ಮಂಡ್ಯ

ಮಂಡ್ಯ ಭ್ರೂಣಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

ಮಂಡ್ಯ: ಪಾಂಡವಪುರ ತಾಲೂಕಿನ ಆರೋಗ್ಯಾಧಿಕಾರಿಗಳ ಕಚೇರಿ ಹಿಂಬದಿಯ ವಸತಿ ಗೃಹದಲ್ಲಿ ಇತ್ತೀಚೆಗೆ ನಡೆದಿದ್ದ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜು. 11 ರಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಮದ ಸಿಂಗೇಗೌಡರ ಮಗ ಉಮೇಶ್ ಬಂಧಿತ ಆರೋಪಿ. ಇದೇ
ಪ್ರಕರಣದಲ್ಲಿ ಮತ್ತೊಬ್ಬ ಪ್ರಮುಖ ಆರೋಪಿ ಅಭಿಲಾಷ್ ಎಂಬಾತನ ಸೋದರ ಮಾವನಾಗಿರುವ ಈತ ಭ್ರೂಣ ಹತ್ಯೆಗೆ ಒಳಗಾಗುವವನ್ನು ಗುರುತಿಸಿ, ಅಬಾಷನ್‌ ಮಾಡಿಸುವ ಮಹಿಳೆಯರನ್ನು ಕರೆತರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿರುವ ಶೃತಿ ಮತ್ತು ಆಶಾ ಅವರಿಗೆ ಮಹಿಳೆಯರನ್ನು ಪರಿಚಯಿಸಿ, ಅಬಾಷನ್‌ಕ್ಕೆ ಒಳಪಡಿಸುತ್ತಿದ್ದರು ಎನ್ನಲಾಗಿದೆ.

ಇತ್ತೀಚೆಗೆ ದೇವೇಗೌಡನಕೊಪ್ಪಲು ಗ್ರಾಮದ ಮಹಿಳೆಯೊಬ್ಬರಿಗೆ ತಮ್ಮ ಮನೆಯ ಕೊಠಡಿಯಲ್ಲಿ ಭ್ರೂಣ ಹತ್ಯೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದು,ಪ್ರಕರಣದ ಜಾಡು ಹಿಡಿದು ತನಿಖೆ ನಡೆಸುತ್ತಿದ್ದ ಸಬ್‌ಇನ್ಸ್ಪೆಕ್ಟರ್ ಆರ್.ಬಿ.ಉಮೇಶ್ ಅವರ ತಂಡ ಆರೋಪಿಯನ್ನು ಅವರ ಸ್ವತಃ ಮನೆಯಲ್ಲೇ ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ ಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ: ಹಗಲು ದರೋಡೆಯಲ್ಲದೆ ಇನ್ನೇನು?

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ವಾಣಿಜ್ಯ ಸಿಲಿಂಡರ್ ಅಭಾವ…

28 mins ago

ಓದುಗರ ಪತ್ರ: ಯುದ್ಧದ ಪರಿಣಾಮದಿಂದ ಜೀವನ ಕಷ್ಟ..ಕಷ್ಟ…

ಇರಾನ್-ಅಮೆರಿಕ-ಇಸ್ರೇಲ್ ಯುದ್ಧವು ೩೭ನೇ ದಿನಕ್ಕೆ ಕಾಲಿಟ್ಟಿದೆ. ಇದರ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆಗಳು ಕಣ್ಣೀರು ತರಿಸುತ್ತಿದೆ. ಎಲ್‌ಪಿಜಿ ಗ್ಯಾಸ್…

30 mins ago

ಓದುಗರ ಪತ್ರ: ಯುದ್ಧದ ಉನ್ಮಾದದಿಂದ ಹೊರಬರಲಿ

ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಶುರುವಾಗಿ ತಿಂಗಳೇ ಕಳೆದರೂ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಯುದ್ಧದ ಭೀಕರತೆ ದಿನೇ…

32 mins ago

ಸಾಂಪ್ರದಾಯಿಕ ಸೊಗಡು ಸಾಕ್ಷೀಕರಿಸಿದ ಕೂತಿನಾಡು ಸುಗ್ಗಿ ಉತ್ಸವ

ಲಕ್ಷ್ಮೀಕಾಂತ್ ಕೋಮಾರಪ್ಪ ಗ್ರಾಮದೇವತೆ ಸಬ್ಬಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆ, ಬೆಳೆಗಾಗಿ ಪ್ರಾರ್ಥನೆ ಸೋಮವಾರಪೇಟೆ: ಗ್ರಾಮೀಣ ಭಾಗದ ಆಚರಣೆಗಳಲ್ಲಿ…

3 hours ago

ಇಂದು ಚಿಕ್ಕರಸಿನಕೆರೆ ಕಾಲಭೈರವೇಶ್ವರ ಬಸವ ರಥೋತ್ಸವ

ಅಣ್ಣೂರುಸತೀಶ್ ಶ್ರೀಆದಿಚುಂಚನಗಿರಿ ಮಠದ ನೇತೃತದಲ್ಲಿ ಅದ್ಧೂರಿ ಜಾತ್ರೆ ಭಾರತೀನಗರ: ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರಸ್ವಾಮಿ ಪುಣ್ಯಕ್ಷೇತ್ರವು ದಕ್ಷಿಣ ಕಾಶಿಯೆಂದೇ ಪರಿಚಿತವಾಗಿ ಹಲವಾರು…

3 hours ago

ಕರಿಯಮ್ಮ ದೊಡ್ಡಮ್ಮ ದೇವಿ ಜಾತ್ರೋತ್ಸವಕ್ಕೆ ಭೇರ್ಯ ಸಜ್ಜು

ಭೇರ್ಯ ಮಹೇಶ್ ಇಂದು ಭೇರ್ಯದಲ್ಲಿ ಕರಿಯಮ್ಮ ದೊಡ್ಡಮ್ಮ ದೇವಿ ಸಿಡಿ ಉತ್ಸವ, ನಾಳೆ ಜಾತ್ರಾ ಮಹೋತ್ಸವ  ಭೇರ್ಯ: ಭೇರ್ಯ ಗ್ರಾಮದ…

4 hours ago