ಮಂಡ್ಯ

ವಿಜೃಂಭಣೆಯಿಂದ ಜರುಗಿದ ಮಂಟೇಸ್ವಾಮಿ ಜಾತ್ರಾ ಮಹೋತ್ಸವ

ಕೆ.ಎಂ ದೊಡ್ಡಿ : ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಮದ್ದೂರು ತಾಲೂಕಿನ ಸುಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಠದ ಹೊನ್ನಾಯಕನಹಳ್ಳಿ ಗ್ರಾಮದ ಶ್ರೀ ಮಂಟೇಸ್ವಾಮಿ ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.

ಕೆ.ಎಂ ದೊಡ್ಡಿ ಸಮೀಪದ ಮಠದ ಹೊನ್ನನಾಯಕನಹಳ್ಳಿಯಲ್ಲಿ ಮಂಟೇಸ್ವಾಮಿ ದೀಪಾವಳಿ ಜಾತ್ರಾ ಮಹೋತ್ಸವವು ಮಂಟೇಸ್ವಾಮಿ ಕಪ್ಪಡಿ ರಾಚಪ್ಪಾಜಿ ಮಠದ ಮಠಾಧೀಪತಿಗಳಾದ ವರ್ಚಸ್ವಿ ಸಿದ್ದಲಿಂಗರಾಜೇಅರಸ್ ಅವರ ದಿವ್ಯ ಸಾನಿಧ್ಯದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಸಾಂಪ್ರಾದಾಯಿಕವಾಗಿ ವಿಶ್ವಕರ್ಮ ಸಮುದಾಯದವರಿಂದ ನಡೆದ ದೀಪಾವಳಿ ಜಾತ್ರೆಯ ವಿಶೇಷವಾಗಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ಬಸಪ್ಪ ದೇವರಿಗೆ ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯಗಳು ಮುಂಜಾನೆಯಿಂದಲೆ ಜರುಗಿತು. ಗ್ರಾಮದ ಹೊರವಲಯದಲ್ಲಿರುವ ದೊಡ್ಡ ಕೆರೆ ಸಮೀಪ ಮಂಟೇಸ್ವಾಮಿ ಬಸಪ್ಪ, ಕಂಡಾಯ, ಬಿರುದು ದೇರಿದಂತೆ ವಿವಿಧ ದೇವತೆಗಳ ಹೂವು ಹೊಂಬಾಳೆ ಕಾರ್ಯಕ್ರಮವು ಭಕ್ತಿ ಪ್ರಧಾನವಾಗಿ ನೆರವೇರಿಸಲಾಯಿತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಂಡಾಯ ಹಾಗೂ ಬಸವಪ್ಪ ಮೆರವಣಿಗೆ ರಾತ್ರಿಯಿಡಿ ನಡೆಯಿತು.

ಇದನ್ನು ಓದಿ: ಮಲೇಷ್ಯಾ ಆಸಿಯಾನ್ ಶೃಂಗ ಸಭೆ : ವರ್ಚುವಲ್ ಆಗಿ ಮೋದಿ ಭಾಗಿ

ದೇವಾಲಯದ ಇತಿಹಾಸ, ಮಂಟೇಸ್ವಾಮಿ ಹೆಸರು ನಾಮಕರಣಗೊಂಡ ಸ್ಥಳ:-
ಧರೆಗೆ ದೊಡ್ಡವರು ತಮ್ಮ ಶಿಷ್ಯರೊಡಗೂಡಿ ದಕ್ಷಿಣಾಭಿಮುಖವಾಗಿ ಆಗಮಿಸುವ ವೇಳೆ ಆದಿಹೊನ್ನಾಯಕನಹಳ್ಳಿಗೆ ಬರುತ್ತಾರೆ. ಅಲ್ಲಿ ತಮ್ಮ ಶಿಷ್ಯರನ್ನೆಲ್ಲ ಒಂದೆಡೆ ಬಿಟ್ಟು ಬಳೆ ಮುದ್ದಮ್ಮ ಎಂಬಾಕೆಯ ಮನೆಯ ಮುಂದೆ ಕೋರಣ್ಯದ ಭಿಕ್ಷಕ್ಕಾಗಿ ಬರುತ್ತಾರೆ. ಮುದ್ದಮ್ಮ ಹಟ್ಟಿಯಲ್ಲಿ ಆಗ ಹಾಲು ಕರೆಯುತ್ತಿರುತ್ತಾಳೆ. ಕಾಲಲ್ಲಿ ಜಂಗು, ಕೈಯಲ್ಲಿ ಕಂಡಾಯ ಹಿಡಿದು ಶಬ್ದ ಮಾಡಿಕೊಂಡು ಬಂದ ಧರೆಗೆ ದೊಡ್ಡವರನ್ನು ನೋಡಿ ಹಸು ಬೆದರಿ ಹಾಲಿನ ತಂಬಿಗೆಯನ್ನು ಒದೆಯುತ್ತದೆ. ಮುದ್ದಮ್ಮ ಸಿಟ್ಟಾಗಿ ಹಾಳಾದ ಮಂಟೋದಯ್ಯ ಮುಂದೆ ಹೋಗು ಎಂದು ನುಡಿಯುತ್ತಾಳೆ. ಹೆಸರಿಲ್ಲದ ನನಗೆ ಹೆಸರು ಕಟ್ಟಿದ್ದೀಯಾ ತಾಯಿ ಮುಂದೆ ಮಂಟೆಲಿಂಗಯ್ಯ ಎಂಬ ಹೆಸರು ನಾಮಕರಣವಾಗಲಿ ಎಂದು ಹೇಳಿ ಹೊನ್ನಾಯಕನಹಳ್ಳಿಯಲ್ಲಿ ಮುದ್ದಮ್ಮ ವಾಸವಿದ್ದ ಸ್ಥಳ ಇಂದು ಮಂಟೇಸ್ವಾಮಿ ಮಠವಾಗಿ ಸಾಂಪ್ರದಾಯಿಕವಾಗಿ ಮುಂದುವರೆಯುತ್ತಿದೆ.

ಗ್ರಾಮದಲ್ಲಿ ಆಕರ್ಷಕವಾದ ವಿದ್ಯುತ್‌ದೀಪಾಲಾಂಕಾರ
ದೀಪಾವಳಿ ಹಬ್ಬದ ಅಂಗವಾಗಿ ಹೊನ್ನಾಯಕನಹಳ್ಳಿ ಗ್ರಾಮದ ಉದ್ದಕ್ಕೂ ಹಸಿರು ತಳಿರು ತೋರಣದ ಜೊತೆಗೆ ಜಗಜಗಿಸುವ ವಿವಿಧ ಬಣ್ಣದ ವಿದ್ಯುತ್ ದೀಪಾಲಾಂಕಾರ ಮಾಡಲಾಗಿತ್ತು. ದೇವಸ್ಥಾನವನ್ನು ವಿವಿಧ ಹೂವುಗಳಿಂದ ಆಲಂಕರಿಸಲಾಗಿತ್ತು ಹೊರ ಜಿಲ್ಲೆ ಹಾಗೂ ಗ್ರಾಮಗಳಿಂದ ಅಗಮಿಸಿದ ಭಕ್ತರನ್ನ ಆಕರ್ಷಕವಾಗಿ ಮನಸೊರಗೊಳಿಸಿತು.

ಆಂದೋಲನ ಡೆಸ್ಕ್

Recent Posts

ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪ್ರಕರಣ: ಗಾಯಾಳು ರವಿಗೆ ಮುಂದುವರಿದ ಚಿಕಿತ್ಸೆ

ಪ್ರಶಾಂತ್‌ ಎನ್‌ ಮಲ್ಲಿಕ್‌  ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…

8 hours ago

ಕಾಫಿ ಮಳಿಗೆಯಲ್ಲಿದ್ದ ಹಣ ಕಳವು: ಆರೋಪಿ ಬಂಧನ

ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…

9 hours ago

ಕಾಡಾನೆ ದಾಳಿ: ಅಪಾರ ಪ್ರಮಾಣದ ಬೆಳೆ ನಾಶ

ಮಹಾದೇಶ್‌ ಎಂ ಗೌಡ  ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…

9 hours ago

ಬೆಂಗಳೂರಿನಲ್ಲೇ ಐಪಿಎಲ್ ಉದ್ಘಾಟನಾ ಪಂದ್ಯ

ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…

9 hours ago

ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ಪ್ರಕರಣ: ರಾಜೀವ್‌ ಗೌಡಗೆ ಹೈಕೋರ್ಟ್‌ ತರಾಟೆ

ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್‌ ತೀವ್ರ…

9 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾಗೌಡಗೆ ವಾರಕ್ಕೊಮ್ಮೆ ಮನೆ ಊಟ ಆದೇಶಕ್ಕೆ ತಡೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…

10 hours ago