ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?. ತಾಕತ್ ಇದ್ದರೆ ರಾಜೀನಾಮೆ ಕೊಟ್ಟು ಚುನಾವಣೆಗೆ ನಿಲ್ಲಲಿ ನೋಡೋಣ? ಎಂದು ಮಾಜಿ ಶಾಸಕ ಕೆ.ಸುರೇಶ್‌ಗೌಡ ಸವಾಲು ಹಾಕಿದರು.
ಮಂಡ್ಯದಿಂದ ಜಾ.ದಳ ಕಿತ್ತೊಗೆಯಿರಿ ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದ ಅವರು, ಜಾ.ದಳ ಓಡಿಸುವಂತೆ ಚಲುವರಾಯಸ್ವಾಮಿ ಕರೆ ಕೊಟ್ಟಿದ್ದಾರೆ, ದೇವರು ಒಳ್ಳೆಯದನ್ನು ಮಾಡಲಿ. ಜಾ.ದಳ ಪಕ್ಷ ಅವರು ಬೆಳೆದು ಹೋಗಿರುವ ಪಕ್ಷ. ಇಂಥವರನ್ನು ನೋಡಿಯೇ ಕೆಲವು ಗಾದೆಗಳನ್ನು ಹಿರಿಯರು ಮಾಡಿದ್ದಾರೆ. ನಾನು ಕಾಂಗ್ರೆಸ್‌ನಲ್ಲಿದ್ದೆ, ಯಾವತ್ತೂ ಆ ಪಕ್ಷವನ್ನು ಬೈದಿಲ್ಲ. ಆ ಪಕ್ಷದಲ್ಲಿನ ನಾಯಕರ ನಡವಳಿಕೆ ವಿರುದ್ಧ ಮಾತ್ರ ಬೈದಿದ್ದೇನೆ ಎಂದರು.
ಪಕ್ಷದಿಂದ ಬಂದು ಮಂತ್ರಿ ಆಗಿ ಆ ಪಕ್ಷವನ್ನೇ ಬೈದರೆ ಹೇಗೆ?. ಜಾ.ದಳ ಓಡಿಸುವುಕ್ಕೆ ನಿನಗೆ ತಾಕತ್ ಇದ್ಯಾ? ಈಗ ರಾಜೀನಾಮೆ ಕೊಟ್ಟು ಚುನಾವಣೆಗೆ ನಿಲ್ಲಿ ನೋಡೋಣ?. ಮಂತ್ರಿ ಸ್ಥಾನ, ದುಡ್ಡು, ಸರ್ಕಾರ ಇದೆ. ಚುನಾವಣೆ ಮಾಡೋಣ. 2028ಕ್ಕೆ ಚುನಾವಣೆಯಲ್ಲಿ ತೋರಿಸುತ್ತೇವೆ. ಜಾ.ದಳ ಇರುತ್ತಾ?, ಕಾಂಗ್ರೆಸ್ ಇರುತ್ತಾ ನೋಡೋಣಾ?. ಇಂಥವರಿಂದಲೇ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತಿದೆ ಎಂದು ಕಿಡಿಕಾರಿದರು.
ಲೂಟಿಕೋರರಿಂದ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ಮುಳುಗುತ್ತಿದೆ. ಸಚಿವರಿಗೆ ಅಧಿಕಾರದ ಅಮಲು ಎರಡೂ ಕಣ್ಣು ನೆತ್ತಿಮೇಲೆ ಹೋಗಿದೆ. ಮಗನ ಪ್ರೋಮೊಷನ್‌ಗೆ ಅಧಿಕಾರಿಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜನರು 2028ಕ್ಕೆ ಜಾ.ದಳ ಇರಬೇಕಾ? ಕಾಂಗ್ರೆಸ್ ಇರಬೇಕಾ ಎನ್ನುವ ತೀರ್ಮಾನ ತೆಗೆದುಕೊಳ್ಳುತ್ತಾರೆ. ಮಾತನಾಡಬೇಕಾದರೆ ಎಚ್ಚರಿಕೆ ಇರಲಿ. ಹಣ, ಅಧಿಕಾರದ ಅಹಂಕಾರದಲ್ಲಿ ಹೆತ್ತ ತಾಯಿಗೆ, ಉಂಡ ಮನೆಗೆ ದ್ರೋಹ ಮಾಡಬಾರದು. ಜನ ಕೊಟ್ಟ ಅಧಿಕಾರವನ್ನು ಮಾರಿಕೊಂಡು ಬೇರೆ ಪಕ್ಷಕ್ಕೆ ಹೋದರೂ ಬುದ್ಧಿ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಮಾರ್ಚ್.18ರಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭವಾಗಲಿವೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಮತ್ತು ಪಾರದರ್ಶಕತೆ ಕಾಪಾಡಲು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ…
ಜೆರುಸೇಲಂ: ನಾನಿನ್ನೂ ಬದುಕಿದ್ದೇನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಸಾವಿನ ವದಂತಿಗಳ ನಡುವೆ ವಿಡಿಯೋದಲ್ಲಿ ಕಾಣಿಸಿಕೊಂಡು ಸಂದೇಶ…
ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧಕ್ಕಿಂತಲ್ಲೂ ಹೆಚ್ಚು ಸದ್ದು ಮಾಡುತ್ತಿರುವುದು ಭಾರತದಲ್ಲಿನ ಎಲ್‌ಪಿಜಿ ಪೂರೈಕೆ ವಿಚಾರ. ಯುದ್ಧೋನ್ಮಾದ ವೈರತ್ವ ಹೊಂದಿರುವ…
ಶುಭಾ ಖಟಾವಕರ ಮ್ಹೆತ್ರಸ್ ಬಲಾಢ್ಯ ರಾಷ್ಟ್ರಗಳಾದ ಅಮೆರಿಕ -ಇಸ್ರೇಲ್, ಇರಾನ್ ಮೇಲೆ ದಾಳಿ ಶುರು ಮಾಡಿ ೧೩-೧೪ ದಿನಗಳೇ ಕಳೆದು…
ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಕಚ್ಚಾಟ ನಿರ್ಣಾಯಕ ಘಟ್ಟಕ್ಕೆ ತಲುಪಿದಂತೆ ಕಾಣುತ್ತಿದೆ. ಕಾರಣ ಅಧಿಕಾರ ಹಂಚಿಕೆಯ ಮಾತು ಉಳಿದುಕೊಂಡಿದೆ…
ನವೀನ್ ಡಿಸೋಜ ದೀರ್ಘಕಾಲದ ಬೇಡಿಕೆಗೆ ಸರ್ಕಾರದ ಸ್ಪಂದನೆ; ಕೊಡವರ ಶ್ರೇಯೋಭಿವೃದ್ಧಿಗೆ ಅನುಕೂಲ ಮಡಿಕೇರಿ:ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ…