ಮಂಡ್ಯ: ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅಸ್ತಿಯನ್ನು ಇಂದು ವಿಸರ್ಜನೆ ಮಾಡಲಾಯಿತು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗೋಸಾಯಿಘಾಟ್ ಬಳಿಯಿರುವ ಕಾವೇರಿ ನದಿಯಲ್ಲಿ ನಟ ಸುದೀಪ್ ಅವರು, ತಾಯಿ ಸರೋಜಾ ಅವರ ಅಸ್ತಿ ವಿಸರ್ಜಿಸಿ ಸದ್ಗತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇಂದಿನ ವಿಧಿ ವಿಧಾನ ಕಾರ್ಯದಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ಅಸ್ತಿ ವಿಸರ್ಜನೆ ಕಾರ್ಯವನ್ನು ಚಿತ್ರೀಕರಿಸದಂತೆ ಮಾಧ್ಯಮಗಳಿಗೆ ಸುದೀಪ್ ಮನವಿ ಮಾಡಿದ್ದರು. ಬಳಿಕ ಅಸ್ತಿ ವಿಸರ್ಜನೆ ಕಾರ್ಯ ಮುಗಿಸಿ ಸುದೀಪ್ ಹಾಗೂ ಕುಟುಂಬಸ್ಥರು ಬೆಂಗಳೂರಿಗೆ ತೆರಳಿದರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್ ತಾಯಿ ಅರೋಜಾ ಅವರು ಕಳೆದ ಭಾನುವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದರು. ಅಂದು ಸಂಜೆಯ ವೇಳೆಗೆ ವಿಲ್ಸನ್ ಗಾರ್ಡನ್ ಚೀತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತ್ತು.
ದಾವಣಗೆರೆ: ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ಭರವಸೆಯಿದ್ದು, ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ…
ಭೇರ್ಯ ಮಹೇಶ್: ಕೆ.ಆರ್.ನಗರ ತಾಲ್ಲೂಕು ವರದಿಗಾರರು ಕೆ.ಆರ್.ನಗರ : ಜಾತಿ ಬೇದವಿಲ್ಲದೆ ನೊಂದವರಿಗೆ ದ್ವನಿಯಾಗಿ, ಸಂಕಷ್ಟದಲ್ಲಿರುವವರುಗೆ ಆರ್ಥಿಕ ನೆರವು ನೀಡಿ,…
ಮಂಡ್ಯ: ಮಾರ್ಚ್.28ರಂದು ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ 140 ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಜಾತ್ರಾ…
ಟೆಹರಾನ್: ನಾವು ನೀಡಿದ ಎಚ್ಚರಿಕೆಗೆ ತಲೆಬಾಗಿ ಅಮೇರಿಕಾ ಈಗ ಕದನ ವಿರಾಮ ಘೋಷಣೆ ಮಾಡಿದ ಎಂದು ಇರಾನ್ ತಿರುಗೇಟು ನೀಡಿದೆ.…
ಮಂಡ್ಯ: ಕೃಷಿ ಹೊಂಡದಲ್ಲಿ ಈಜಲು ಹೋಗಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಂದೀಪುರ ಗ್ರಾಮದಲ್ಲಿ ನಡೆದಿದೆ.…
ಬೆಂಗಳೂರು: ಕಳೆದ ವರ್ಷ ಕೃಷಿ ಇಲಾಖೆಯ ಸಮಾರು 945 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯನ್ನು…