂಪೂರ್ಣ ಲೇನ್ ಎಳೆಯಲು ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.
ಒಂದು ವೇಳೆ ಎಲೆಕ್ಟ್ರಿಕಲ್ ರೈಲು ಓಡಾಡಬೇಕು ಅಂದರೆ ಮೈಸೂರಿನಿಂದ ಮಂಡಕಳ್ಳಿ, ಚಾಮರಾಜನಗರ ಕಡೆಯಿಂದ ಬರುವ ರೈಲು ಕಡಕೊಳ ಬಳಿ ಇಂಜಿನ್ ಬದಲಿಸಿ ಓಡಾಡಬೇಕಾಗಿದೆ. ಎರಡು ಕಡೆಗಳಿಂದಲೂ ಇಂಜಿನ್ ಬದಲಿಸುವುದಕ್ಕೆ ನಿಲುಗಡೆ ಮಾಡಬೇಕಿರುವ ಕಾರಣ ಅರ್ಧ ಗಂಟೆ ಸಮಯ ಬೇಕಾಗುವ ಕಾರಣ ಅಂತಹ ಸಾಹಸಕ್ಕೆ ಕೈ ಹಾಕದಿರಲು ತೀರ್ಮಾನಿಸಿದ್ದಾರೆ.
ಹೆಚ್ಚುವರಿ ಭೂಮಿ ಸ್ವಾಧೀನ: ರನ್ ವೇ ವಿಸ್ತರಣೆಗೆ ಅಗತ್ಯ ಇರುವ 247ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿರುವ ಕಾರಣ ಮತ್ತೆ ಹೆಚ್ಚುವರಿಯಾಗಿ 50 ಎಕರೆ ಸ್ವಾಧೀನ ಮಾಡಿಕೊಂಡರೆ ಪರ್ಯಾಯ ವ್ಯವಸ್ಥೆ ಮಾಡಬಹುದೆಂಬುದು ಅಧಿಕಾರಿಗಳ ಆಲೋಚನೆಯಾಗಿದೆ. ಈಗಾಗಲೇ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದಿಂದ ಕೆಐಎಡಿಬಿಗೆ ೧೦೦ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಹೆಚ್ಚುವರಿ ಭೂಮಿಗೆ 50 ಕೋಟಿ ರೂ. ಕೊಡುವಂತೆ ಮತ್ತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಒಂದೂವರೆ ಕಿ.ಮೀ.ನಷ್ಟು ವಿದ್ಯುತ್ ಲೇನ್ ಅಳವಡಿಸುವವರೆಗೆ ರೈಲು ಓಡಾಡಲು ಸಾಧ್ಯವಿಲ್ಲ. ಪರ್ಯಾಯ ವ್ಯವಸ್ಥೆ ಅಂದರೆ ಒಂದೂವರೆ ಕಿ.ಮೀ ಇಂಜಿನ್ ಬದಲಿಸುವಂತೆ ಅಥವಾ ಬೇರೆ ಏನಾದರೂ ಮಾಡಬಹುದೇ ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತಿಸಲಾಗುವುದು ಎಂದು ಹೇಳಿದ್ದಾರೆ.
ಮೈಸೂರು-ಚಾಮರಾಜನಗರ ನಡುವೆ ಎಲೆಕ್ಟ್ರಿಕಲ್ ರೈಲು ಸಂಚಾರಕ್ಕೆ ಒಂದೂವರೆ ಕಿ.ಮೀ.ನಷ್ಟು ಉಂಟಾಗಿರುವ ತೊಡಕು ನಿವಾರಣೆಯಾದರೆ ಸಂಪೂರ್ಣ ಮಾಡುತ್ತೇವೆ. ಪರ್ಯಾಯ ವ್ಯವಸ್ಥೆ ಬಗ್ಗೆ ಚರ್ಚೆ ಮಾಡುವವರೆಗೆ ಎಲೆಕ್ಟ್ರಿಕಲ್ ರೈಲು ಓಡಾಡುವುದಕ್ಕೆ ವಿಳಂಬವಾಗಲಿದೆ.
-ಪ್ರತಾಪ್ ಸಿಂಹ, ಸಂಸದರು.
ಬೆಳಗಾವಿ: ಸಿಎಂ ಆಯ್ಕೆ ಮಾಡುವ ವೇಳೆ ಯಾವುದೇ ಗಡುವು ಕೊಟ್ಟಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಸಿಎಂ ಬದಲಾವಣೆ…
ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಮೇಕೆದಾಟು ಸಮತೋಲಿತ ಜಲಾನಯನ ಯೋಜನೆ ತ್ವರಿತ ಅನುಷ್ಠಾನಕ್ಕೆ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ ನಿರ್ದೇಶಕರ…
ನವದೆಹಲಿ: ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ದೇಶದಲ್ಲಿರುವ ಪಾರಂಪರಿಕ ನಗರಗಳ ಅಭಿವೃದ್ಧಿಗೆ ಪೂರಕವಾದ ಕಾನೂನು ಚೌಕಟ್ಟು ರೂಪಿಸಲು ನಗರಾಭಿವೃದ್ಧಿ ಸಚಿವಾಲಯ…
ಬೆಳಗಾವಿ: ನನ್ನನ್ನು ಸಿಎಂ ಮಾಡುವುದಾದರೆ ಮಾತ್ರ ನಾನು ಬಿಜೆಪಿಗೆ ವಾಪಸ್ ಹೋಗುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…
ಬೆಂಗಳೂರು: ಗ್ಯಾರಂಟಿ ಯೋಜನೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ…
ಮೈಸೂರು: ಯೂನಿಟಿ ಮಾಲ್ ನಿರ್ಮಾಣಕ್ಕೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ…