ಮಳವಳ್ಳಿ : ತಾಲೂಕಿನ ಕಿರುಗಾವಲು ಸಮೀಪ ಅಕ್ಕಿ ತುಂಬಿದ ಲಾರಿ ಒಂದು ಪಲ್ಟಿ ಹೊಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಿಗ್ಗೆ ಜರುಗಿದೆ.
ಕಿರುಗಾವಲಿನ ರೈಸ್ ಮಿಲ್ ನಿಂದ ಅಕ್ಕಿ ತುಂಬಿಕೊಂಡು ಬನ್ನೂರಿಗೆ ತೆರಳುತ್ತಿದ್ದ ಮಿನಿ ಲಾರಿ ಕೊದೆನು ಕೊಪ್ಪಲು ನಡು ಮಾರ್ಗದಲ್ಲಿ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಕೂಲಿಕಾರರು ಸಾವನ್ನಪ್ಪಿದ್ದಾರೆ.
ಬನ್ನೂರಿನ ವಾಸಿಂ 25 ವರ್ಷ ಸನಿಯಾ 24 ವರ್ಷ ಮೃತಪಟ್ಟ ಕೂಲಿಕಾರರಾಗಿದ್ದಾರೆ. ಕಿರುಗಾವಲು ಬಾಸ್ ರೈಸ್ ಮಿಲ್ ನಿಂದ ಅಕ್ಕಿ ತುಂಬಿಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ.
ಲಾರಿ ತುಂಬಿಕೊಂಡು ಹೋಗುತ್ತಿದ್ದ ಪಡಿತರ ಚೀಟಿಯ ಅಕ್ಕಿಯೋ ಅಥವಾ ರೈತರಿಂದ ಖರೀದಿಸಿದ ಭತ್ತದ ಅಕ್ಕಿಯೋ ಎಂಬುದು ಎಂಬುದು ಪೊಲೀಸ್ ತನಿಖೆ ಇಂದ ತಿಳಿಯಬೇಕಿದೆ.
ಈ ಸಂಬಂಧ ಕಿರುಗಾವಲು ಸಬ್ ಇನ್ಸ್ಪೆಕ್ಟರ್ ರವಿಕುಮಾರ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನವದೆಹಲಿ: ಸೇನಾ ದಿನದ ಅಂಗವಾಗಿ ಇಂದು ಭಾರತೀಯ ಸೇನೆಯು ಹೊಸ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಳೆದ ವರ್ಷ ನಡೆದ…
ಜನನಾಯಗನ್ ಚಿತ್ರವನ್ನು ಮುಂದೂಡಿದ್ದಕ್ಕೆ ಸಂಬಂಧಿಸಿದಂತೆ ಸಿಬಿಎಫ್ಸಿ ಅನುಮತಿ ಕೋರಿ ಕೆವಿಎನ್ ಪ್ರೊಡಕ್ಷನ್ಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಸೆನ್ಸಾರ್…
ರಾಮನಗರ: ಪ್ರೀತಿ ಹೆಸರಿನಲ್ಲಿ ಯುವತಿಯೊಂದಿಗೆ ದೈಹಿಕ ಸಂಪರ್ಕ ನಡೆಸಿ ಯುವಕನೊಬ್ಬ ಕೈಕೊಟ್ಟಿದ್ದು, ಮನನೊಂದ ಯುವತಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ…
ಬೆಂಗಳೂರು: ರಾಜ್ಯದಲ್ಲಿ ದಲಿತ ಸಿಎಂ ಆಗದಿರುವುದರ ಬಗ್ಗೆ ನಮಗೆ ನೋವಿದೆ. ಹೈಕಮಾಂಡ್ ಮನಸ್ಸು ಮಾಡಿದರೆ ಎಲ್ಲಾ ಆಗುತ್ತದೆ ಎಂದು ಸಚಿವ…
ಮೈಸೂರು: ರಾಜ್ಯ ರಾಜಕಾರಣಕ್ಕೆ ಬರುವ ಸುಳಿವು ನೀಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್…
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಳಿಯ ಅಬ್ಬರ ತಗ್ಗಿದೆಯಾದರೂ ಮೋಡ ಕವಿದ ವಾತಾವರಣವಿರಲಿದೆ. ರಾಜ್ಯದಲ್ಲಿ ಒಂದು…