ಮಂಡ್ಯ : ಮದ್ದೂರಿನಲ್ಲಿ ಭಾನುವಾರ ಸಂಜೆ ಗಣಪತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಮಾಧಾನದಿಂದ ಹೋರಾಟ ಮಾಡುವಂತೆ ಹಿಂದೂ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಹೋರಾಟಗಾರರನ್ನ ಉದ್ದೇಶಿಸಿ ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಹೋರಾಟದಲ್ಲಿ ಬೆಂಬಲವಾಗಿ ನಿಂತಿರುವ ಜೆಡಿಎಸ್ ಮುಖಂಡರು, ನಿಖಿಲ್ ಕುಮಾರಸ್ವಾಮಿ, ಎಚ್‌ಡಿ ಕುಮಾರಸ್ವಾಮಿಗೆ ಹಾಗೂ ಪಕ್ಷಾತೀತವಾಗಿ ಬಂದಿರುವ ಕಾಂಗ್ರೆಸ್ ಕಾರ್ಯಕರ್ತರೇ ಎಂದು ಭಾಷಣದಲ್ಲಿ ಉಲ್ಲೇಖಿಸಿದರು.
ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆದಾಗ ಚಾಮುಂಡಿಗೆ ಅವಮಾನ ಮಾಡಿದ್ರು, ಮಹಿಷ ದಸರಾ ಮಾಡಲು ಮುಂದಾಗಿದ್ರು ಅದನ್ನ ಮೆಟ್ಟಿ ನಿಂತಿದ್ದೇವೆ. ಇದೇ ರೀತಿ ಇಲ್ಲೂ ಹೋರಾಟಗಳು ಆಗಬೇಕು ಎಂದು ಭಾಷಣದ ವೇಳೆ ಹೋರಾಟಗಾರರನ್ನು ಆಗ್ರಹ ಮಾಡಿದರು.
ಇದನ್ನು ಓದಿ: ಧರ್ಮಸ್ಥಳ, ಚಾಮುಂಡೇಶ್ವರಿ ಆಯ್ತು ಈಗ ಮದ್ದೂರು ಸರದಿ: ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿ
ಇದೇ ವೇಳೆ, ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್ ಕರೆಸುವಂತೆ ಒತ್ತಾಯ ಮಾಡಿದ ಪ್ರತಾಪ್ ಸಿಂಹ, ಚುನಾವಣೆ ಸಂದರ್ಭ ಉದಯ್ ಕಾಸಿಗೆ ಓಟ್ ಹಾಕಿಬಿಡ್ತಿರಿ, ಜೂಜಾಡಿಸೋರಿಗೆ ಓಟ್ ಹಾಕಿ ಯೋಗಿ ಆದಿತ್ಯನಾಥ್ ಬೇಕು ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.
ಈ ಹಿಂದೆ ನಾನು ಹೇಳಿದ್ದೆ ಕಾಂಗ್ರೆಸ್ ಗೆ ಓಟ್ ಹಾಕಿದ್ರೆ ಕನ್ನಡದ ಸರ್ಕಾರ ಅಲ್ಲಾ ತಾಲಿಬಾನ್ ಸರ್ಕಾರ ನಿರ್ಮಾಣ ಆಗತ್ತೆ ಅಂತ. ಮುಸ್ಲಿಮರು ಎಂದೂ ಶಾಂತಿಯಿಂದ ಇಲ್ಲ, ಇಲ್ಲಿ ಅನ್ನ ತಿಂದು ಗಡಿ ಆಚೆಗಿನ ನಿಷ್ಠೆ ತೋರಿಸ್ತಾರೆ ಎಂದು ಕಿಡಿಕಾರಿದರು.
ಮಸೀದಿಯ ಒಳಗೆ ಕಲ್ಲು ಹೇಗೆ ಬಂತು? ಕಲ್ಲು ತಂದ ಮುಲ್ಲಾ ಯಾರು? ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಅದರ ಬಗ್ಗೆ ತನಿಖೆ ಆಗಬೇಕು. ಹೆಣ್ಣು ಮಕ್ಕಳ ಮೇಲೆ ಲಾಠಿ ಪ್ರಹಾರ ಮಾಡಿದವರ ವಿರುದ್ದ ಕ್ರಮ ಆಗಬೇಕು. ನಮ್ಮ ಹುಡುಗ್ರು ಯಾರೂ ಕಲ್ಲು ಹೊಡೆಯುವ ಸಂಸ್ಕೃತಿ ಇಲ್ಲ, ಆ ಮಸೀದಿಯ ಮುಲ್ಲನನ್ನ ಅರೆಸ್ಟ್ ಮಾಡಬೇಕು. ಮಸೀದಿ ಸೀಜ್ ಮಾಡಬೇಕು. ಮಸೀದಿ ಮುಚ್ಚಿಸುವ ಭರವಸೆ ಕೊಟ್ರೆ ಪ್ರತಿಭಟನೆ ಕೈಬಿಡ್ತೀವಿ ಎಂದು ಹೇಳಿದರು.
ಬೆಂಗಳೂರು: ರಾಜ್ಯದಲ್ಲಿ ಇರುವ 50 ವರ್ಷ ಹಳೆಯ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಬದಲಾವಣೆ ಮಾಡಲು ನಮ್ಮ ಸರ್ಕಾರ ನಿರ್ಧಾರ ಮಾಡಿದೆ…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಸಚಿವ ಮುನಿಯಪ್ಪ ಪ್ರತಿಕ್ರಿಯೆ…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗದ ದೇವಸ್ಥಾನಗಳ ಕಳ್ಳತನ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ…
ವಿವಾಹದ ಬಳಿಕ ಭಾರೀ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿಯೇ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇಲ್ಲಿ ತನಕ ನನಗೆ…
ಮಡಿಕೇರಿ: ಅನೈತಿಕ ಸಂಬಂಧ ಹಿನ್ನೆಲೆ ಸಹೋದರಿ ಹಾಗೂ ಆಕೆಯ ಜೊತೆ ಸಹ ಜೀವನ ನಡೆಸುತ್ತಿದ್ದ ವ್ಯಕ್ತಿಯನ್ನು ೭೦ ವರ್ಷದ ವೃದ್ಧ…
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜುಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು…