ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ದಾಸರಗುಪ್ಪೆ ಗ್ರಾಮದ ರೈತ ಶ್ರೀಕಂಠೇಗೌಡ ಎಂಬುವವರ ಜಮೀನಿನಲ್ಲಿ ಕಬ್ಬು 23 ಅಡಿ ಎತ್ತರ ಬೆಳೆದಿದ್ದು, ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.
ಶ್ರೀಕಂಠೇಗೌಡ ಅವರು ಬೆಳೆದಿರುವ ವಿಸಿಎಫ್-0517 ತಳಿಯ ಕಬ್ಬು ಇದಾಗಿದ್ದು, 23 ಅಡಿ ಬೆಳೆದು ನಿಂತಿದೆ. ಒಂದು ಜೊಲ್ಲೆ ಕಬ್ಬಿನಲ್ಲಿ 40 ಗಿಣ್ಣುಗಳು ಬಂದಿದ್ದು, ರೈತರಿಗೆ ಆಶ್ಚರ್ಯವಾಗಿದೆ. ಕಬ್ಬು ಕಡಿಯುವ ಕೃಷಿ ಕಾರ್ಮಿಕರನ್ನು ಸಹ ಇದು ಚಕಿತಗೊಳಿಸಿದೆ.
ಈ ಬಗ್ಗೆ ಖುಷಿ ಹಂಚಿಕೊಂಡಿರುವ ರೈತ ಶ್ರೀಕಂಠೇಗೌಡ ಅವರು, ಸಾವಯವ ಗೊಬ್ಬರಗಳಿಂದಲೇ ಈ ರೀತಿ ಕಬ್ಬು ಬೆಳೆದಿದೆ. ಯಾರೂ ಕೂಡ ಅತಿಯಾದ ರಾಸಾಯನಿಕಗಳನ್ನು ಬಳಸಬೇಡಿ ಎಂದು ಇತರ ರೈತರಿಗೆ ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಕೃಷಿ ಸಲಹೆಗಾರ ಜಿ.ಪಿ.ಮೂರ್ತಿ ಸಲಹೆ ನೀಡಿದ್ದು, ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ಬೆಳೆಗಳ ಬುಡಕ್ಕೆ ಹಾಕುವ ಮತ್ತು ಎಲೆಗಳಿಗೆ ಸಿಂಪಡಿಸುವ ಸಾವಯವ ಗೊಬ್ಬರಗಳು ಕಡಿಮೆ ಬೆಲೆಗೆ ಸಿಗಲಿದ್ದು, ರೈತರು ಅಂತಹ ಗೊಬ್ಬರಗಳನ್ನು ಬಳಸಬೇಕು. ಆಗ ಮಾತ್ರ ಪೌಷ್ಠಿಕಾಂಶ ದೊರಕುವುದಲ್ಲದೇ ಭೂಮಿಯ ಫಲವತ್ತತೆ ಹಾಳಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಕಠ್ಮಂಡು : ನೇಪಾಳದ ರಾಷ್ಟ್ರೀಯ ಸ್ವತಂತ್ರ ಪಕ್ಷದ ಹಿರಿಯ ನಾಯಕ ಬಾಲೇಂದ್ರ ಶಾ ಅವರು ದೇಶದ ನೂತನ ಪ್ರಧಾನಿಯಾಗಿ ಇಂದು(ಮಾರ್ಚ್.27)…
ಮಂಡ್ಯ : ವೈರಮುಡಿ ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಭದ್ರತೆಗಾಗಿ ಸೂಕ್ತ ಕ್ರಮಗಳನ್ನು…
ಬೆಂಗಳೂರು : ಬೆಂಗಳೂರು ಉತ್ತರ ತಾಲ್ಲೂಕು ಜಾರಕಬಂಡೆ ಶ್ರೀಗಂಧದ ಕಾವಲ್‌ನಲ್ಲಿ ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯಭೂಮಿಯ ಮರು ವಶಕ್ಕೆ…
ಬೆಂಗಳೂರು : ವಿದ್ಯಾರ್ಥಿಗಳಿಗೆ ಹಿಂದಿ ಪಾಸ್ ಕಡ್ಡಾಯ ಮಾಡದಂತೆ ಕನ್ನಡಪರ ಸಂಘಟನೆಗಳಿಂದ ಒತ್ತಾಯ ಕೇಳಿಬಂದ ಬೆನ್ನಲ್ಲೇ ರಾಜ್ಯದಲ್ಲಿ ದ್ವಿಭಾಷಾ ಸೂತ್ರ…
ಬೆಂಗಳೂರು : ಬೆಂಗಳೂರು ಉತ್ತರ ತಾಲ್ಲೂಕು ಜಾರಕಬಂಡೆ ಶ್ರೀಗಂಧದ ಕಾವಲ್‌ನಲ್ಲಿ ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯಭೂಮಿಯ ಮರು ವಶಕ್ಕೆ…
ಹೊಸದಿಲ್ಲಿ : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಆತಂಕ ಸೃಷ್ಠಿಯಾಗಿರುವ ನಡುವೆ ಕೇಂದ್ರ…