ಮಂಡ್ಯ

ಮಳವಳ್ಳಿ | ಜಾತ್ರೆ ವೇಳೆ ಅವೈಜ್ಞಾನಿಕ ಆಚರಣೆ ರದ್ದತಿಗೆ ಒತ್ತಾಯ

ಮಂಡ್ಯ: ಮಳವಳ್ಳಿ ತಾಲೂಕಿನ ಗುಂಡಾಪುರ ಗ್ರಾಮದಲ್ಲಿನ ಬೆಟ್ಟದರಸಮ್ಮ ದೇವಾಲಯದ ಜಾತ್ರೆಯ ವೇಳೆ ಅನಾಗರೀಕ ಹಾಗೂ ಅವೈಜ್ಞಾನಿಕ ಆಚರಣೆಗಳನ್ನು ರದ್ದುಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಗ್ರಾಮದ ಮಹೇಶ್ ಒತ್ತಾಯಿಸಿದರು.

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ದೇವಾಲಯದ ಅರ್ಚಕ, ಯಜಮಾನ ಬೋರಯ್ಯ ಸೇರಿದಂತೆ ಹಲವರು ಗ್ರಾಮದಲ್ಲಿ ತಮ್ಮದೇ ಕಾನೂನು ಕಟ್ಟಳೆಗಳನ್ನು ನಿರ್ಮಿಸಿ ಒಂದೊಂದು ದಿನ ಒಂದೊಂದು ಉತ್ಸವ ಆಚರಿಸುತ್ತಿದ್ದಾರೆ ಎಂದರು.

ಗ್ರಾಮದೇವತೆಗೆ ಪ್ರಿಯವಾದುದೆಂದು ಹೇಳಿ ಹಬ್ಬ ಆಚರಿಸು ೭ ಗ್ರಾಮದ ಜನಸ್ತೋಮದ ಮೇಲೆ ಹೆಂಡ, ಗಾಂಜಾ ಸೇವನೆ ಮಾಡಿದ ಗೂಳಿಯನ್ನು ಬಿಡುವುದು, ಬಾಯಿ ಚುಚ್ಚಿಕೊಂಡು ೨ ಕಿ.ಮೀ ನಡೆದುಕೊಂಡು ಹೋಗುವುದು, ಮುಟ್ಟಾದ ಮಹಿಳೆಯರನ್ನು, ಸಾವಾದ ಮನೆಯ ಕುಟುಂಬದವರನ್ನು ಗ್ರಾಮದಿಂದ ಹೊರಗಿಡುವುದು, ಗ್ರಾಮದ ಅರ್ಚಕರಿಗೆ ೧೦ ಸಾವಿರ ಹಣ ನೀಡಿ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡುವುದು ಸೇರಿದಂತೆ ಹಲವು ಅಕ್ರಮಗಳು ದೈವದ ಹೆಸರಿನಲ್ಲಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ದೈವದ ಹೆಸರಿನಲ್ಲಿ ಗ್ರಾಮದಲ್ಲಿ ಅಕ್ರಮಗಳನ್ನು ನಡೆಸುತ್ತಿರುವುದರಿಂದ ಗ್ರಾಮದಲ್ಲಿ ಅಶಾಂತಿಯುಂಟಾಗಿದ್ದು, ನೆಪ ಮಾತ್ರಕ್ಕೆ ಹಬ್ಬದ ಆಚರಣೆ ಮಾಡಲಾಗುತ್ತಿದೆ. ಆದ್ದರಿಂದ ಜಿಲ್ಲಾಡಳಿತ, ಚುನಾಯಿತ ಜನಪ್ರತಿನಿಧಿಗಳು ಕೂಡಲೇ ರದ್ದುಗೊಳಿಸುವ ಕ್ರಮ ವಹಿಸಿ, ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಗ್ರಾಮಸ್ಥರೆಲ್ಲರೂ ನೆಮ್ಮದಿಯಿಂದ ಜಾತ್ರಾಮಹೋತ್ಸವವನ್ನು ಆಚರಿಸಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

45 mins ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

2 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

4 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

4 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

5 hours ago

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

10 hours ago