ಮೇಲುಕೋಟೆ:ಮೇಲುಕೋಟೆ ಪ್ರಖ್ಯಾತ ವೈರಮುಡಿ ಬ್ರಹ್ಮೋತ್ಸವದ ವಿಶೇಷ ಉತ್ಸವಗಳಲ್ಲಿ ಚೆಲುವನಾರಾಯಣಸ್ವಾಮಿ ಅಲಂಕಾರಕ್ಕಾಗಿ 56 ಬಗೆಯ ವೈವಿಧ್ಯಮಯ ಪುರಾತನ ಆಭರಣಗಳನ್ನು ಸ್ಥಾನೀಕರು ಅರ್ಚಕರು, ಪರಿಚಾರಿಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಹಸ್ತಾಂತರಿಸಿದರು.
ಪಾಂಡವಪುರ ತಾಲ್ಲೂಕು ಖಜಾನೆಯಲ್ಲಿದ್ದ ತಿರುವಾಭರಣಪೆಟ್ಟಿಗೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ತಂದು ಪಾರ್ಕಾವಣೆಮಾಡಲಾಯಿತು. ಬಂಗಾರ, ಮುತ್ತು ಹಾಗೂ ವಜ್ರಖಚಿತ ಆಭರಣಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಚೆಲುವನಾರಾಯಣಸ್ವಾಮಿಯ ಅಲಂಕಾರಕ್ಕಾಗಿ ನೀಡಲಾಯಿತು.
ಶಂಖ, ಚಕ್ರ, ಗದಾಂಗಿ ಕಿರೀಟ ಬಂಗಾರದ ಬಟ್ಟಲು ಮುತ್ತುಮುಡಿ, ಮುತ್ತಿನ ಸರಗಳು ಕೋರಂಬ ಹೀಗೆ 56 ವೈವಿಧ್ಯಮಯ ಆಭರಣಗಳನ್ನು ಒಂದೊಂದಾಗಿ ಪರಿಶೀಲಿಸಿ ದಾಖಲಿಸಿದ ನಂತರ ದೇವಾಲಯದ ಕೈಂಕರ್ಯಪರಿಗೆ ಹಸ್ತಾಂತರ ಮಾಡಲಾಯಿತು.
ಈ ವೇಳೆ ಸ್ಥಾನೀಕರಾದ ಕರಗಂ ನಾರಾಯಣ ಅಯ್ಯಂಗಾರ್, ಸ್ಥಾನೀಕಂ ಶ್ರೀನಿವಾಸನರಸಿಂಹನ್ ಗುರೂಜಿ, ಸಜ್ಜೆಹಟ್ಟಿ ತಿರುನಾರಾಯಣ ಅಯ್ಯಂಗಾರ್, ಸ್ಥಾನೀಕಂ ಸಂಪತ್ಕುಮಾರನ್, ಸ್ಥಾನೀಕಂ ಶ್ರೀರಾಮನ್, ಪರಿಚಾರಕ ಪಾರ್ಥಸಾರಥಿ, ಅರ್ಚಕ ವರದರಾಜಭಟ್, ಪರಕಾಲಮಠದ ಪ್ರತಿನಿಧಿ ನರಸಿಂಹರಂಗನ್, ಅಕೌಂಟೆಂಟ್ ಹೇಮಂತಕುಮಾರ್, ಪ್ರಥಮದರ್ಜೆ ಸಹಾಯಕ ಪ್ರಕಾಶ್ ಪಾರ್ಕಾವಣೆಯಲ್ಲಿ ಭಾಗವಹಿಸಿದ್ದರು.
ಈ ಅಮೂಲ್ಯ ಪುರಾತನ ಆಭರಣಗಳು ಯುಗಾದಿ ಹಬ್ಬದಿಂದಲೇ ಚೆಲುವನಾರಾಯಣನನ್ನು ಅಲಂಕರಿಸಲಿವೆ. ಮಾರ್ಚ 24ರಂದು ರಾತ್ರಿ ನಡೆಯುವ ಪ್ರಥಮ ತೆಪ್ಪೋತ್ಸವದಂದು ಮುತ್ತುಮುಡಿ ಅಲಂಕಾರದೊಂದಿಗೆ ಈ ಎಲ್ಲಾ ಆಭರಣಗಳನ್ನು ಧರಿಸಲಾಗುತ್ತದೆ.
ಇದರ ಜೊತೆಗೆ ವೈರಮುಡಿಯಂದು ಜಿಲ್ಲಾ ಖಜಾನೆಯಿಂದ ಬರುವ ವೈರಮುಡಿ-ರಾಜಮುಡಿ ಹಾಗೂ 16 ಬಗೆಯ ವಜ್ರಖಚಿತ ಆಭರಣಗಳೂ ಸಹ ಚೆಲುನಾರಾಯಣನನ್ನು ಬ್ರಹ್ಮೋತ್ಸವದಲ್ಲಿ ಅಲಂಕರಿಸಲಿದೆ. ವೈರಮುಡಿ ಕಿರೀಟಮಾತ್ರ ಒಂದು ರಾತ್ರಿ ಚೆಲುವನಾರಾಯಣನ್ನು ಅಲಂಕರಿಸಿದರೆ ಉಳಿದ ಆಭರಣಗಳು ಬ್ರಹ್ಮೋತ್ಸವ ಪೂರ್ತ ಸ್ವಾಮಿಯನ್ನು ಅಲಂಕರಿಸಿರುತ್ತವೆ.
ಈ ವೇಳೆ ಮಾಹಿತಿ ನೀಡಿದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಭಾರತದ ಅತ್ಯಂತ ಪುರಾತನ ಹಾಗೂ ಧಾರ್ಮಿಕ ವಿಶೇಷವಾದ ವೈರಮುಡಿ ಜಾತ್ರಾಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಬ್ರಹ್ಮೋತ್ಸವದ ಎಲ್ಲಾ ಉತ್ಸವಗಳನ್ನೂ ವೈಭವಯುತವಾಗಿ ನಡೆಸಲು ಶ್ರಮಿಸಲಾಗುತ್ತದೆ ಉತ್ಸವದಲ್ಲಿ ಸೇವೆಮಾಡುವ ಭಾಗ್ಯ ನಮಗೆ ದೊರೆತಿರುವುದೇ ದೊಡ್ಡಭಾಗ್ಯ ಎಂದೇ ಭಾವಿಸಿ ಭಕ್ತಸ್ನೇಹಿಯಾಗಿ ವ್ಯವಸ್ಥೆಮಾಡಲಾಗುತ್ತಿದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚೆಲುವನಾರಾಯಣಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದರು.
ಮಂಡ್ಯ: ನಾಗಮಂಗಲ ತಾಲೂಕು ಯರಗಟ್ಟಿ ಗೇಟ್ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಸ್ಕಾರ್ಪಿಯೋ ಕಾರಿನಲ್ಲಿ ಮೃತಪಟ್ಟಿರುವ ಹತ್ತಕ್ಕೂ ಹೆಚ್ಚು ಕರುಗಳು…
ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…
ಮೈಸೂರು : ಎನ್ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…
ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…
ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…