ಮಂಡ್ಯ

ಮದ್ದೂರು ಗಲಭೆ | ಲಾಠಿ ಏಟು ತಿಂದಿದ್ದ ಮಹಿಳೆ ವಿರುದ್ಧ ಎಫ್‌ಐಆರ್‌

ಮದ್ದೂರು : ಕಳೆದ ಭಾನುವಾರ ಸಂಜೆ ಗಣೇಶ ವಿಸರ್ಜನೆಯ ವೇಳೆ ನಡೆದ ಗಲಭೆ ಬಳಿಕ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಲಾಠಿ ಏಟು ತಿಂದಿದ್ದ ಮಹಿಳೆ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಸಿಎಂ ಮತ್ತು ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆ ಶಿವಪುರ ನಿವಾಸಿ ಜ್ಯೋತಿ ಅವರ ವಿರುದ್ಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಠಾಣಾ ಇನ್‌ಸ್ಪೆಕ್ಟರ್‌ ಶಿವಕುಮಾರ್‌ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಅನ್ಯಧರ್ಮದ ವಿಚಾರವಾಗಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಪರಸ್ಪರ ಕೋಮುಗಳ ನಡುವೆ ವೈಮನಸ್ಸು, ವೈರತ್ವಕ್ಕೆ ಉತ್ತೇಜನ ನೀಡುವ ಆರೋಪದಲ್ಲಿ ಎಫ್‌ಐಆರ್‌ ಮಾಡಲಾಗಿದೆ.

ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲುತೂರಾಟದ ಘಟನೆ ಉದ್ವಿಗ್ನತೆಗೆ ಕಾರಣವಾಗಿತ್ತು. ಮಾರನೇ ದಿನ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ಲಾಠಿ ಚಾರ್ಚ್‌ ನಡೆಸಿದ್ದರು. ಆಗ ಮಹಿಳೆ ಜ್ಯೋತಿ ಕೂಡ ಲಾಠಿ ಏಟು ತಿಂದಿದ್ದರು. ಈ ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್‌ ಆಗಿತ್ತು.

ಮೈಸೂರಲ್ಲೂ ಜ್ಯೋತಿ ವಿರುದ್ಧ ದೂರು ದಾಖಲು
ಮೈಸೂರು: ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕಲ್ಲುತೂರಾಟದ ಬಳಿಕ ಬಿಜೆಪಿ ಮತ್ತು ಸಂಘ ಪರಿವಾರದವರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಜ್ಯೋತಿ ಎಂಬವರ ವಿರುದ್ಧ ಮೈಸೂರಿನಲ್ಲಿ ದೂರು ನೀಡಲಾಗಿದೆ.

ಮೈಸೂರು ನಗರ ೧೨ನೇ ವಾರ್ಡ್ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಜುನೇದ್ ಎಂಬವರು ಗುರುವಾರ ಬೆಳಿಗ್ಗೆ ಎರಡು ಪ್ರತ್ಯೇಕ ದೂರುಗಳನ್ನು ನೀಡಿದ್ದು, ಮೊದಲ ದೂರಿನಲ್ಲಿ ಮದ್ದೂರಿನಲ್ಲಿ ಸೆ.೮ ರಂದು ಗಣಪತಿ ವಿಸರ್ಜನಾ ಸ್ಥಳದಲ್ಲಿ ಕಲ್ಲು ತೂರಾಟ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ನಂತರ ನಡೆದ ಬಿಜೆಪಿ ಮತ್ತು ಸಂಘ ಪರಿವಾರದ ಪ್ರತಿಭಟನಾ ಮೆರವಣಿಗೆಯಲ್ಲಿ ಜ್ಯೋತಿ ಎಂಬಾಕೆಯು ಮುಸ್ಲಿಮರ ವಿರುದ್ಧ ಅತ್ಯಂತ ತುಚ್ಛಪದಗಳಿಂದ ನಿಂದನೆ ಮಾಡಿ ಸಮುದಾಯಕ್ಕೆ ಅಪಮಾನ ಮಾಡಿದ್ದು, ಭಯದ ವಾತಾವರಣ ಉಂಟು ಮಾಡಿದ್ದಾರೆ. ಇವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅವರು ದೂರಿನಲ್ಲಿ ಕೋರಿದ್ದಾರೆ.

ಪ್ರತಿಭಟನಾ ಮೆರವಣಿಗೆಯಲ್ಲಿ ಮುಸ್ಲಿಮರ ವಿರುದ್ಧ ಸಾರ್ವಜನಿವಾಗಿ ಅವಾಚ್ಯ ಶಬ್ದಗಳ ಬಳಕೆಯಿಂದ ಮುಸ್ಲಿಂ ಸಮುದಾಯದವರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆಗೂ ಧಕ್ಕೆ ಉಂಟಾಗಿದೆ. ಜನರಲ್ಲಿ ಭಯ ಹಾಗೂ ಗೊಂದಲ ಸೃಷ್ಟಿಯಾಗಿದೆ. ಇಂತಹ ಕೃತ್ಯವು ಸಾರ್ವಜನಿಕ ಶಾಂತಿಗೆ ಭಂಗ ತಂದಿದ್ದು, ಮೇಲ್ಕಂಡ ಕಲ್ಲು ತೂರಾಟ ನಡೆಸಿದವರ ಮತ್ತು ಮುಸ್ಲಿಮರಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಜುನೇದ್ ಒತ್ತಾಯಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಅನಿಲ ಸಿಲಿಂಡರ್ ಬೆಲೆ ಏರಿಕೆ ತರವಲ್ಲ

ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ರೂ.೬೦…

14 mins ago

ಓದುಗರ ಪತ್ರ: ಮೈಸೂರು ಆಕಾಶವಾಣಿ ಪ್ರಸರಣ ಸಾಮರ್ಥ್ಯ ಹೆಚ್ಚಿಸಿ

ಭಾರತದಲ್ಲೇ ಮೊದಲ ಆಕಾಶವಾಣಿ ಕೇಂದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರಿನ ಆಕಾಶವಾಣಿ ಕೇಂದ್ರ ೯೦ ವಸಂತಗಳನ್ನು ಪೂರೈಸಿದ್ದು, ಪ್ರಭಾವಿ ಸಾರ್ವಜನಿಕ…

17 mins ago

ಓದುಗರ ಪತ್ರ: ಆಟ… ಕಿರೀಟ !

ಟಿ-೨೦ವಿಶ್ವಕಪ್‌ನಲ್ಲಿ ಕಿವೀಸ್ ಕಿವಿ ಹಿಂಡಿದ ಇಂಡಿಯಾ ಆಡಿದ್ದು ದಾಖಲೆಗಳ ಆಟ ! ಅದಕ್ಕೇ ಒಲಿಯಿತು ಭಾರತಕ್ಕೆ ವಿಶ್ವಕಪ್ ಕಿರೀಟ !…

19 mins ago

ಓದುಗರ ಪತ್ರ: ಕೊಲ್ಲಿ ಯುದ್ಧ: ವಿಶ್ವ ಸಂಸ್ಥೆಯ ಮೌನವೇಕೆ?

ಇರಾನ್ ಮೇಲೆ ಇಸ್ರೇಲ್-ಅಮೆರಿಕ ರಾಷ್ಟ್ರಗಳು ಯುದ್ಧ ನಡೆಸುತ್ತಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿ ಅವರನ್ನು ಹತ್ಯೆ ಮಾಡಿವೆ. ಇದರಿಂದ…

21 mins ago

ಓದುಗರ ಪತ್ರ: ಕಾಲೇಜು ಮೈದಾನದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಬೇಡ

ಮೈಸೂರಿನ ಮಹಾರಾಜ ಕಾಲೇಜಿಗೆ ೧೩೭ ವರ್ಷಗಳ ಇತಿಹಾಸವಿದೆ. ಕಾಲೇಜಿನಲ್ಲಿ ಉತ್ತಮ ಬೋಧನಾ ವ್ಯವಸ್ಥೆಯೂ ಇದ್ದು, ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಇಲ್ಲಿ…

24 mins ago

ಗೂಗಲ್ ಮಹಾತ್ಮೆ: ಗೂಗಲ್ ಮಾತ್ರ ಸತ್ಯ, ಉಳಿದೆಲ್ಲವೂ ಮಿಥ್ಯ?

ರಮಾನಂದ ಶರ್ಮ ಯಾವುದೋ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಟೆಕ್ಕಿಯೊಬ್ಬರು ವೈದ್ಯರ ಬಳಿ ಹೋಗಿದ್ದರಂತೆ. ವೈದ್ಯರು ಅವರನ್ನು ಸ್ಥೂಲವಾಗಿ ಪರೀಕ್ಷಿಸಿ, ಮೂರು…

3 hours ago