ಮಂಡ್ಯ

ಅಂದು ಸ್ಟಾರ್ ಬಾಲನಟಿ ಇಂದು ಐಎಎಸ್ ಅಧಿಕಾರಿ

ಅಂದು ಸ್ಟಾರ್ ಬಾಲನಟಿ ಇಂದು ಐಎಎಸ್ ಅಧಿಕಾರಿ

ಮಂಡ್ಯದ ಉಪವಿಭಾಗಾಧಿಕಾರಿ ಎಚ್.ಎಸ್.ಕೀರ್ತನಾ ಸಾಧನೆ

ಮಂಡ್ಯ: 4ನೇ ವಯಸ್ಸಿನಿಂದಲೇ ಸ್ಟಾರ್ ಬಾಲನಟಿಯಾಗಿ ಸಿನಿಮಾರಂಗದಲ್ಲಿ ಮಿಂಚಿದ ಎಚ್.ಎಸ್.ಕೀರ್ತನಾ ಇಂದು ಐ ಎ ಎಸ್ ಅಧಿಕಾರಿಯಾಗಿ ಮಂಡ್ಯದ ಉಪವಿಭಾಗಾಧಿಕಾರಿಗಳಾಗಿ ಅಧಿಕಾರ ನಡೆಸಿರುವುದು ಯುವಜನರಿಗೆ ಹೆಮ್ಮೆಯ ಸಂಗತಿ. ಸ್ಫೂರ್ತಿಯ ಚಿಲುಮೆಯಂತೆ ಚಿತ್ರರಂಗದ ಬಾಲನಟಿಯಾಗಿ ನಟಿಸಿದ್ದ ಎಚ್.ಎಸ್.ಕೀರ್ತನಾ ಅವರು ದೊರೆ, ಗಂಗಾ ಯಮುನಾ, ಕರ್ಪೂರದ ಗೊಂಬೆ, ಮುದ್ದಿನ ಅಳಿಯ, ಉಪೇಂದ್ರ, ಎ, ಹಬ್ಬ,  ಲೇಡಿ ಕಮಿಷನರ್, ಸರ್ಕಲ್ ಇನ್‌ಸ್ಪೆಕ್ಟರ್ ಸೇರಿದಂತೆ ವಿಷ್ಣುವರ್ಧನ್, ಶಿವರಾಜ್‌ಕುವಾರ್, ಅಂಬರೀಶ್, ರಮೇಶ್, ಶಶಿಕುವಾರ್, ದೊಡ್ಡಣ್ಣ ಸೇರಿದಂತೆ ಎಲ್ಲ ಸ್ಟಾರ್ ನಟರೊಂದಿಗೆ ಸುವಾರು 32 ಚಿತ್ರಗಳಲ್ಲಿ ನಟಿಸಿದ್ದಾರೆ. ಮಾತ್ರವಲ್ಲ ಚಿಗುರು, ಜನನಿ, ಪುಟಾಣಿ ಏಜೆಂಟ್ ಸೇರಿದಂತೆ 48 ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಅತ್ಯುತ್ತಮ ಬಾಲನಟಿ ಪ್ರಶಸ್ತಿಯೊಂದಿಗೆ  2004 ರಲ್ಲಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದಿದ್ದ ಕೀರ್ತನಾ 2020 ರಲ್ಲಿ ಯೂನಿಯನ್‌ ಪಬ್ಲಿಕ್ ಸರ್ವಿಸ್ ಕಮಿಷನ್(ಯುಪಿಎಸ್‌ಸಿ) ಪರೀಕ್ಷೆಯಲ್ಲಿ   ಸರ್ಕಾರದ ಪ್ರಮುಖ ಹುದ್ದೆಗೇರಿದರು.

ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸಿ, ಬಳಿಕ ತಹಸಿಲ್ದಾರರಾಗಿಯೂ ಸೇವೆ ಆರಂಭಿಸಿದ ಕೀರ್ತನಾ ಅವರು ಇಂದು ಮಡಿವಾಳ ಜನಾಂಗದಲ್ಲಿ ನೇರವಾಗಿ ಐಎಎಸ್ ಅಧಿಕಾರಿಯಾಗಿರುವುದು ಮಾದರಿಯಾದದ್ದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಟ ನಿರ್ದೇಶಕ ಗಿರೀಶ್ ಕಾರ್ನಾಡ್ ಹಾಗೂ ಜಿ.ವಿ.ಐಯ್ಯರ್‌  ಅವರೊಂದಿಗೆ ಸಿನಿ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಗಳಿಸಿದ್ದು, ಒಂದು ಮರೆಯಲಾರದ ಅನುಭವವೂ ಹೌದು ಎನ್ನುವ ಕೀರ್ತನಾ ಹಿಂದುಳಿದ ವರ್ಗಗಳಿಗೆ ಸೇರಿದ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಓರ್ವ ಹೆಣ್ಣಾಗಿ ನನ್ನಲ್ಲಿ ಒಂದಷ್ಟು ಗುರಿ ಹಾಗೂ ಉದ್ದೇಶಗಳಿವೆ. ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಅರ್ಹ ಬಡಜನರಿಗೆ ತಲುಪಿಸುವುದು, ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುವುದು ಹಾಗೂ ಕೌಶಲ್ಯಾಭಿವೃದ್ಧಿ, ಮಕ್ಕಳ ಅಭಿವೃದ್ಧಿಗೆ ಆದ್ಯ ಗಮನ ನೀಡುವುದು ನನ್ನ ಆದ್ಯತೆಗಳಾಗಿವೆ. ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳಲ್ಲೂ ಕೆಲಸ ಮಾಡುವ ಉತ್ಸಾಹವಿದೆ ಎನ್ನುತ್ತಾರೆ ಎಚ್.ಎಸ್.ಕೀರ್ತನಾ.

ನನ್ನದು 6ನೇ ಪ್ರಯತ್ನ

ಮೊದಲಿಂದಲೂ ನನ್ನ ಸಾಮರ್ಥ್ಯದ ಬಗ್ಗೆ ನನ್ನಲ್ಲಿ ವಿಶ್ವಾಸವಿತ್ತು. ನಾನು ಚಿತ್ರರಂಗದಲ್ಲಿ ಬಾಲನಟಿಯಾಗಿ ರಾಜ್ಯದ ಜನರ ಪ್ರೀತಿಯನ್ನು ಗಳಿಸಿದ್ದೆ. ಆದರೆ ಸಹಜವಾಗಿ ನಮ್ಮ ತಂದೆ ಶ್ರೀನಿವಾಸ್ ಅವರು ಇನ್ನು ಚಿತ್ರರಂಗ ಸಾಕು, ಓದಿನತ್ತ ಮುಖ ಮಾಡು ಏನಾದರೂ ಸಾಧನೆ ಮಾಡು ಎಂದು ಪ್ರೋತ್ಸಾಹಿಸಿದರು. ಅದರಂತೆ ನಿರಂತರ ಶ್ರಮ ಹಾಕಿದೆ. ಅದರ ಫಲವೇ ಇಂದು ಐಎಎಸ್ ಅಧಿಕಾರಿಯಾಗಿದ್ದೇನೆ. ನನಗೆ ಸಿಕ್ಕಿರುವ ಈ ಹುದ್ದೆಯನ್ನು ಶ್ರೀಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಲು ಹಾಗೂ ಕರ್ತವ್ಯದಲ್ಲಿ ಲೋಪಬಾರದ ರೀತಿ ಕಾರ್ಯನಿರ್ವಹಿಸುವುದು ನನ್ನ ಆದ್ಯತೆಯಾಗಿದೆ.

 

-ಎಚ್.ಎಸ್.ಕೀರ್ತನಾ, ಉಪ ವಿಭಾಗಾಧಿಕಾರಿಗಳು, ಮಂಡ್ಯ

andolana

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

3 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

3 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

9 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

9 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

9 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

10 hours ago