ಮಂಡ್ಯ

ನಾಗಮಂಗಲ | ಸಂಕ್ರಾಂತಿ ಸಂಭ್ರಮ ಕಳೆಗಟ್ಟಿದ ಅಲಂಕೃತ ಎತ್ತಿನಗಾಡಿ ಮೆರವಣಿಗೆ

ಮಂಡ್ಯ: ಈ ಬಾರಿ ರೈತರ ಮೊಗದಲ್ಲಿ ಸಂತೋಷ ತುಂಬುವ ಸಂಕ್ರಾಂತಿ ಹಬ್ಬವನ್ನು‌ ವಿಶೇಷವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವಲಾಪುರದಲ್ಲಿ ಆಚರಿಸಲಾಯಿತು.

ಸುಗ್ಗಿ ಹಬ್ಬದ ಮೆರವಣಿಗೆಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಚಾಲನೆ ನೀಡಿದರು. ರೈತರ ಈ ಹಬ್ಬದಲ್ಲಿ ಮುಖ್ಯ ಆಕರ್ಷಣೆ ಎತ್ತಿನಗಾಡಿ ಮೆರವಣಿಗೆ ‌‌ ಎತ್ತುಗಳನ್ನು ಹೂವುಗಳಿಂದ ಹಾಗೂ ಎತ್ತಿನಗಾಡಿಯನ್ನು ಬಾಳೆ ಕಂಬ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ಎತ್ತಿನಗಾಡಿಯ ಮುಂಭಾಗದಲ್ಲಿ ಪಟಕುಣಿತ, ಸೋಮನ ಕುಣಿತ, ಡೊಳ್ಳು ಕುಣಿತ, ಕೊಂಬು ಕಹಳೆ, ರಂಗನ ಕುಣಿತ, ಪೂಜಾ ಕುಣಿತ ವೀರಗಾಸೆ ಸೇರಿದಂತೆ ಪೂರ್ಣ ಕುಂಭ ಹೊತ್ತ ಮಹಿಳೆಯರು ವಿಶೇಷ ಮೆರಗು ನೀಡಿದರು.

ಇದೇ ಸಂದರ್ಭದಲ್ಲಿ ದೇವಲಪುರ ಕೆರೆಗೆ ಸಚಿವರು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು‌. ಸಚಿವರು ಎತ್ತಿನಗಾಡಿ ಏರಿ ಚಾಟಿ ಹಿಡಿದಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಸಚಿವರು ರಾಶಿ ಪೂಜೆ, ಕಡಲೆಕಾಯಿ, ಅವರೆಕಾಯಿ, ಬೆಲ್ಲದ ಪರಿಷೆ, ಗ್ರಾಮೀಣ ಕ್ರೀಡಾ ಸ್ಪರ್ಧೆಗಳಾದ ಹಗ್ಗ- ಜಗ್ಗಾಟ ಹಾಗೂ ಕಬ್ಬಡಿಯಲ್ಲಿ ಸ್ಪರ್ಧಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಗಮನ ಸೆಳೆದ ವಸ್ತು ಪ್ರದರ್ಶನ‌ ಮಳಿಗೆಗಳು ರೈತರಿಗೆ ಮಾಹಿತಿ ಮೀಡಲು ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಪದ್ಧತಿ ಹಾಗೂ ರಾಗಿ ಬೆಳೆಯ ಪಾರಂಪರಿಕ ಹಾಗೂ ಆಧುನಿಕ ಪದ್ಧತಿಗಳು, ತೋಟಗಾರಿಕೆ ಇಲಾಖೆಯಿಂದ ಹಣ್ಣು ಹಾಗೂ ತರಕಾರಿ ಮೇಲಿನ ಆಕರ್ಷಕ ಕೆತ್ತನೆಗಳು, ರೇಷ್ಮೆ, ಮೀನುಗಾರಿಕೆ, ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸರ್ಕಾರದ ಯೋಜನೆಗಳ ಕುರಿತು ವಿಷಯಗಳನ್ನು ಪ್ರದರ್ಶಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ನ್ಯಾಯಯುತ ತನಿಖೆಗೆ ಬಿಜೆಪಿ ಆಗ್ರಹ

ಬೆಂಗಳೂರು: ಇಲ್ಲಿನ ಚಾಮರಾಜಪೇಟೆಯಲ್ಲಿ ನಡೆದ ಮೂರು ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ವ್ಯಕ್ತಿಯು ಅಮಾಯಕ ಹಾಗೂ…

1 hour ago

ಜೈಲಿನಿಂದ ಬಿಡುಗಡೆಯಾದ ಬಳಿಕ ನಟ ದರ್ಶನ್‌ ಮೊದಲ ಮಾತು

ಬೆಂಗಳೂರು: ಜೈಲಿನಿಂದ ಬಿಡುಗಡೆಯಾದ ಬಳಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಮೊದಲ ಬಾರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಮೈಸೂರಿನ…

2 hours ago

ಗಾಜಾ ಪಟ್ಟಿಯಲ್ಲಿ ಮುಂದುವರಿದ ಕದನ: ವಾಯುದಾಳಿಯಲ್ಲಿ 30 ಮಂದಿ ಸಾವು

ಜೆರುಸೇಲಂ: ಗಾಜಾ ಪಟ್ಟಿಯಲ್ಲಿ ಕದನ ಮುಂದುವರಿದಿದ್ದು, ಮಂಗಳವಾರ ಇಸ್ರೆಲ್‌ ಸೇನೆ ನಡೆಸಿದ ಪ್ರತ್ಯೇಕ ವಾಯುದಾಳಿಯಲ್ಲಿ ಮಕ್ಕಳು ಸೇರಿದಂತೆ 30 ಮಂದಿ…

2 hours ago

ಡ್ರಗ್ಸ್‌ ಕೇಸ್:‌ ನಟಿ ರಾಗಿಣಿಗೆ ಬಿಗ್‌ ರಿಲೀಫ್‌ ಕೊಟ್ಟ ಹೈಕೋರ್ಟ್‌

ಬೆಂಗಳೂರು: ಡ್ರಗ್ಸ್‌ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ನಟಿ ರಾಗಿಣಿ ದ್ವಿವೇದಿ ವಿರುದ್ಧ ಯಾವುದೇ ಸಾಕ್ಷ್ಯ…

2 hours ago

ಮಹಾಕುಂಭಮೇಳದಲ್ಲಿ ಕಮಾಲ್‌ ಮಾಡಿದ ಕೆಎಂಎಫ್‌: ಒಂದು ಕೋಟಿಗೂ ಅಧಿಕ ಟೀ ಮಾರುವ ಗುರಿ

ಪ್ರಯಾಗ್‌ ರಾಜ್:‌ ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ 10 ಟೀ ಪಾಯಿಂಟ್‌ ತೆರೆಯಲು ಕೆಎಂಎಫ್‌ ಒಪ್ಪಂದ ಮಾಡಿಕೊಂಡಿದೆ. ಇದರ ಜೊತೆಗೆ ನಂದಿನಿ…

2 hours ago

SUFC | ಇಂಟರ್‌ಸಿಟಿ ಫುಟ್ಬಾಲ್‌ ಪಂದ್ಯಾವಳಿಯಲ್ಲಿ ಪುಣೆ ಮೇಲುಗೈ

ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಲ್ಲಿ ನಡೆದ ಇಂಟರ್-ಸಿಟಿ ಪಂದ್ಯಾವಳಿಯಲ್ಲಿ ಪುಣೆ ತಂಡ ಐದು ವಿಭಾಗದಲ್ಲಿ ನಾಲ್ಕು ಪ್ರಶಸ್ತಿಗಳನ್ನು…

12 hours ago