ಚಾಮರಾಜನಗರ : ಆನೆ ದಾಳಿ ಮಾಡುತ್ತದೆ ಎಂಬ ಭಯದಲ್ಲಿ ಬೈಕ್ ಸವಾರ ರಸ್ತೆ ಪಕ್ಕದ ಕಾಲುವೆಗೆ ಬಿದ್ದಿರುವ ಘಟನೆ ಚಾಮರಾಜನಗರ ಗಡಿ ಭಾಗವಾದ ತಮಿಳುನಾಡಿನ ತಲೆಮಲೈಯಲ್ಲಿ ನಡೆದಿದೆ.
ನೈನಿತಾಳಪುರಂ ಗ್ರಾಮದರಾಮಸ್ವಾಮಿ ಎಂಬವರು ಕಾಲುವೆಗೆ ಬಿದ್ದಿರುವ ಬೈಕ್ ಸವಾರ, ರಸ್ತೆ ಮಧ್ಯೆ ಬಂದು ನಿಂತ ಆನೆಯನ್ನು ಗಮನಿಸಿದ ರಾಮಸ್ವಾಮಿ ದಿಢೀರ್ ಬಂದಿದ್ದಾರೆ.
ಆನೆ ನೋಡುತ್ತಿದ್ದಂತೆ ಗಾಬರಿಗೊಂಡು ಆಯತಪ್ಪಿ ಬಿದ್ದಿದ್ದು, ಬಳಿಕ ಇನ್ನಿತರ ಸವಾರರ ಸಮಯ ಪ್ರಜ್ಞೆಯಿಂದ ಆನೆ ತಿರುಗುವ ಮುನ್ನಇತ್ತಕಡೆ ಬಂದಿದ್ದಾರೆ.
ಈ ಘಟನೆ ಸೋಮವಾರ ಸಂಜೆ ನಡೆದಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಚಾಮರಾಜನಗರ ಗಡಿಭಾಗದಲ್ಲಿ ಆನೆಗಳು ಹೆಚ್ಚಾಗಿ ಕಾಣಿಸಿಕೊಳ್ಳಯತ್ತಿವೆ. ಆದರೆ ಈವರೆಗೆ ಪ್ರಾಣಹಾನಿಯ ಬಗ್ಗೆ ವರದಿಗಳಾಗಿಲ್ಲ. ಇತ್ತೀಚೆಗೆ ತಮಿಳುನಾಡಿನ ತಲೆಮಲೈಯಲ್ಲಿ ರೈಲು ಹಳಿ ದಾಟುವ ವೇಳೆ ಆನೆ ಕೂದಲೆಳೆ ಅಂತರದಲ್ಲಿ ಪಾರಾಗಿರುವುದುಕಂಡು ಬಂದಿತ್ತು.
ಕೃಷಿಗೆ ಹಾನಿ ಮಾಡುತ್ತಿದ್ದ ಆನೆಯನ್ನು ತೋಟದಿಂದ ಓಡಿಸಲಾಗುತ್ತಿತ್ತು. ಆಗ ಆನೆ ಹಳಿ ಮೇಲೆ ನಿಂತಿತ್ತು. ರೈಲು ಬರುತ್ತಿರುವುದನ್ನು ಗಮನಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣವೇ ಆನೆಯನ್ನು ಓಡಿಸಿ ಉಳಿಸಿದ್ದರು.
ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…
ಮೇಘನ ಕೆ.ಆರ್ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…
ಡಾ. ಶಿಲಿನಾ ಕೋಟೆ ಎನ್. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…
ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…
ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…
ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…