ಮಂಡ್ಯ: ಲಿಂಗಾಯತ ಧರ್ಮದ ಬಗ್ಗೆ ಹಾಗೂ ಹಿರಿಯ ಸಾಹಿತಿ ಗೋ.ರು.ಚನ್ನಬಸಪ್ಪ ಅವರ ವಿರುದ್ಧ ಅವಹೇಳನವಾಗಿ ಮಾತನಾಡಿದ ರಂಭಾಪುರ ಕೇಂದಾರನಾಥ್ ಶ್ರೀ ಕೂಡಲೇ ಕ್ಷಮೆಯಾಚಿಸಬೇಕು ಎಂದು ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ವಚನದರ್ಶನ ಮಿತ್ರ ಸತ್ಯ ಎಂಬ ಗ್ರಂಥ ಬಿಡುಗಡೆಯ ವೇಳೆ ವೀರಶೈವ ಪದ ಬಳಕೆಯ ಬದಲಾಗಿ ಲಿಂಗಾಯತ ಪದ ಬಳಸುವಂತೆ ಹೇಳಿದಾಗ ಈ ರೀತಿಯ ಅನುಚಿತ ವರ್ತನೆ ತೋರಿದ್ದಾರೆ ಎಂದು ಕಿಡಿ ಕಾರಿದರು.
ಬಸವಣ್ಣರನ್ನು ವಿಶ್ವಗುರು ಎಂದು ಇಡೀ ವಿಶ್ವವೇ ಒಪ್ಪಿದೆ ರಾಜ್ಯ ಸರ್ಕಾರವೂ ಇಲ್ಲಾ ಇಲಾಖೆಗಳ ಕಛೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸುವಂತೆ ಸೂಚಿಸಿದೆ. ರಂಭಾಪುರ ಕೇಂದಾರನಾಥ್ ಶ್ರೀ ಬಸವ ಜಯಂತಿ ಆಚರಿಸದೇ, ಬಸವಣ್ಣನವರ ಭಾವಚಿತ್ರ ಅಳವಡಿಸದೇ ಧರ್ಮದ್ರೋಹ ಕೆಲಸ ಮಾಡುತ್ತಿದ್ದಾರೆ ಎಂದು ದೂಡಿದರು.
ಹಿರಿಯ ಸಾತಿಗಳ ವಿರುದ್ಧ ಅವಹೇಳನವಾಗಿ ಮಾತನಾಡಿರುವುದಲ್ಲದೇ ಲಿಂಗಾಯತ ಧರ್ಮ ಒಂದು ಧರ್ಮವೇ ಅಲ್ಲ ಎಂಬ ಅವಿವೇಕತನದ ಮಾತುಗಳನ್ನು ಆಡಿದ್ದಾರೆ.
ಪುರಾಣವನ್ನೇ ಇತಿಹಾಸ ಎಂದು ಅವರು ತಿಳಿದಿದ್ದು, ಬಸವಣ್ಣನವರ ವಚನಗಳು, ತತ್ವಗಳನ್ನು ತಿಳಿದು ಲಿಂಗಾಯತ ಧರ್ಮವನ್ನು ಸೇರಿಕೊಳ್ಳಿ. ಇಲ್ಲವಾದಲ್ಲಿ ಜನರಲ್ಲಿ ಗೊಂದಲ ಸೃಷ್ಠಿಸುವುದನ್ನು ಬಿಟ್ಟು, ಪಾಡಿಗೆ ನೀವು ಇದ್ದುಬಿಡಿ ಎಂದು ತಾಕೀತು ಮಾಡಿದರು.
ಗೋಷ್ಠಿಯಲ್ಲಿ ಕಲ್ಯಾಣ ಬಸವೇಶ್ವರ ಮಠದ ಓಂಕಾರಶ್ರೀ, ಶಿವಲಿಂಗಪ್ಪ, ಬೆಳಪ್ಪ, ಎಲ್.ಡಿ.ನಂದೀಶ್ ಇದ್ದರು.
ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…
ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…
ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…
ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…
ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…
ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…